ETV Bharat / state

ವಾಹನ ತೆರಳಲು ರಸ್ತೆ ಇಲ್ಲ, ಮರದ ಕೊಂಬೆಗೆ ಕಟ್ಟಿ ಮೃತದೇಹ ಸಾಗಿಸಿದ್ರು!: ಕಾಫಿನಾಡಿನ ಕರುಣಾಜನಕ ಸ್ಟೋರಿ

ತಾವು ವಾಸವಾಗಿರುವ ಗ್ರಾಮಕ್ಕೆ ತೆರಳಲು ಸರಿಯಾದ ರಸ್ತೆ ಸಂಪರ್ಕ ಇಲ್ಲದ ಕಾರಣ ಮೃತದೇಹವನ್ನು ಆದಿ ಮಾನವರಂತೆ ಮರದ ಕೊಂಬೆಗೆ ಕಟ್ಟಿ ಸಾಗಿಸಿರುವ ಘಟನೆ ನಡೆದಿದೆ.

No road specility to Chikkamagaluru this village

author img

By

Published : Jun 3, 2020, 12:57 AM IST

Updated : Jun 3, 2020, 9:57 AM IST

ಚಿಕ್ಕಮಗಳೂರು: ಸರಿಯಾದ ರಸ್ತೆ ಸಂಪರ್ಕವಿಲ್ಲದ ಕಾರಣ ಮೃತದೇಹವನ್ನು ಮರದ ಕೊಂಬೆಗೆ ಕಟ್ಟಿಕೊಂಡು ಸುಮಾರು ಎರಡ್ಮೂರು ಕಿ.ಮೀ ಹೊತ್ತುಕೊಂಡು ಸಾಗಿರುವ ಘಟನೆ ನಡೆದಿದೆ.

ಚಿಕ್ಕಮಗಳೂರಿನಲ್ಲಿ ಕರುಣಾಜನಕ ಘಟನೆ!

ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಕಳಸ ಸಮೀಪದ ಮನುಕುಬ್ರಿ ಗ್ರಾಮದಲ್ಲಿ ಈ ಮನಕಲುಕುವ ಘಟನೆ ನಡೆದಿದೆ. ಗಿರಿ ಜನರೇ ಹೆಚ್ಚು ವಾಸಿಸುವ ಮನುಕುಬ್ರಿ ಗ್ರಾಮದಲ್ಲಿ ಶಾರದಮ್ಮ (50) ಎಂಬವರು ಅನಾರೋಗ್ಯದಿಂದ ಸಾವನ್ನಪ್ಪಿದ್ದರು. ಅವರ ಮೃತದೇಹವನ್ನು ಗ್ರಾಮಕ್ಕೆ ತರಲು ಸರಿಯಾದ ರಸ್ತೆ ಇಲ್ಲದ ಕಾರಣ ಕಾಡು ದಾರಿಯಲ್ಲಿ ಮರದ ರೆಂಬೆಗಳಿಗೆ ಕಟ್ಟಿಕೊಂಡು ಕಾಲು ದಾರಿಯಲ್ಲಿ ಸಾಗಿ ಗ್ರಾಮ ತಲುಪಿದ್ದಾರೆ.

No road specility to Chikkamagaluru this village
ಮೃತದೇಹ ಮರದ ಕೊಂಬೆಗೆ ಕಟ್ಟಿ ಸಾಗಿಸಿದ್ರು

ಶಾರದಮ್ಮರ ಆರೋಗ್ಯ ತೀರಾ ಹದಗೆಟ್ಟಾಗ ಕೂಡ ಇದೇ ರೀತಿ ಕೊಂಬೆಗೆ ಕಟ್ಟಿಕೊಂಡು ಆಸ್ಪತ್ರೆಗೆ ಸಾಗಿಸಿದ್ರು. ಇಂದು ಅವರು ತೀರಿಕೊಂಡ ಬಳಿಕ ದಾರಿ ಇಲ್ಲದೆ ಅದೇ ರೀತಿ ಮತ್ತೆ ಗ್ರಾಮಕ್ಕೆ ಮೃತದೇಹವನ್ನು ವಾಪಸ್ ತಂದಿದ್ದಾರೆ.

ಈ ಘಟನೆ ಸ್ಥಳೀಯರು ಮೊಬೈಲ್​ನಲ್ಲಿಯಾಗಿದೆ. ಗ್ರಾಮಕ್ಕೆ ಹಲವಾರು ವರ್ಷಗಳಿಂದ ಮೂಲಭೂತ ಸೌಕರ್ಯ ಒದಗಿಸುವಂತೆ ಹೋರಾಟ ನಡೆಸಿದರೂ ಪ್ರಯೋಜನವಾಗಿಲ್ಲ. ಈ ಹಿಂದೆಯೂ ಕೂಡ ಇಂತಹ ಅನೇಕ ಘಟನೆ ಈ ಗ್ರಾಮದಲ್ಲಿ ನಡೆದಿರುವ ಉದಾಹರಣೆಗಳಿವೆ.

Last Updated : Jun 3, 2020, 9:57 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.