ಚಿಕ್ಕಮಗಳೂರು: ಕಾಫಿನಾಡು ಚಿಕ್ಕಮಗಳೂರು ನಗರದ ಹನುಮಂತಪ್ಪ ವೃತ್ತದ ಬಳಿಯಿರುವ ಜಾಗವೇ ಈಗ ವಿವಾದದ ಕೇಂದ್ರಬಿಂದು. ಆ ಜಾಗಕ್ಕಾಗಿ ಕಳೆದ ನಾಲ್ಕು ದಶಕಗಳಿಂದ ಎರಡು ಸಮುದಾಯದವರು ಕೋರ್ಟ್ ಗೆ ಅಲೆದಾಟ ನಡೆಸುತ್ತಿದ್ದಾರೆ. ಇದೀಗ ಆ ಜಾಗದ ಸರ್ವೇ ಕಾರ್ಯ ನಡೆಸುವಂತೆ ಕೋರ್ಟ್ ಸೂಚನೆ ನೀಡಿದ ಹಿನ್ನೆಲೆ ಜಿಲ್ಲಾಡಳಿತ ಅಖಾಡಕ್ಕೆ ಇಳಿದು ಪೊಲೀಸ್ ಬಂದೋಬಸ್ತ್ನಡಿ ಸರ್ವೇ ಕಾರ್ಯ ಆರಂಭಿಸಿದೆ.
ಚಿಕ್ಕಮಗಳೂರು ನಗರದ ಹನುಮಂತಪ್ಪ ವೃತ್ತದ ಬಳಿ ಇರುವ ಬಡಾಮಕಾನ್ ಭಾಗದ ಜಾಗ ನಲ್ಲೂರು ಮಠದ ಮನೆಯವರು ಹಾಗೂ ಜಾಮಿಯಾ ಮಸೀದಿಯ ನಡುವಿನ ತಿಕ್ಕಾಟಕ್ಕೆ ಕಾರಣವಾಗಿದೆ. ನಗರಸಭೆಗೆ ಸರ್ವೇ ಕಾರ್ಯ ನಡೆಸುವಂತೆ ನಲ್ಲೂರು ಮಠದ ಮನೆಯವರ ಆಡಳಿತ ಮಂಡಳಿಯ ನಂಜಪ್ಪ ಎನ್ನುವರು ಮನವಿ ಮಾಡಿದ್ದರು. ಜೊತೆಗೆ ಜಿಲ್ಲಾ ಕೋರ್ಟ್, ಜಾಗದ ಸರ್ವೇ ಕಾರ್ಯ ನಡೆಸುವಂತೆ ಕಂದಾಯ ಇಲಾಖೆಗೆ ಸೂಚನೆ ನೀಡಿತ್ತು. ಈ ಹಿನ್ನೆಲೆ ನಗರಸಭೆಯಿಂದ ಸರ್ವೇ ಕಾರ್ಯ ಆರಂಭವಾಗಿದೆ.
ಈ ವೇಳೆ ಇನ್ನೊಂದು ಗುಂಪು ಸರ್ವೇ ನಡೆಸಲು ವಿರೋಧ ವ್ಯಕ್ತಪಡಿಸಿದ್ದಾರೆ. ಆದರೆ ನಗರಸಭೆ ಅಧಿಕಾರಿಗಳು ಬಿಗಿ ಪೊಲೀಸ್ ಬಂದೋಬಸ್ತ್ ನಡುವೆ ಸರ್ವೇ ಮಾಡಿದರು. ಈ ವೇಳೆ ಸ್ಥಳದಲ್ಲಿ ಎಸಿ ನಾಗರಾಜ್, ತಹಶೀಲ್ದಾರ್ ಕಾಂತರಾಜ್ ಸೇರದಂತೆ ಅನೇಕರು ಉಪಸ್ಥಿತರಿದ್ದರು.
ಇದನ್ನೂ ಓದಿ: ಸಾವಯವ ಕೃಷಿ ಪದ್ಧತಿ ಅಳವಡಿಕೆ: ಮಧ್ಯಪ್ರದೇಶ ದೇಶಕ್ಕೆ ನಂಬರ್ ಒನ್; ಕರ್ನಾಟಕಕ್ಕೆ ಎಷ್ಟನೇ ಸ್ಥಾನ?