ಚಿಕ್ಕಮಗಳೂರು: ರಾಜಕಾರಣಿಗಳು ಗೋವಾಗೆ ಹೋಗುವುದನ್ನು ಕಡಿಮೆ ಮಾಡಬೇಕು ಎಂದು ಸಾಮಾಜಿಕ ಕಾರ್ಯಕರ್ತ ರಾಜಶೇಖರ್ ಮುಲಾಲಿ ಹೇಳಿದರು.
ಚಿಕ್ಕಮಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿಡಿ ಘಟನೆಯೇ ದೊಡ್ಡ ಷಡ್ಯಂತ್ರ. ಕರ್ನಾಟಕ ಜನರು ಇದನ್ನೆಲ್ಲಾ ನೋಡೋದು ದೊಡ್ಡ ದುರಂತ. ಸಿಡಿ ಮೇಲ್ನೋಟಕ್ಕೆ ಟ್ಯಾಂಪರ್ಡ್ ಎಂದು ಅನಿಸುತ್ತದೆ. ವಿಧಿವಿಜ್ಞಾನ ಪ್ರಯೋಗಾಲಯದಿಂದ ಬಂದ ಮೇಲೆ ಎಲ್ಲವೂ ತಿಳಿಯಲಿದೆ ಎಂದು ಹೇಳಿದರು.
ಇದನ್ನೂ ಓದಿ: ನನ್ನ ಬಳಿ 19 ಸಿಡಿಗಳಿವೆ ಎಂದು ಎಲ್ಲಿಯೂ ಪ್ರಸ್ತಾಪ ಮಾಡಿಲ್ಲ; ಮುಲಾಲಿ ಸ್ಪಷ್ಟನೆ
ನಮ್ಮಲ್ಲಿ ರಾಜಕಾರಣಿಗಳು ತಾಂತ್ರಿಕವಾಗಿ ಮುಗ್ಧರಿದ್ದಾರೆ. ರಾಜಕಾರಣಿಗಳ ಮುಗ್ಧತೆ ದುರ್ಬಳಕೆಯಾಗಬಾರದು, ಎಚ್ಚರದಿಂದ ಇರಬೇಕು. ಇಂತಹ ಘಟನೆಗಳಿಂದ ಅವರ ಹೆಂಡತಿ, ಮಕ್ಕಳು ಸಾರ್ವಜನಿಕ ಸ್ಥಳಗಳಲ್ಲಿ ಓಡಾಡುವುದಾದರೂ ಹೇಗೆ? ಎಂದು ರಾಜಶೇಖರ್ ಮುಲಾಲಿ ಹೇಳಿದರು.