ETV Bharat / state

7 ಐಪಿಎಸ್ ಅಧಿಕಾರಿಗಳ ವರ್ಗಾವಣೆ: ಯಾರು, ಎಲ್ಲಿಗೆ? ಇಲ್ಲಿದೆ ಪಟ್ಟಿ - IPS OFFICERS TRANSFER

ಲಕ್ಷ್ಮಣ್ ನಿಂಬರಗಿ, ಜಿ.ಸಂಗೀತಾ, ಚೆನ್ನಬಸವಣ್ಣ ಲಂಗೋಟಿ ಸೇರಿದಂತೆ 7 ಐಪಿಎಸ್​ ಅಧಿಕಾರಿಗಳನ್ನು ತಕ್ಷಣದಿಂದಲೇ ಜಾರಿಗೆ ಬರುವಂತೆ ವರ್ಗಾವಣೆಗೊಳಿಸಿ ರಾಜ್ಯ ಸರ್ಕಾರ ಆದೇಶಿಸಿದೆ.

Vidhan Soudha
ವಿಧಾನಸೌಧ (ETV Bharat)
author img

By ETV Bharat Karnataka Team

Published : Nov 15, 2024, 1:28 PM IST

ಬೆಂಗಳೂರು: 7 ಐಪಿಎಸ್ ಅಧಿಕಾರಿಗಳನ್ನು ತಕ್ಷಣದಿಂದಲೇ ಜಾರಿಗೆ ಬರುವಂತೆ ವರ್ಗಾವಣೆಗೊಳಿಸಿ ರಾಜ್ಯ ಸರ್ಕಾರ ಶುಕ್ರವಾರ ಆದೇಶಿಸಿದೆ.

ಹುದ್ದೆಗಾಗಿ ಕಾಯುತ್ತಿದ್ದ ಶಾಂತನು ಸಿನ್ಹಾ ಅವರನ್ನು ಸಿಐಡಿ ವಿಭಾಗದ ಖಾಲಿ ಇದ್ದ ಡಿಐಜಿಪಿ ಹುದ್ದೆಗೆ ನೇಮಕ ಮಾಡಲಾಗಿದೆ. ಯಾದಗಿರಿಯ ಎಸ್​ಪಿ ಜಿ.ಸಂಗೀತಾ (ಐಪಿಎಸ್​) ಅವರನ್ನು ಅಪರಾಧ ತನಿಖಾ ಇಲಾಖೆಯ ಎಸ್‌ಪಿಯಾಗಿ ಹಾಗೂ ಅಪರಾಧ ತನಿಖಾ ಇಲಾಖೆಯ ಎಸ್​ಪಿ ಪೃಥ್ವಿಕ್ ಶಂಕರ್(ಐಪಿಎಸ್​) ಅವರನ್ನು ಯಾದಗಿರಿಯ ಎಸ್​ಪಿಯಾಗಿ ವರ್ಗಾವಣೆ ಮಾಡಲಾಗಿದೆ.

ಬೆಂಗಳೂರು ಸಿಟಿ ಕ್ರೈಂ ವಿಭಾಗದ ಡಿಸಿಪಿ ಅಬ್ದುಲ್​ ಅಹದ್​ ಅವರನ್ನು, ಬಿಎಂಟಿಸಿ ಭದ್ರತಾ ಮತ್ತು ವಿಚಕ್ಷಣೆ ವಿಭಾಗದ ನಿರ್ದೇಶಕ ಐಎಎಸ್​ ಅಧಿಕಾರಿ ಸದಾಶಿವ ಪ್ರಭು ಬಿ. ವರ್ಗಾವಣೆ ಹಿನ್ನೆಲೆಯಲ್ಲಿ ಆ ಜಾಗಕ್ಕೆ ವರ್ಗಾವಣೆ ಮಾಡಲಾಗಿದೆ. ಬೆಂಗಳೂರು ರಾಜ್ಯ ಅಪರಾಧ ದಾಖಲೆ ಬ್ಯೂರೋದ ಎಸ್​ಪಿ ಲಕ್ಷ್ಮಣ್ ನಿಂಬರಗಿ(ಐಪಿಎಸ್​) ಅವರನ್ನು ಖಾಲಿಯಿದ್ದ ವಿಜಯಪುರ ಎಸ್​ಪಿ ಹುದ್ದೆಗೆ ವರ್ಗಾವಣೆಗೊಳಿಸಲಾಗಿದೆ.

ಕರ್ನಾಟಕ ಪೊಲೀಸ್ ಅಕಾಡೆಮಿ ಮೈಸೂರು ಉಪನಿರ್ದೇಶಕ ಚೆನ್ನಬಸವಣ್ಣ ಲಂಗೋಟಿ(ಐಪಿಎಸ್​) ಅವರನ್ನು ಡಾ.ಎಂ.ಬಿ.ಬೋರಲಿಂಗಯ್ಯ (ಐಪಿಎಸ್) ಅವರಿಂದ ತೆರವಾಗಿರುವ ಕರ್ನಾಟಕ ಪೊಲೀಸ್ ಅಕಾಡೆಮಿ ಮೈಸೂರು ನಿರ್ದೇಶಕ ಹುದ್ದೆಗೆ ವರ್ಗಾವಣೆ ಮಾಡಲಾಗಿದೆ.

ಭಯೋತ್ಪಾದನೆ ನಿಗ್ರಹ ಕೇಂದ್ರ ಬೆಂಗಳೂರಿನ ಎಸ್​ಪಿ ಶಿವಾಂಶು ರಜಪೂತ್ ಅವರನ್ನು ರಾಜ್ಯ ಅಪರಾಧ ದಾಖಲೆಗಳ ವಿಭಾಗದ ಎಸ್​ಪಿಯಾಗಿದ್ದ ಲಕ್ಷ್ಮಣ ನಿಂಬರ್ಗಿ ವರ್ಗಾವಣೆ ಹಿನ್ನೆಲೆಯಲ್ಲಿ ಆ ಜಾಗಕ್ಕೆ ವರ್ಗಾವಣೆಗೊಳಿಸಿ ಆದೇಶಿಸಲಾಗಿದೆ.

ಇದನ್ನೂ ಓದಿ: ಪಕ್ಷಪಾತ ಆರೋಪ: ಮಹಾರಾಷ್ಟ್ರ ಡಿಜಿಪಿ ರಶ್ಮಿ ಶುಕ್ಲಾ ವರ್ಗಾವಣೆಗೆ ಚುನಾವಣಾ ಆಯೋಗ ಆದೇಶ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.