ಚಿಕ್ಕಮಗಳೂರು: ಬೈಕ್‍ಗಳಿಗೆ ಇಷ್ಟ ಬಂದಂತೆ ಡಿಸೈನ್ ಮಾಡಿಸಿಕೊಂಡು ಕರ್ಕಶ ಶಬ್ದ ಮಾಡುವ ಮೂಲಕ ಶಬ್ದ ಮಾಲಿನ್ಯ ಉಂಟುಮಾಡುತ್ತಿದ್ದ ಬೈಕ್ ಸವಾರರಿಗೆ ಜಿಲ್ಲೆಯ ಕಡೂರು ಪೊಲೀಸರು ತಕ್ಕ ಶಿಕ್ಷೆ ಪಾಠ ಕಲಿಸಿದ್ದಾರೆ. 35 ಬೈಕ್ ಮಾಲೀಕರಿಗೆ ಪೊಲೀಸರು ಬಿಸಿ ಮುಟ್ಟಿಸಿದ್ದಾರೆ.
ಪಡ್ಡೆ ಹೈಕ್ಳು ಬೈಕ್‍ಗಳನ್ನ ಹೇಗೆ ಓಡಿಸುತ್ತಾರೆಂಬುದು ಎಲ್ಲರಿಗೂ ಗೊತ್ತಿರುವ ವಿಚಾರ. ಬೈಕ್ ಹ್ಯಾಂಡಲ್, ಸೈಲೆನ್ಸರ್ಅನ್ನು ಮತ್ತಷ್ಟು ವಿಭಿನ್ನವಾಗಿ ಡಿಸೈನ್ ಮಾಡಿಸಿಕೊಂಡು ರಸ್ತೆಗಳಲ್ಲಿ ರೋಮಿಯೋಗಳಂತೆ ಓಡಾಡ್ತಿರ್ತಾರೆ. ಅಂತಹವರಿಗೆ ಕಡೂರು ಪೊಲೀಸರು ಕಾನೂನು ಪಾಠ ಮಾಡಿದ್ದಾರೆ.
ಕಳೆದ ಎರಡು ತಿಂಗಳಿಂದ ನಗರದ ವಿವಿಧ ಭಾಗದಲ್ಲಿ ಕಾರ್ಯಾಚರಣೆ ನಡೆಸಿದ್ದ ಪೊಲೀಸರು ಬೈಕ್‍ಗಳಿಂದ ಕರ್ಕಶ ಶಬ್ದ ಬರುವ ಸೈಲೆನ್ಸರ್‍ಗಳನ್ನ ಸೀಜ್ ಮಾಡಿದ್ದರು. ಈ ಎಲ್ಲಾ ಸೈಲೆನ್ಸರ್ಗಳ ಮೇಲೆ ಬುಲ್ಡೋಜರ್ ಹತ್ತಿಸಲಾಗಿದೆ. ಸೈಲೆನ್ಸರ್‍ಗಳನ್ನ ಬಿಚ್ಚಿ ಅವುಗಳ ಮೇಲೆ ಪೊಲೀಸರು ಬುಲ್ಡೋಜರ್ ಹತ್ತಿಸಿದ್ದಾರೆ. ಈ ರೀತಿಯ ಬೈಕ್‍ಗಳಲ್ಲಿ ಕಾಲೇಜು ವಿದ್ಯಾರ್ಥಿಗಳ ಬೈಕ್‍ಗಳೇ ಹೆಚ್ಚಿದ್ದವು.
ವಿಚಿತ್ರ ಶಬ್ದದ ಹಿನ್ನೆಲೆ ಸ್ಥಳೀಯರ ದೂರಿನನ್ವಯ ಕಡೂರು ಪಿಎಸ್‍ಐ ರಮ್ಯಾ ನೇತೃತ್ವದಲ್ಲಿ ಗಣಪತಿ, ಆಂಜನೇಯಸ್ವಾಮಿ ದೇವಾಲಯ, ಬನಶಂಕರಿ ಸಮುದಾಯ ಭವನ, ತಂಗಲಿ ತಾಂಡ್ಯ ಸೇರಿದಂತೆ ಮುಂತಾದ ಕಡೆಗಳಲ್ಲಿ ಪೊಲೀಸರು ತಪಾಸಣೆ ನಡೆಸಿ ವಾಹನಗಳನ್ನ ವಶಪಡಿಸಿಕೊಂಡಿದ್ದರು.