ETV Bharat / state

ಚಿಕ್ಕಮಗಳೂರಲ್ಲಿ ಬೃಹತ್ ಆನೆ ದಂತ ಮಾರಾಟ ಯತ್ನ : ಸಿಕ್ಕಿಬಿದ್ದ ಖದೀಮರು

author img

By

Published : Jun 8, 2022, 8:55 PM IST

ಚಿಕ್ಕಮಗಳೂರು ಜಿಲ್ಲೆಯಲ್ಲಿ ಎರಡು ಬೃಹತ್ ಆನೆ ದಂತಗಳನ್ನು ಮಾರಾಟ ಮಾಡಲು ಯತ್ನಿಸುತ್ತಿದ್ದ ಐವರು ಆರೋಪಿಗಳನ್ನು ನಗರದ ಪೊಲೀಸ್ ಅರಣ್ಯ ಸಂಚಾರಿ ದಳದ ಪೊಲೀಸರು ಬಂಧಿಸಿದ್ದಾರೆ.

police-arrested-the-accused-who-tried-to-sale-the-elephant-ivory-in-chikkamagamalur
ಬೃಹತ್ ಆನೆ ದಂತ ಮಾರಾಟ ಯತ್ನ : ಸಿಕ್ಕಿ ಬಿದ್ದ ಖದೀಮರು

ಚಿಕ್ಕಮಗಳೂರು : ಎರಡು ಬೃಹತ್ ಆನೆ ದಂತಗಳನ್ನು ಮಾರಾಟ ಮಾಡಲು ಯತ್ನಿಸುತ್ತಿದ್ದ ಐವರು ಆರೋಪಿಗಳನ್ನು ನಗರದ ಪೊಲೀಸ್ ಅರಣ್ಯ ಸಂಚಾರಿ ದಳದ ಪೊಲೀಸರು ಬಂಧಿಸಿದ್ದಾರೆ. ಬಂಧಿತರನ್ನು ಜಿಲ್ಲೆಯ ತರೀಕೆರೆ ಮೂಲದ ಶಿವಕುಮಾರ್, ಸುಂದ್ರೇಶ್, ಮಹಾಂತೇಶ್ ಹಾಗೂ ಶಿವಮೊಗ್ಗ ಜಿಲ್ಲೆ ಭದ್ರಾವತಿ ಮೂಲದ ನೂರ್ ಅಹಮದ್, ಚಿತ್ರದುರ್ಗ ತಾಲೂಕಿನ ಅಂಜಿನಪ್ಪ ಎಂದು ಗುರುತಿಸಲಾಗಿದೆ.

ಬಂಧಿತರು ಕಳೆದ ಆರು ತಿಂಗಳಿಂದ ತಮ್ಮ ಬಳಿಯೇ ಇಟ್ಟುಕೊಂಡಿದ್ದ ಆನೆ ದಂತವನ್ನು, ಇಂದು ಮಾರಾಟ ಮಾಡಲು ಯತ್ನಿಸುತ್ತಿದ್ದಾಗ ಬಂಧಿಸಲಾಗಿದೆ ಎಂದು ಅರಣ್ಯ ಇಲಾಖೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಬಂಧಿತರಿಂದ ಎರಡು ಆನೆ ದಂತ ಹಾಗೂ ಒಂದು ಒಮ್ನಿ ಕಾರನ್ನು ವಶಪಡಿಸಿಕೊಳ್ಳಲಾಗಿದೆ.

police-arrested-the-accused-who-tried-to-sale-the-elephant-ivory-in-chikkamagamalu
ಬಂಧಿತರಿಂದ ವಶಪಡಿಸಿಕೊಂಡ ಎರಡು ಆನೆ ದಂತ ಮತ್ತು ಒಮ್ನಿ ಕಾರು

ತರೀಕೆರೆ ತಾಲೂಕು ಮೂಲದ ಶಿವಕುಮಾರ್ ಹಾಗೂ ಸುಂದ್ರೇಶ್ ಭದ್ರಾ ಹುಲಿ ಸಂರಕ್ಷಿತ ಪ್ರದೇಶದ ಅಕ್ಕಪಕ್ಕದ ತೋಟದಲ್ಲಿ ಕೆಲಸ ಮಾಡುತ್ತಿದ್ದರು. ಭದ್ರಾ ಹುಲಿ ಸಂರಕ್ಷಿತ ಪ್ರದೇಶ ಮೀಸಲು ಹಾಗೂ ದಟ್ಟಾರಣ್ಯಕ್ಕೆ ಅನುಮತಿ ಇಲ್ಲದೆ ಯಾರು ಒಳಗೆ ಪ್ರವೇಶಿಸುವಂತಿಲ್ಲ. ಆದರೂ, ಕಾಫಿ ಎಸ್ಟೇಟ್‍ನಲ್ಲಿ ಕೆಲಸಗಾರರಾಗಿದ್ದ ಶಿವಕುಮಾರ್ ಹಾಗೂ ಸುಂದ್ರೇಶ್ ಮೀಸಲು ಅರಣ್ಯದ ಹಳ್ಳದಲ್ಲಿ ಅಕ್ರಮವಾಗಿ ಮೀನು ಹಿಡಿಯಲು ಹೋಗುತ್ತಿದ್ದರು. ಈ ವೇಳೆ, ಕಾಡಿನಲ್ಲಿ ಆನೆ ಸಾವನ್ನಪ್ಪಿದ್ದ ಆನೆಯ ದಂತವನ್ನು ತಂದು ಮನೆಯಲ್ಲಿ ಇಟ್ಟುಕೊಂಡಿದ್ದರು. ಆರು ತಿಂಗಳಿಂದ ಇವರ ಬಳಿಯೇ ಇತ್ತು. ಇಂದು ಮಾರಾಟ ಮಾಡಲು ಮುಂದಾಗಿದ್ದಾಗ ಪೊಲೀಸರು ಕಾರ್ಯಾಚರಣೆ ನಡೆಸಿ ಮೂವರು ಮಧ್ಯವರ್ತಿಗಳು ಸೇರಿದಂತೆ ಐವರನ್ನು ಬಂಧಿಸಿದ್ದಾರೆ.

ಈ ಕಾರ್ಯಾಚರಣೆಯಲ್ಲಿ ಮಡಿಕೇರಿ ಅರಣ್ಯ ಘಟಕದ ಎಸ್ಪಿ ಚಂದ್ರಕಾಂತ್, ನಗರದ ಪೊಲೀಸ್ ಅರಣ್ಯ ಸಂಚಾರಿ ದಳದ ಸಬ್ ಇನ್ಸ್​​ಪೆಕ್ಟರ್ ಶರತ್, ಸಿಬ್ಬಂದಿ ಹೆಚ್.ದೇವರಾಜ್, ಡಿ.ಹೆಚ್.ದಿನೇಶ್, ಎಸ್.ಕೆ.ದಿವಾಕರ್, ಕೆ.ಎಸ್. ದಿಲೀಪ್, ಹಾಲೇಶ್, ಹೇಮಾವತಿ, ತಿಮ್ಮಶೆಟ್ಟಿಯವರು ಭಾಗವಹಿಸಿದ್ದರು.

ಓದಿ : ಬೆಂಗಳೂರಿನಲ್ಲಿ ಉಗ್ರ ತಾಲೀಬ್ ಹುಸೇನ್ ಬಂಧನ: ಐಎಸ್‌ಡಿಯಿಂದ ಮನೆ‌ ಮಾಲೀಕನ ವಿಚಾರಣೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.