ಚಿಕ್ಕಮಗಳೂರು: ಕೊರೊನಾ ವೈರಸ್ ಭೀತಿಯಿಂದ ಇಡೀ ಭಾರತವೇ ಲಾಕ್ ಡೌನ್ ಆಗಿದ್ದು, ಅನಾಥರು, ನಿರಶ್ರಿತರು, ಭಿಕ್ಷುಕರಿಗೆ ಸಾಕಷ್ಟು ತೊಂದರೆ ಆಗಿತ್ತು. ಕೆಲವರನ್ನು ಹುಡುಕಿ ಜಿಲ್ಲಾಡಳಿತ ನಗರದಲ್ಲಿರುವ ನಿರಾಶ್ರಿತ ಕೇಂದ್ರದಲ್ಲಿ ರಕ್ಷಣೆ ಮಾಡಿ ಆಶ್ರಯ ನೀಡಲಾಗಿದೆ.
ಈ ನಿರಶ್ರಿತರ ಕೇಂದ್ರದಲ್ಲಿದ್ದ ವಯೋ ವೃದ್ಧೆ ನಳಿನಾ(70) ಸಾವನಪ್ಪಿದ್ದು, ಲಿವರ್ ಸಮಸ್ಯೆಯಿಂದ ಮೃತಪಟ್ಟಿದ್ದಾರೆ ಎನ್ನಲಾಗಿದೆ.
![old age woman dies in Refugee Center](https://etvbharatimages.akamaized.net/etvbharat/prod-images/kn-ckm-01-vrudde-saavu-av-7202347_13042020123623_1304f_1586761583_970.jpg)
ಬೇರೆ ಊರಿಂದ ಬಂದಿದ್ದ ವೃದ್ಧೆ ನಿರಾಶ್ರಿತ ಕೇಂದ್ರದಲ್ಲಿ ವೃದ್ಧೆ ವಾಸವಾಗಿದ್ದರು. ಅನಾರೋಗ್ಯದ ಹಿನ್ನೆಲೆ ಜಿಲ್ಲಾಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೂಡ ನೀಡಲಾಗಿತ್ತು.
![old age woman dies in Refugee Center](https://etvbharatimages.akamaized.net/etvbharat/prod-images/kn-ckm-01-vrudde-saavu-av-7202347_13042020123623_1304f_1586761583_525.jpg)
ಬಳ್ಳಾರಿಯಿಂದ ನಡೆದುಕೊಂಡು ಬಂದು ನಿರಾಶ್ರಿತರ ಕೇಂದ್ರದಲ್ಲಿದ್ದ ಸತ್ಯನಾರಾಯಣ ಎಂಬುವವರು ಅಂತ್ಯ ಸಂಸ್ಕಾರದ ವಿಧಿವಿಧಾನ ನೆರವೇರಿಸಿದ್ದಾರೆ.