ಚಿಕ್ಕಮಗಳೂರು: ಮಂಡ್ಯ ಲೋಕಸಭಾ ಕಣದಲ್ಲಿ ಎಲ್ಲಾ ಸಿನಿಮಾ ತಾರೆಯರು ಪ್ರಚಾರ ಮಾಡುತ್ತಿದ್ದಾರೆ, ಇದು ಹೊಸದಲ್ಲ. ಎಲ್ಲರೂ ಸೇರಿ ದಾಳಿ ಮಾಡಿದರೂ ನನಗೆ ಯಾವುದೇ ಆಂತಕವಿಲ್ಲ. ನಾನು ನೋಡದ ಚಿತ್ರನಟರಲ್ಲ, ನಾನು ಅದೇ ಕ್ಷೇತ್ರದಲ್ಲಿ ಇರೋದು, ಎಲ್ಲವನ್ನೂ ಎದುರಿಸೋಣ ಬನ್ನಿ ಎಂದು ಎಂದು ಕುಮಾರಸ್ವಾಮಿ ಹೇಳಿದ್ದಾರೆ.
ನಟರಾದ ಯಶ್, ದರ್ಶನ್, ದೊಡ್ಡಣ್ಣ ಹಾಗೂ ನಿರ್ಮಾಪಕ ರಾಕ್ಲೈನ್ ವೆಂಕಟೇಶ್ ಸೇರಿ ಮೊದಲಾದವರ ಸಮ್ಮುಖದಲ್ಲಿ ಸುಮಲತಾ ಬೆಳಿಗ್ಗೆ ಜಂಟಿ ಸುದ್ದಿಗೋಷ್ಠಿ ನಡೆಸಿ, ತಾವು ಸ್ವತಂತ್ರ್ಯ ಅಭ್ಯರ್ಥಿ ಎಂದು ಘೋಷಣೆ ಮಾಡಿದ್ದಾರೆ. ಈ ಕುರಿತು ಮುಖ್ಯಮಂತ್ರಿ ಹೆಚ್.ಡಿ ಕುಮಾರಸ್ವಾಮಿ ಶೃಂಗೇರಿಯಲ್ಲಿ ಪ್ರತಿಕ್ರಿಯೆ ನೀಡಿದ್ದಾರೆ.
ಮಂಡ್ಯ ಲೋಕಸಭಾ ಕಣದಲ್ಲಿ ಸಿನಿಮಾ ತಾರೆಯರು ಪ್ರಚಾರ ಮಾಡುತ್ತಿದ್ದಾರೆ, ಇದು ಹೊಸದಲ್ಲ. ಎಲ್ಲರೂ ಸೇರಿ ದಾಳಿ ಮಾಡಿದರೂ ನನಗೆ ಯಾವುದೇ ಆಂತಕವಿಲ್ಲ. ನಾನು ನೋಡದ ಚಿತ್ರನಟರಲ್ಲ, ನಾನು ಅದೇ ಕ್ಷೇತ್ರದಲ್ಲಿ ಇರೋದು, ಎಲ್ಲವನ್ನೂ ಎದುರಿಸೋಣ ಬನ್ನಿ ಎಂದರು.