ETV Bharat / state

ಚಿಕ್ಕಮಗಳೂರಿನಲ್ಲೊಬ್ಬ ಶ್ವಾನ ರಕ್ಷಕ: ಹೇಗಿದೆ ಇವರ  ಪ್ರೀತಿ ? ನೀವೇ ನೋಡಿ

ಚಿಕ್ಕಮಗಳೂರು ನಗರದ ಉಮಾ ಶಂಕರ್ ಎಂಬುವವರು ಕಳೆದ ಐದು ವರ್ಷಗಳಿಂದ ಬೀದಿ ನಾಯಿಗಳಿಗೆ ನಿತ್ಯ ಆಹಾರ ನೀಡುತ್ತಾ ಬಂದಿದ್ದಾರೆ

uma shankar providing food for street dogs
ಶ್ವಾನಪ್ರಿಯ ಉಮಾ ಶಂಕರ್
author img

By

Published : May 8, 2020, 4:35 PM IST

Updated : May 8, 2020, 5:20 PM IST

ಚಿಕ್ಕಮಗಳೂರು : ನಗರದ ಉಮಾ ಶಂಕರ್​ ಎಂಬಾತ ನಿತ್ಯ ನೂರಾರು ಬೀದಿ ನಾಯಿಗಳಿಗೆ ಊಟ ನೀಡುವುದರ ಮೂಲಕ ಮಾನವೀಯತೆ ಮೆರೆದಿದ್ದಾರೆ.

ವೆಲ್ಡಿಂಗ್ ಶಾಪ್ ಇಟ್ಟುಕೊಂಡಿರುವ ಉಮಾ ಶಂಕರ್​ ಗೆ ನಾಯಿಗಳೆಂದರೆ ಪಂಚ ಪ್ರಾಣ, ಒಂದು ವೇಳೆ ತಾನು ಊಟ ಮಾಡುವುದು ಮರೆತರೂ ಬೀದಿ ನಾಯಿಗಳಿಗೆ ಊಟ, ಬ್ರೆಡ್, ಬಿಸ್ಕೆಟ್ ಹಾಕೋದು ಮರೆಯುವುದಿಲ್ಲವಂತೆ. ಇವರ ಈ ಶ್ವಾನ ಪ್ರೀತಿ ಇಂದು ನಿನ್ನೆಯದಲ್ಲ ಬರೋಬ್ಬರಿ ಐದು ವರ್ಷಗಳಿಂದ ನಡೆದುಕೊಂಡು ಬಂದಿದೆ.

ಶ್ವಾನಪ್ರಿಯ ಉಮಾ ಶಂಕರ್

ನಿತ್ಯ ಸಂಜೆ 5 ರಿಂದ 7 ರವರೆಗೆ ಬರೋಬ್ಬರಿ 2 ಗಂಟೆಗಳ ಕಾಲ ಸುಮಾರು 100 ಕ್ಕೂ ಅಧಿಕ ಬೀದಿ ನಾಯಿಗಳಿಗೆ ಊಟ ಹಾಕುತ್ತಾರೆ. ಇದಕ್ಕಾಗಿ ಅವರು ಪ್ರತಿದಿನ 500 ರೂ. ಖರ್ಚು ಮಾಡುತ್ತಾರೆ. ಲಾಕ್​ಡೌನ್ ವೇಳೆಯಲ್ಲಿ ನಗರದ ಹೋಟೆಲ್​ಗಳೆಲ್ಲ ಬಂದ್​ ಆಗಿವೆ, ಹೀಗಾಗಿ ನಗರದ ಬೀದಿ ನಾಯಿಗಳೆಲ್ಲ ಊಟವಿಲ್ಲದೇ ಪರದಾಡಬಾರದೆಂದು ಕೊರೊನಾ​ ನಡುವೆಯೂ ನಾಯಿಗಳಿಗೆ ಊಟ ಹಾಕುತ್ತಿದ್ದಾರೆ.

ಮನೆಯಲ್ಲಿ ಕೂಡ 3 ಡ್ಯಾಶ್ ಎಂಡ್ ನಾಯಿಗಳನ್ನು ಸಾಕಿರುವ ಇವರಿಗೆ, ಬೀದಿ ನಾಯಿಗಳ ಮೇಲೆ ವಿಶೇಷ ಕಾಳಜಿ ಮತ್ತು ಪ್ರೀತಿ ಹೊಂದಿದ್ದಾರೆ.

Last Updated : May 8, 2020, 5:20 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.