ಚಿಕ್ಕಮಗಳೂರು: ನಮಗೆ ನಮ್ಮ ಮಾತೃಭಾಷೆಯೇ ಶ್ರೇಷ್ಠ. ಇನ್ನೊಂದು ಭಾಷೆಯನ್ನು ನಾವು ಅತಿಕ್ರಮಿಸುವವರಲ್ಲ. ಅವರನ್ನು ಗೌರವಿಸುತ್ತೇವೆ ಎಂದು ಚಿಕ್ಕಮಗಳೂರಿನಲ್ಲಿ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಹೇಳಿದರು.
ಶೇ.48 ರಷ್ಟು ನಮ್ಮ ದೇಶದ ಜನರಿಗೆ ಹಿಂದಿ ಮಾತೃಭಾಷೆಯಾಗಿದೆ. ಹೀಗಾಗಿ ಸಂಪರ್ಕ ಭಾಷೆಯಾಗಿ ಹಿಂದಿಯನ್ನು ಬಳಸಿಕೊಳ್ಳಬಹುದು. ಆದರೆ ನಮ್ಮ ಮಾತೃಭಾಷೆಯೇ ನಮಗೆ ಹೆಮ್ಮೆಯ ವಿಷಯ ಎಂದರು.
ಇದನ್ನೂ ಓದಿ:ಹಿಂದಿ ರಾಷ್ಟ್ರೀಯ ಭಾಷೆ ಅಲ್ಲ: ಸುದೀಪ್ ಮಾತಿಗೆ ಧ್ವನಿಗೂಡಿಸಿದ ಕನ್ನಡ ತಾರೆಯರು