ಚಿಕ್ಕಮಗಳೂರು: ಶ್ರೀರಾಮಸೇನೆಯ ಮುಖಂಡರು ಹಾಗೂ ಕಾರ್ಯಕರ್ತರು ಗುರುವಾರ ದತ್ತಪೀಠಕ್ಕೆ ಭೇಟಿ ನೀಡಿ, ಹೋಮ ಮಂಟಪವನ್ನು ಶುದ್ಧೀಕರಣಗೊಳಿಸುವ ಕೆಲಸ ಮಾಡಿದ್ದಾರೆ. ಗಂಗಾ-ಯಮುನ-ಸರಸ್ವತಿ ನದಿಯ ಸಂಗಮ ತೀರ್ಥದಿಂದ ಶುದ್ಧಿ ಮಾಡಲಾಗಿದೆ. ನಂತರ ಗೋ ಮೂತ್ರ ಹಾಕಿ, ಗೋವಿಗೂ ಹೋಮ ಮಂಟಪದಲ್ಲಿ ಪೂಜೆ ಮಾಡಿದ್ದಾರೆ.
ಕಳೆದ ಎರಡು ದಿನಗಳ ಹಿಂದೆ ಚಿಕ್ಕಮಗಳೂರು ತಾಲೂಕಿನ ಇನಾಂ ದತ್ತಾತ್ರೇಯ ಪೀಠದಲ್ಲಿ ಅನ್ಯ ಧರ್ಮದವರು ಹೋಮ ಮಂಟಪದಲ್ಲಿ ಮಾಂಸದೂಟ ಮಾಡಿದ್ದರು. ಈ ಹಿನ್ನೆಲೆ ಇಂದು ಹಿಂದೂ ಶ್ರೀರಾಮಸೇನೆಯ ಮುಖಂಡರು ದತ್ತಪೀಠಕ್ಕೆ ಭೇಟಿ ನೀಡಿ, ಶುದ್ಧೀಕರಣ ಮಾಡಿದ್ದಾರೆ. ಅರ್ಚಕರ ನೇತೃತ್ವದಲ್ಲಿ ಪೂಜೆ ನಡೆಸಿದ್ದು, ಮುಂದಿನ ದಿನಗಳಲ್ಲಿ ಈ ರೀತಿಯ ಅಚಾತುರ್ಯಗಳು ನಡೆಯದಂತೆ ನೋಡಿಕೊಳ್ಳಬೇಕು ಎಂದು ಜಿಲ್ಲಾಡಳಿತಕ್ಕೆ ಆಗ್ರಹ ಮಾಡಿದ್ದಾರೆ.
ಇದನ್ನೂ ಓದಿ: ದತ್ತಪೀಠದಲ್ಲಿ ಮಾಂಸಾಹಾರ ಸೇವನೆ ಅಕ್ಷಮ್ಯ ಅಪರಾಧ, ತಪ್ಪಿತಸ್ಥರಿಗೆ ಶಿಕ್ಷೆಯಾಗಬೇಕು: ಸಿ.ಟಿ. ರವಿ ಆಗ್ರಹ