ಚಿಕ್ಕಮಗಳೂರು: ಮಹಿಳೆಯೋರ್ವರಿಗೆ ಕೋಳಿಫಾರಂಗೆ ಪರವಾನಗಿ ನೀಡುವ ವಿಚಾರವಾಗಿ ಗ್ರಾ.ಪಂ ಅಧ್ಯಕ್ಷ ಹಾಗೂ ಕರ ವಸೂಲಿಗಾರನ ಗುಂಪಿನ ನಡುವೆ ಮಾರಾಮಾರಿ ನಡೆದಿರುವ ಘಟನೆ ಜಿಲ್ಲೆಯ ಕಡೂರು ತಾಲೂಕಿನ ಎಮ್ಮೆದೊಡ್ಡಿ ಗ್ರಾಮ ಪಂಚಾಯಿತಿಯಲ್ಲಿ ನಡೆದಿದೆ.
ಕೋಳಿಫಾರಂಗೆ ಪರವಾನಗಿ ನೀಡುವ ವಿಚಾರದಲ್ಲಿ ಅಧ್ಯಕ್ಷ ಆನಂದ ನಾಯ್ಕ್ ಹಾಗೂ ಕರ ವಸೂಲಿಗಾರ ಚಂದ್ರ ನಾಯ್ಕ್ ಮಧ್ಯೆ ಮಾತಿನ ಚಕಮಕಿ ನಡೆದಿದೆ. ಈ ವೇಳೆ ಇಬ್ಬರ ನಡುವೆ ಮಾತಿಗೆ ಮಾತು ಬೆಳೆದು ಎರಡೂ ಬಣದವರು ಪರಸ್ಪರ ಕೈಕೈ ಮಿಲಾಯಿಸಿ ಪಂಚಾಯಿತಿ ಆವರಣದಲ್ಲೇ ಹೊಡೆದಾಡಿದ್ದಾರೆ. ಈ ಹೊಡೆದಾಟದಲ್ಲಿ ಮಧ್ಯ ಪ್ರವೇಶಿಸಿದ ಮಹಿಳೆಯರ ಮೇಲೂ ಹಲ್ಲೆ ಆಗಿರುವ ಆರೋಪ ಕೇಳಿ ಬಂದಿದೆ.
ಸ್ಥಳಕ್ಕೆ ಪೊಲೀಸರು ಆಗಮಿಸಿ ಎರಡು ಕಡೆಯವರನ್ನು ಸಮಾಧಾನಪಡಿಸಿ ಪರಿಸ್ಥಿತಿಯನ್ನು ತಿಳಿಗೊಳಿಸಿ ದೂರು ದಾಖಲಿಸಿಕೊಂಡರು.