ETV Bharat / state

'ಪಾದುಕೆ ಪೂಜೆಗೆ ಅವಕಾಶ ನೀಡಿ': ದತ್ತಪೀಠದಲ್ಲಿ ಶ್ರೀರಾಮ ಸೇನೆ ಪ್ರತಿಭಟನೆ - ದತ್ತಪೀಠ ಸುದ್ದಿ

ದತ್ತಪೀಠದಲ್ಲಿ ನೇಮಕವಾಗಿದ್ದ ಮುಜಾವರ್ ಆದೇಶ ರದ್ದಾದ ಬಳಿಕ, ಶ್ರೀರಾಮಸೇನೆ ಹಾಗೂ ಕಾಳಿ ಸ್ವಾಮೀಜಿ ಇಂದು ಪಾದುಕೆ ಪೂಜೆಗೆ ಅವಕಾಶ ನೀಡಬೇಕು ಎಂದು ಆಗ್ರಹಿಸಿ ಪ್ರತಿಭಟನೆ ನಡೆಸಿದ್ದಾರೆ.

protest-over-paduke-puje-issue-in-datta-peeta
ದತ್ತಪೀಠದಲ್ಲಿ ಶ್ರೀರಾಮ ಸೇನೆ ಪ್ರತಿಭಟನೆ
author img

By

Published : Sep 30, 2021, 3:54 PM IST

ಚಿಕ್ಕಮಗಳೂರು: ದತ್ತಪೀಠದಲ್ಲಿ ಪಾದುಕೆಗೆ ಪೂಜೆ ಸಲ್ಲಿಸಲು ಅವಕಾಶ ನೀಡುವಂತೆ ಒತ್ತಾಯಿಸಿ ಕಾಳಿ ಸ್ವಾಮೀಜಿ ನೇತೃತ್ವದಲ್ಲಿ ಶ್ರೀರಾಮ ಸೇನೆ ಸದಸ್ಯರು ಭಜನೆ ಪ್ರತಿಭಟನೆ ನಡೆಸಿದರು.

ದತ್ತಪೀಠದ ಪಾದುಕೆಗೆ ಪೂಜೆ ಸಲ್ಲಿಸಲೆಂದು ಆಗಮಿಸಿದ್ದ ಋಷಿಕುಮಾರ ಸ್ವಾಮೀಜಿಗೆ ಅವಕಾಶ ನೀಡದೆ ತಡೆಯಲಾಗಿತ್ತು. ಇದರಿಂದ ಆಕ್ರೋಶಗೊಂಡ ಶ್ರೀರಾಮಸೇನೆ ಸದಸ್ಯರು ಅಲ್ಲಿಯೇ ಪ್ರತಿಭಟನೆ ನಡೆಸಿದ್ದಾರೆ.

ಪಾದುಕೆ ಪೂಜೆಗೆ ಅವಕಾಶ ಕೋರಿ ದತ್ತಪೀಠದಲ್ಲಿ ಶ್ರೀರಾಮ ಸೇನೆ ಪ್ರತಿಭಟನೆ

ಈ ವೇಳೆ, ಪಾದುಕೆ ಪೂಜೆಗೆ ಅವಕಾಶ ನೀಡುವವರೆಗೂ ಇಲ್ಲಿಂದ ತೆರಳುವುದಿಲ್ಲ ಎಂದು ಪಟ್ಟುಹಿಡಿದರು. 2018ರಲ್ಲಿ ದತ್ತಪೀಠ ಪೂಜೆಗೆ ಮುಜಾವರ್ ನೇಮಕಗೊಳಿಸಿದ್ದ ಆದೇಶವನ್ನು ಹೈಕೋರ್ಟ್ ರದ್ದು ಮಾಡಿದ ಕಾರಣ ದತ್ತಪಾದುಕೆ ದರ್ಶನಕ್ಕೆ ಶ್ರೀರಾಮಸೇನೆ ಕಾರ್ಯಕರ್ತರು ಹಾಗೂ ಕಾಳಿಸ್ವಾಮಿ ಆಗಮಿಸಿದ್ದರು.

ಇದನ್ನೂ ಓದಿ: 'ದೇವಸ್ಥಾನ ತೆರವು ಮಾಡುವದಿದ್ದರೆ, 21 ವರ್ಷಗಳ ಹಿಂದಿನ ಶಬ್ದಮಾಲಿನ್ಯ ನಿಯಂತ್ರಣ ಆದೇಶ ಪಾಲಿಸಿ'

ETV Bharat Logo

Copyright © 2025 Ushodaya Enterprises Pvt. Ltd., All Rights Reserved.