ಚಿಕ್ಕಮಗಳೂರು: ವೈದ್ಯರಿಗೆ ಬಟ್ಟೆ ಹಾಗೂ ಆಸ್ಪತ್ರೆ ಸಿಬ್ಬಂದಿಗೆ ರೇಷನ್ ಕಿಟ್ ವಿತರಿಸುವ ಮೂಲಕ ಕೊಪ್ಪ ತಾಲೂಕಿನ ಗೌರಿಗದ್ದೆ ಆಶ್ರಮದ ವಿನಯ್ ಗುರುಜಿ ರಾಮನವಮಿಯನ್ನು ಅರ್ಥಪೂರ್ಣವಾಗಿ ಆಚರಿಸಿದ್ದಾರೆ.
![simple rama navami celebration in koppa taluk](https://etvbharatimages.akamaized.net/etvbharat/prod-images/kn-ckm-03-vinay-guruji-av-7202347_03042020214507_0304f_1585930507_1068.jpg)
ಕೊರೊನಾ ಭೀತಿ ಹಿನ್ನೆಲೆ ಅದ್ಧೂರಿ ರಾಮನವಮಿ ಆಚರಣೆಗೆ ಬ್ರೇಕ್ ಹಾಕಲಾಗಿದೆ. ಆ ಹಣದಲ್ಲಿ ತಾಲೂಕಿನ ಹರಿಹರಪುರ ಆಸ್ಪತ್ರೆಯಲ್ಲಿ ಈ ರೀತಿಯಾಗಿ ರಾಮನವಮಿ ಆಚರಿಸಿದರು.
ಕೆಲವರಿಗೆ ಗೌರವಧನ ನೀಡುವ ಮೂಲಕ ಸರಳ ಆಚರಣೆಗೆ ಮುಂದಾಗಿದ್ದಾರೆ. ಇನ್ನೊಂದೆಡೆ ಕೊರೊನಾ ವಿರುದ್ಧ ಗೌರಿಗದ್ದೆ ಆಶ್ರಯದಲ್ಲಿ ಹೋಮವನ್ನು ನಡೆಸಲಾಗುತ್ತಿದೆ. 21 ದಿನಗಳ ಕಾಲ ನಡೆಯುವ ಅಗ್ನಿಹೋತ್ರ ಹೋಮವು ವಾಯುಮಂಡಲದಲ್ಲಿ ಶುದ್ಧ ಗಾಳಿ ಸೃಷ್ಟಿಸುತ್ತದೆ ಎಂಬುದು ಗುರೂಜಿ ಹಾಗೂ ಭಕ್ತರ ನಂಬಿಕೆಯಾಗಿದೆ.
ಭಕ್ತರು ಮನೆಯಲ್ಲೇ ಅಗ್ನಿಹೋತ್ರ ಹೋಮ ಮಾಡುತ್ತಿದ್ದಾರೆ. ಮಾರ್ಚ್ 22ರಿಂದ ಈ ಹೋಮ ಆರಂಭವಾಗಿದ್ದು, ಬೆರಣಿ, ತುಪ್ಪ, ಅಕ್ಕಿಯಿಂದ ಹೋಮ ಮಾಡಲಾಗುತ್ತಿದೆ.