ಚಿಕ್ಕಮಗಳೂರು: ಜಿಲ್ಲೆಯ ಅಜ್ಜಂಪುರ ತಾಲೂಕಿನ ಶಶಿಕುಮಾರ್ ಎಂಬ ಯುವಕ ಕಡು ಬಡತನದ ನಡುವೆಯೂ ತರಬೇತಿ ಪಡೆದು ಕಬಡ್ಡಿ ಆಟವನ್ನು ಕಲಿತು, ಇದೀಗ ಅಂತಾರಾಷ್ಟ್ರೀಯ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.
ದಾವಣಗೆರೆಯಲ್ಲಿ ಆಟೋ ಓಡಿಸುತ್ತಲೇ ತರಬೇತಿ ಪಡೆದು, ಅಲ್ಲಿಂದ ಹಲವು ತಂಡಗಳಲ್ಲಿ ಆಡಿ ನಂತರ ರಾಷ್ಟ್ರೀಯ ತಂಡಕ್ಕೆ ಆಯ್ಕೆಯಾಗಿದ್ದಾರೆ. ಇವರ ಈ ಸಾಧನೆಗೆ ಸ್ನೇಹಿತರು ಸಹ ಸಹಾಯವನ್ನು ಮಾಡಿದ್ದು, ಆಟದ ಜೊತೆಯಲ್ಲಿ ಕೆಲವೊಮ್ಮೆ ಹಣದ ನೆರವನ್ನು ನೀಡಿದ್ದಾರೆ.
ಇದನ್ನೂ ಓದಿ: ಕಲಿಸುವ ಗುರುವು ಬೀದಿಯಲ್ಲಿ ನಿಂತಿದ್ದಾಗ ಭಾರತ ವಿಶ್ವಗುರು ಆಗಲು ಸಾಧ್ಯವೇ: ಹೆಚ್ಡಿಕೆ ಕಿಡಿ
ಶಶಿಕುಮಾರ್ ನೇಪಾಳದಲ್ಲಿ ನಡೆಯುವ ಕಬಡ್ಡಿ ಪಂದ್ಯಾವಳಿಯಲ್ಲಿ ಆಡಲು ರಾಷ್ಟ್ರೀಯ ಕಬಡ್ಡಿ ತಂಡಕ್ಕೆ ಆಯ್ಕೆಯಾಗಿರುವುದಕ್ಕೆ ಊರಿನವರು ಸಂತಸ ವ್ಯಕ್ತಪಡಿಸಿದ್ದಾರೆ. ಅಲ್ಲದೇ ಸ್ನೇಹಿತರು ಮತ್ತು ಸ್ಥಳೀಕರು ಧನ ಸಹಾಯ ಮಾಡಿದ್ದಾರೆ.