ETV Bharat / sports

ಚಾಂಪಿಯನ್ಸ್ ಟ್ರೋಫಿಯಲ್ಲಿ ಸತತ 2 'ಗೋಲ್ಡನ್​ ಬ್ಯಾಟ್'​ ಗೆದ್ದ ಏಕೈಕ ಬ್ಯಾಟರ್​ ಯಾರು? - GOLDEN BAT WINNERS

ಚಾಂಪಿಯನ್ಸ್​ ಟ್ರೋಫಿಯಲ್ಲಿ ಭಾರತದ ಸ್ಟಾರ್​ ಪ್ಲೇಯರ್​ ಸತತ ಎರಡು ಬಾರಿ ಗೋಲ್ಡನ್​ ಬ್ಯಾಟ್​ ಪ್ರಶಸ್ತಿ ಗೆದ್ದುಕೊಂಡಿದ್ದಾರೆ.

golden bat winners india  golden bat winners list  shikhar dhawan golden bat  icc champions trophy
ಚಾಂಪಿಯನ್ಸ್ ಟ್ರೋಫಿ 'ಗೋಲ್ಡನ್​ ಬ್ಯಾಟ್'​ (AFP)
author img

By ETV Bharat Sports Team

Published : Feb 24, 2025, 9:37 PM IST

ICC Champions Trophy Golden Bat Winners: ಐಸಿಸಿ ಚಾಂಪಿಯನ್ಸ್​ ಟ್ರೋಫಿ-2025 ಪ್ರಾರಂಭವಾಗಿ 5 ಪಂದ್ಯಗಳು ಮುಕ್ತಾಯಗೊಂಡಿವೆ. ಇಂದಿನ ಪಂದ್ಯದಲ್ಲಿ ಬಾಂಗ್ಲಾದೇಶ ಮತ್ತು ನ್ಯೂಜಿಲೆಂಡ್​ ತಂಡಗಳು ಮುಖಾಮುಖಿಯಾಗಿವೆ.

ಟೀಂ ಇಂಡಿಯಾ ಬಾಂಗ್ಲಾದೇಶ ಮತ್ತು ಪಾಕಿಸ್ತಾನ ವಿರುದ್ಧ ಎರಡು ಪಂದ್ಯಗಳಲ್ಲಿ ಗೆಲುವು ಸಾಧಿಸಿದ್ದು ಭಾನುವಾರ ನ್ಯೂಜಿಲೆಂಡ್​ ವಿರುದ್ಧ ಗ್ರೂಪ್​ ಹಂತದ ಕೊನೆಯ ಪಂದ್ಯವನ್ನಾಡಲಿದೆ. ಬಲಿಷ್ಠ ತಂಡದೊಂದಿಗೆ ಕಣಕ್ಕಿಳಿದಿರುವ ಭಾರತ ಮೂರನೇ ಬಾರಿಗೆ ಕಪ್ ಗೆಲ್ಲುವತ್ತ ದೃಷ್ಟಿ ನೆಟ್ಟಿದೆ. ಮತ್ತೊಂದೆಡೆ 8 ವರ್ಷಗಳ ಬಳಿಕ ನಡೆಯುತ್ತಿರುವ ಈ ಟೂರ್ನಿಯಲ್ಲಿ ಗೊಲ್ಡನ್​ ಬ್ಯಾಟ್​ ಗೆಲ್ಲುವವರು ಯಾರು ಎಂಬುದು ಅಭಿಮಾನಿಗಳಲ್ಲಿ ಕುತೂಹಲ ಮೂಡಿಸಿದೆ.

ಗೋಲ್ಡನ್​ ಬ್ಯಾಟ್​ ಪ್ರಶಸ್ತಿ ಎಂದರೇನು?: ಚಾಂಪಿಯನ್ಸ್​ ಟ್ರೋಫಿ ಟೂರ್ನಿಯಲ್ಲಿ ಅತೀ ಹೆಚ್ಚು ರನ್​ ಗಳಿಸಿದ​ ಆಟಗಾರನಿಗೆ ಟೂರ್ನಿ ಬಳಿಕ ಈ ಪ್ರಶಸ್ತಿ ನೀಡಲಾಗುತ್ತದೆ. ಆದರೆ ನಿಮಗೆ ಗೊತ್ತಾ? ಚಾಂಪಿಯನ್ಸ್ ಟ್ರೋಫಿಯಲ್ಲಿ ಈವರೆಗೂ ಮೂವರು ಭಾರತೀಯ ಕ್ರಿಕೆಟರ್​ಗಳು ಗೋಲ್ಡನ್​ ಬ್ಯಾಟ್​ ಗೆದ್ದಿದ್ದಾರೆ. ಅದರಲ್ಲಿ ಓರ್ವ ಸ್ಟಾರ್​ ಪ್ಲೇಯರ್​ ಸತತ ಎರಡು ಸೀಸನ್​ನಲ್ಲಿ ಗೋಲ್ಡನ್​ ಬ್ಯಾಟ್​ ಪ್ರಶಸ್ತಿ ಪಡೆದು ದಾಖಲೆ ಬರೆದಿದ್ದಾರೆ.

ಗೋಲ್ಡನ್​ ಬ್ಯಾಟ್​ ಗೆದ್ದ ಭಾರತೀಯರು: 2000ನೇ ಇಸವಿಯಲ್ಲಿ ನಡೆದಿದ್ದ ಚಾಂಪಿಯನ್ಸ್​ ಟ್ರೋಫಿಯಲ್ಲಿ ಸೌರವ್ ಗಂಗೂಲಿ ಅತೀ ಹೆಚ್ಚು ರನ್ (348) ಗಳಿಸಿ ಗೋಲ್ಡನ್​ ಬ್ಯಾಟ್​ ಪಡೆದಿದ್ದರು. 2002ರಲ್ಲಿ ಮಾಜಿ ಆರಂಭಿಕ ಬ್ಯಾಟರ್​ ವೀರೇಂದ್ರ ಸೆಹ್ವಾಗ್ 271 ರನ್ ಗಳಿಸಿ ಈ ಪ್ರಶಸ್ತಿ ಪಡೆದುಕೊಂಡಿದ್ದರು. ಆದರೆ, ಶಿಖರ್ ಧವನ್ ಮಾತ್ರ ಸತತ ಎರಡು ಬಾರಿ ಈ ಪ್ರಶಸ್ತಿ ಪಡೆದು ದಾಖಲೆ ಬರೆದಿದ್ದಾರೆ. ಇವರನ್ನು ಹೊರತುಪಡಿಸಿ ಬೇರೆ ಯಾವೊಬ್ಬ ಪ್ಲೇಯರ್​ ಸತತ ಎರಡು ಬಾರಿ ಗೋಲ್ಡನ್ ಬ್ಯಾಟ್​ ಪಡೆಯಲು ಸಾಧ್ಯವಾಗಿಲ್ಲ.

ಶಿಖರ್​ ಧವನ್​ ಸಾಧನೆ: 2013ರಲ್ಲಿ ನಡೆದಿದ್ದ ಚಾಂಪಿಯನ್ಸ್ ಟ್ರೋಫಿಯಲ್ಲಿ ಶಿಖರ್​ ಧವನ್ ದಕ್ಷಿಣ ಆಫ್ರಿಕಾ ಮತ್ತು ವೆಸ್ಟ್ ಇಂಡೀಸ್ ವಿರುದ್ಧ ಪಂದ್ಯಗಳಲ್ಲಿ ಶತಕ ಬಾರಿಸಿದ್ದರು. ಇದರೊಂದಿಗೆ ಟೂರ್ನಿಯಲ್ಲಿ ಒಟ್ಟು 363 ರನ್ ಗಳಿಸಿ ಗೋಲ್ಡನ್​ ಬ್ಯಾಟ್​ ಪಡೆದುಕೊಂಡರು.

2017ರಲ್ಲಿ ನಡೆದಿದ್ದ ಚಾಂಪಿಯನ್ಸ್ ಟ್ರೋಫಿಯಲ್ಲಿ ಧವನ್​ ಮತ್ತೊಮ್ಮೆ ತಮ್ಮ ಸಾಮರ್ಥ್ಯ ತೋರಿಸಿದ್ದರು. ಅವರು ಐದು ಇನ್ನಿಂಗ್ಸ್‌ಗಳಲ್ಲಿ 338 ರನ್ ಬಾರಿಸಿದ್ದರು. ಧವನ್ ಅವರ ಬ್ಯಾಟಿಂಗ್​ ನೆರವಿನಿಂದ ಭಾರತ ಈ ಟೂರ್ನಿಯಲ್ಲಿ ಫೈನಲ್​ಗೂ ತಲುಪಿತ್ತು. ಆದರೆ ಪಾಕ್​ ವಿರುದ್ಧ ಭಾರತ ಸೋಲು ಕಂಡಿತ್ತು. ಆದರೆ ಧವನ್​ ಟೂರ್ನಿಯಲ್ಲಿ ಅತೀಹೆಚ್ಚು ರನ್​ಗಳಿಸಿದ ಆಟಗಾರನಾಗಿ ಗೋಲ್ಡನ್​ ಬ್ಯಾಟ್​ ಪಡೆದರು.

ಎರಡು ಋತುಗಳಲ್ಲಿ 10 ಇನ್ನಿಂಗ್ಸ್‌ ಆಡಿದ್ದ ಧವನ್​ ಒಟ್ಟು 701 ರನ್ ಗಳಿಸಿದ್ದರು. ಇದರೊಂದಿಗೆ, ಚಾಂಪಿಯನ್ಸ್ ಟ್ರೋಫಿಯಲ್ಲಿ ಭಾರತದ ಪರ ಅತೀ ಹೆಚ್ಚು ರನ್ ಗಳಿಸಿದ ಆಟಗಾರರಾದರು.

ಚಾಂಪಿಯನ್ಸ್ ಟ್ರೋಫಿ- ಗೋಲ್ಡನ್ ಬ್ಯಾಟ್ ವಿಜೇತರು:

  • 1998 - ಫಿಲೋ ವ್ಯಾಲೇಸ್ (ವೆಸ್ಟ್ ಇಂಡೀಸ್)
  • 2000 - ಸೌರವ್ ಗಂಗೂಲಿ (ಭಾರತ)
  • 2002 - ವೀರೇಂದ್ರ ಸೆಹ್ವಾಗ್ (ಭಾರತ)
  • 2004 - ಮಾರ್ಕಸ್ ಟ್ರೆಸ್ಕೊಥಿಕ್ (ಇಂಗ್ಲೆಂಡ್)
  • 2006 - ಕ್ರಿಸ್ ಗೇಲ್ (ವೆಸ್ಟ್ ಇಂಡೀಸ್)
  • 2009 - ರಿಕಿ ಪಾಂಟಿಂಗ್ (ಆಸ್ಟ್ರೇಲಿಯಾ)
  • 2013 - ಶಿಖರ್ ಧವನ್ (ಭಾರತ)
  • 2017 - ಶಿಖರ್ ಧವನ್ (ಭಾರತ)

ಇದನ್ನೂ ಓದಿ: ವಿರಾಟ್​​ ಕೊಹ್ಲಿ ಶತಕ ಬಾರಿಸುತ್ತಿದ್ದಂತೆ ಪಾಕಿಸ್ತಾನದಲ್ಲಿ ಹೆಣ್ಣುಮಕ್ಕಳ ಸಂಭ್ರಮ:​ ವಿಡಿಯೋ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.