ETV Bharat / state

ಚಿಕ್ಕಮಗಳೂರು: ಗೃಹಿಣಿ ಅನುಮಾನಾಸ್ಪದ ಸಾವು.. ಪತಿ ವಿರುದ್ಧ ಕೊಲೆ ಆರೋಪ - ಹಕ್ಕೇರುದ್ದಿ ಗ್ರಾಮ

ಗೃಹಿಣಿಯೊಬ್ಬರು ಅನುಮಾನಾಸ್ಪದವಾಗಿ ಸಾವನ್ನಪ್ಪಿರುವ ಘಟನೆ ಚಿಕ್ಕಮಗಳೂರಿನಲ್ಲಿ ನಡೆದಿದೆ.

suspicious-death-of-women-in-chikkamagaluru
ಚಿಕ್ಕಮಗಳೂರು : ಗೃಹಿಣಿ ಅನುಮಾನಾಸ್ಪದ ಸಾವು.. ಪತಿ ವಿರುದ್ಧ ಕೊಲೆ ಆರೋಪ
author img

By ETV Bharat Karnataka Team

Published : Dec 12, 2023, 10:44 PM IST

ಚಿಕ್ಕಮಗಳೂರು : ಗೃಹಿಣಿಯೊಬ್ಬರು ಅನುಮಾನಾಸ್ಪದವಾಗಿ ಮೃತಪಟ್ಟಿರುವ ಘಟನೆ ಜಿಲ್ಲೆಯ ಮೂಡಿಗೆರೆ ತಾಲೂಕಿನ ದೇವವೃಂದ ಸಮೀಪದ ಹಕ್ಕೇರುದ್ದಿ ಗ್ರಾಮದಲ್ಲಿ ನಡೆದಿದೆ. ಹಕ್ಕೇರುದ್ದಿ ಗ್ರಾಮದ ದರ್ಶನ್ ಪೂಜಾರಿ ಎಂಬುವವರ ಪತ್ನಿ ಶ್ವೇತಾ (32) ಮೃತ ಮಹಿಳೆ. ಮೃತ ಕುಟುಂಬಸ್ಥರು ಗಂಡನ ವಿರುದ್ಧವೇ ಕೊಲೆ ಆರೋಪ ಮಾಡಿದ್ದಾರೆ.

ಹಕ್ಕೇರುದ್ದಿ ಗ್ರಾಮದ ದರ್ಶನ್ ಬೆಂಗಳೂರಿನಲ್ಲಿ ತನ್ನದೇ ಸ್ವಂತ ಮೆಡಿಕಲ್ ಲ್ಯಾಬ್ ನಡೆಸುತ್ತಿದ್ದರು. ದಂಪತಿ ಕುಟುಂಬ ಸಮೇತ ಬೆಂಗಳೂರಿನಲ್ಲಿಯೇ ವಾಸವಾಗಿದ್ದರು. ಮೃತ ಶ್ವೇತಾ ಹಾಗೂ ದರ್ಶನ್ ಪೂಜಾರಿ ಕಳೆದ 7 ವರ್ಷಗಳ ಹಿಂದೆ ಪ್ರೀತಿಸಿ ಮದುವೆಯಾಗಿದ್ದರು. ದಂಪತಿಗೆ ನಾಲ್ಕು ವರ್ಷದ ಗಂಡು ಮಗು ಇದೆ.

ಡಿಸೆಂಬರ್ 6ರಂದು ದಂಪತಿ ತಮ್ಮ ಸ್ವಗ್ರಾಮ ಹಕ್ಕೇರುದ್ದಿಗೆ ಬಂದಿದ್ದರು. ಈ ನಡುವೆ ದರ್ಶನ್​ಗೆ ವಿವಾಹೇತರ ಸಂಬಂಧ ಇದ್ದು, ಈ ಸಲುವಾಗಿ ಶ್ವೇತಾ ಬಳಿ ವಿವಾಹ ವಿಚ್ಛೇದನ ನೀಡುವಂತೆ ಪೀಡಿಸುತ್ತಿದ್ದ ಎಂದು ಆರೋಪಿಸಲಾಗಿದೆ. ಈ ಬಗ್ಗೆ ಮೃತ ಶ್ವೇತಾ ತನ್ನ ತಂಗಿಯ ಬಳಿ ಹೇಳಿದ್ದಳು ಎಂದು ತಿಳಿದು ಬಂದಿದೆ. ಬಳಿಕ ಶ್ವೇತಾ ಕುಟುಂಬಸ್ಥರು ದರ್ಶನ್​ಗೆ ಬುದ್ದಿವಾದ ಹೇಳಿದ್ದರು. ಬಳಿಕ ಇತ್ತೀಚೆಗೆ ದೀಪಾವಳಿಗೆ ಬಂದ ಸಂದರ್ಭದಲ್ಲೂ ಊರಿಗೆ ಬಂದಿದ್ದ ಶ್ವೇತಾಳಿಗೆ ಗಂಡನ ಮನೆಯವರು ಹಲ್ಲೆ ನಡೆಸಿದ್ದರು ಎಂದು ಆರೋಪಿಸಲಾಗಿದೆ.

ಇಂದು ಬೆಳಗ್ಗೆ ಶ್ವೇತಾಳಿಗೆ ಎದೆ ನೋವು ಕಾಣಿಸಿಕೊಂಡಿದೆ. ಚಿಕ್ಕಮಗಳೂರಿಗೆ ಆಸ್ಪತ್ರೆಗೆ ಕರೆದುಕೊಂಡು ಹೋಗುತ್ತಿದ್ದಾರೆ ದರ್ಶನ್​ನ ಅಣ್ಣ ಅವರು ಎಂದು ತವರು ಮನೆಗೆ ಕರೆ ಮಾಡಿದ್ದರು. ಬಳಿಕ ಶ್ವೇತಾ ಮೃತಪಟ್ಟಿರುವುದಾಗಿ ಕರೆ ಮಾಡಿ ತಿಳಿಸಿದ್ದರು. ಶ್ವೇತಾಳ ಮನೆಯವರು ಮನೆಗೆ ತೆರಳಿ ನೋಡಿದಾಗ ಶ್ವೇತಾ ಮೃತಪಟ್ಟಿದ್ದರು. ಬಳಿಕ ದರ್ಶನ್ ಮನೆಯವರು ಶ್ವೇತಾಳ ಅಂತ್ಯಕ್ರಿಯೆಗೆ ಸಿದ್ದತೆ ನಡೆಸಿದ್ದರು. ಆದರೆ, ಪೋಷಕರು ಮಗಳ ಸಾವಿನ ಬಗ್ಗೆ ಅನುಮಾನ ವ್ಯಕ್ತಪಡಿಸಿ ಪೊಲೀಸರಿಗೆ ದೂರು ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಂಡ ಗೋಣಿಬೀಡು ಠಾಣೆ ಪೊಲೀಸರು, ಶ್ವೇತಾ ಪತಿ ದರ್ಶನ್ ಮತ್ತು ದರ್ಶನ್​ ಅಣ್ಣ ದೀಪಕ್ ಅವರನ್ನು ಬಂಧಿಸಿದ್ದಾರೆ. ಪ್ರಕರಣದ ತನಿಖೆ ಮುಂದುವರೆದಿದೆ.

ರಾಮನಗರದಲ್ಲಿ ಮಹಿಳೆ ಅನುಮಾನಾಸ್ಪದ ಸಾವು : ಮಹಿಳೆಯೊಬ್ಬರು ಅನುಮಾನಾಸ್ಪದವಾಗಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡು ಸ್ಥಿತಿಯಲ್ಲಿ ಪತ್ತೆಯಾಗಿದ್ದ ಘಟನೆ ಇತ್ತೀಚೆಗೆ ರಾಮನಗರದಲ್ಲಿ ನಡೆದಿತ್ತು. ಮೃತ ಮಹಿಳೆಯನ್ನು ಕಮಲಾಬಾಯಿ ಎಂದು ಗುರುತಿಸಲಾಗಿತ್ತು. ಪ್ರಕರಣ ಸಂಬಂಧ ಮೃತರ ಪ್ರಿಯಕರನನ್ನು ಪೊಲೀಸರು ಬಂಧಿಸಿದ್ದರು.

ಇದನ್ನೂ ಓದಿ : ರಾಜಧಾನಿಯಲ್ಲಿ ಮತ್ತೆ ಬೆಳಕಿಗೆ ಬಂದ ವೈಫ್ ಸ್ವಾಪಿಂಗ್ ಪ್ರಕರಣ: ಪತಿ ವಿರುದ್ಧ ಪತ್ನಿ ಆರೋಪ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.