ETV Bharat / sports

ಪರ್ತ್​ ಟೆಸ್ಟ್​ಗೂ ಮುನ್ನ ಟೀಂ ಇಂಡಿಯಾಗೆ ಆಘಾತ: ಅಭ್ಯಾಸ ಪಂದ್ಯದಲ್ಲಿ ಕೆಎಲ್​​ ರಾಹುಲ್​ಗೆ ಗಾಯ, ಓಪನರ್​ ಆಗಿ ಯಾರು? - KL RAHUL LATEST NEWS

ಬಾರ್ಡರ್​ ಗವಾಸ್ಕರ್​ ಟೆಸ್ಟ್​ ಸರಣಿಗೂ ಮುನ್ನವೇ ಅಭ್ಯಾಸ ಪಂದ್ಯದಲ್ಲಿ ಕೆಎಲ್​ ರಾಹುಲ್​ ಗಾಯಗೊಂಡಿದ್ದಾರೆ.

ಕೆ ಎಲ್​ ರಾಹುಲ್​
ಕೆ ಎಲ್​ ರಾಹುಲ್​ (IANS)
author img

By ETV Bharat Sports Team

Published : Nov 15, 2024, 1:37 PM IST

KL Rahul Injury: ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ 5 ಪಂದ್ಯಗಳ ಬಾರ್ಡರ್​ ಗವಾಸ್ಕರ್​ ಟೆಸ್ಟ್ ಸರಣಿ ಇದೇ ತಿಂಗಳು ನವೆಂಬರ್ 22 ರಿಂದ ಪರ್ತ್‌ನಲ್ಲಿ ಪ್ರಾರಂಭವಾಗಲಿದೆ. ಆದರೇ ಮೊದಲ ಟೆಸ್ಟ್​ ಮುನ್ನವೇ ಭಾರತ ತಂಡಕ್ಕೆ ದೊಡ್ಡ ಆಘಾತ ಎದುರಾಗಿದೆ. ಅಭ್ಯಾಸ ಪಂದ್ಯದ ವೇಳೆ ಟೀಂ ಇಂಡಿಯಾದ ಸ್ಟಾರ್ ಬ್ಯಾಟ್ಸ್‌ಮನ್ ಕೆಎಲ್​ ರಾಹುಲ್​ ಗಾಯಗೊಂಡಿದ್ದಾರೆ.

ಆಸ್ಟ್ರೇಲಿಯಾ ವಿರುದ್ಧ ಪರ್ತ್​ನಲ್ಲಿ ನಡೆಯಲಿರುವ ಮೊದಲ ಟೆಸ್ಟ್ ಪಂದ್ಯದಲ್ಲಿ ರೋಹಿತ್​ ಶರ್ಮಾ ಆಡುವುದು ಡೌಟ್​ ಎಂದೇ ಹೇಳಲಾಗುತ್ತಿದೆ. ಒಂದು ವೇಳೆ ಅವರು ಆಡದೆ ಇದ್ದರೆ ಅವರ ಸ್ಥಾನಕ್ಕೆ ಓಪನರ್ ಆಗಿ ಕೆಎಲ್​ ರಾಹುಲ್​ (KL Rahul) ಪರ್ತ್‌ನಲ್ಲಿ ಆಡಲಿದ್ದಾರೆ. ಆದರೇ ಇದರ ನಡುವೆಯೇ ಕೆಟ್ಟ ಸುದ್ದಿಯೊಂದು ಹೊರಬಿದ್ದಿದೆ. ಇಂದು ಪರ್ತ್‌ನ WACA ಮೈದಾನದಲ್ಲಿ ನಡೆದ ಮೂರು ದಿನಗಳ ಅಭ್ಯಾಸ ಪಂದ್ಯದ ವೇಳೆ ಕೆಎಲ್ ರಾಹುಲ್ ಗಾಯಗೊಂಡಿದ್ದಾರೆ.

ಭಾರತ ಮತ್ತು ಭಾರತ-ಎ ನಡುವಿನ ಮೂರು ದಿನಗಳ ಅಭ್ಯಾಸ ಪಂದ್ಯವು ಪರ್ತ್‌ನ WACA ಮೈದಾನದಲ್ಲಿ ನಡೆಯುತ್ತಿದೆ. ಡಬ್ಲ್ಯುಎಸಿಎ ಮೈದಾನದಲ್ಲಿ ಬೌನ್ಸ್ ಬಾಲ್ ಆಡುವಾಗ ಕೆಎಲ್ ರಾಹುಲ್ ಬಲ ಮೊಣಕೈಗೆ ಪೆಟ್ಟಾಗಿದೆ. ಈ ಹಿನ್ನೆಲೆ ಕೆಎಲ್ ರಾಹುಲ್ ಬ್ಯಾಟಿಂಗ್ ಮಾಡಲು ಸಾಧ್ಯವಾಗದೆ ಮೈದಾನದಿಂದ ನಿರ್ಗಮಿಸಿದ್ದಾರೆ ಎಂದು IANS ವರದಿ ಮಾಡಿದೆ.

ಇದೀಗ ಟೀಂ ಇಂಡಿಯಾಗೆ ದೊಡ್ಡ ಹೊಡೆತ ಬಿದ್ದಂತಾಗಿದೆ. ಪರ್ತ್‌ನಲ್ಲಿ ನಡೆಯಲಿರುವ ಮೊದಲ ಟೆಸ್ಟ್‌ನಲ್ಲಿ ರೋಹಿತ್ ಶರ್ಮಾ ಆಡುತ್ತಾರೆ ಎಂದು ಇನ್ನೂ ಖಚಿತವಾಗಿಲ್ಲ. ಇಂತಹ ಪರಿಸ್ಥಿತಿಯಲ್ಲಿ ಕೆಎಲ್ ರಾಹುಲ್ ಗಾಯಗೊಂಡಿರುವುದು ಟೀಂ ಇಂಡಿಯಾದ ಪರಿಸ್ಥಿತಿಯನ್ನು ಇನ್ನಷ್ಟು ಹದಗೆಡಿಸಬಹುದಾಗಿದೆ.

ಸದ್ಯ ಕೆಟ್ಟ ಫಾರ್ಮ್​ನಿಂದ ಕಂಗೆಟ್ಟಿರುವ ಕೆಎಲ್ ರಾಹುಲ್ ಟೆಸ್ಟ್ ಪಂದ್ಯಗಳಲ್ಲಿ ತಮ್ಮ ಕೊನೆಯ 5 ಇನ್ನಿಂಗ್ಸ್‌ಗಳಲ್ಲಿ 16, 22*, 68, 0, 12 ರನ್ ಮಾತ್ರ ಗಳಿಸಿದ್ದಾರೆ. ರಾಹುಲ್ ಇದುವರೆಗೆ ಒಟ್ಟಾರೆ 53 ಟೆಸ್ಟ್ ಪಂದ್ಯಗಳನ್ನು ಆಡಿದ್ದು 91 ಇನ್ನಿಂಗ್ಸ್‌ಗಳಲ್ಲಿ 2981 ರನ್ ಗಳಿಸಿದ್ದಾರೆ. ಈ ಅವಧಿಯಲ್ಲಿ ಕೆಎಲ್ ರಾಹುಲ್ 8 ಶತಕ ಮತ್ತು 15 ಅರ್ಧ ಶತಕ ಗಳಿಸಿದ್ದಾರೆ. ಕೆಎಲ್ ರಾಹುಲ್ ಅವರ ಅತ್ಯುತ್ತಮ ಟೆಸ್ಟ್ ಸ್ಕೋರ್ 199 ರನ್ ಆಗಿದೆ.

ಓಪರ್​ ಯಾರು: ರೋಹಿತ್ ಶರ್ಮಾ ಮತ್ತು ಕೆಎಲ್ ರಾಹುಲ್ ಇಬ್ಬರೂ ಆಸ್ಟ್ರೇಲಿಯಾ ವಿರುದ್ಧದ ಮೊದಲ ಟೆಸ್ಟ್ ಪಂದ್ಯ ಆಡಲು ಸಾಧ್ಯವಾಗದಿದ್ದರೆ, ಅವರ ಸ್ಥಾನಕ್ಕೆ ಅಭಿಮನ್ಯು ಈಶ್ವರನ್​ಗೆ ಚಾನ್ಸ್​ ಸಿಗುವ ಸಾಧ್ಯೆತೆ ಇದೆ. ಅಭಿಮನ್ಯು ಈಶ್ವರನ್​ ಓಪನರ್​ ಆಗಿ ಪ್ರಥಮ ದರ್ಜೆ ಕ್ರಿಕೆಟ್​ನಲ್ಲಿ ಉತ್ತಮ ದಾಖಲೆ ಹೊಂದಿದ್ದಾರೆ. ಇವರು ಒಟ್ಟು 101 ಪಂದ್ಯಗಳನ್ನು ಆಡಿದ್ದು, 173 ಇನ್ನಿಂಗ್ಸ್​ಗಳಲ್ಲಿ 7675 ರನ್​ ಗಳಿಸಿದ್ದಾರೆ. ಇದರಲ್ಲಿ 27 ಶತಕ ಮತ್ತು 29 ಅರ್ಧಶತಕ ಸೇರಿವೆ. ರೋಹಿತ್​, ರಾಹುಲ್​ ಅನುಪಸ್ಥಿತಿಯಲ್ಲಿ ಈಶ್ವರನ್​ ಬೆಸ್ಟ್​ ಆಯ್ಕೆ ಆಗುವ ಸಾಧ್ಯತೆ ಇದೆ.

ಇದನ್ನೂ ಓದಿ: ವಿರಾಟ್​ ಕೊಹ್ಲಿ-ರೋಹಿತ್​ ಶರ್ಮಾರನ್ನು ಕಾಡುತ್ತಿದ್ದ ದಿಗ್ಗಜ ಬೌಲರ್​ ನಿವೃತ್ತಿ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.