ETV Bharat / international

ಬೃಹತ್ ಸಂಖ್ಯೆಯಲ್ಲಿ ಆತ್ಮಾಹುತಿ ಡ್ರೋನ್ ತಯಾರಿಕೆಗೆ ಉ.ಕೊರಿಯಾ ನಾಯಕ ಕಿಮ್ ಜಾಂಗ್ ಆದೇಶ - SUICIDE ATTACK DRONES

ಆತ್ಮಾಹುತಿ ಡ್ರೋನ್​ಗಳನ್ನು ಸಾಮೂಹಿಕವಾಗಿ ಉತ್ಪಾದಿಸಲು ಉತ್ತರ ಕೊರಿಯಾ ಮುಂದಾಗಿದೆ.

ಆತ್ಮಾಹುತಿ ಡ್ರೋನ್ ತಯಾರಿಕೆಗೆ ಉತ್ತರ ಕೊರಿಯಾ ನಾಯಕ ಕಿಮ್ ಜಾಂಗ್ ಆದೇಶ
ಆತ್ಮಾಹುತಿ ಡ್ರೋನ್ ತಯಾರಿಕೆಗೆ ಉತ್ತರ ಕೊರಿಯಾ ನಾಯಕ ಕಿಮ್ ಜಾಂಗ್ ಆದೇಶ (IANS)
author img

By ETV Bharat Karnataka Team

Published : Nov 15, 2024, 1:54 PM IST

ಸಿಯೋಲ್: ಆತ್ಮಾಹುತಿ ಡ್ರೋನ್​ಗಳನ್ನು ತ್ವರಿತಗತಿಯಲ್ಲಿ ಸಾಮೂಹಿಕವಾಗಿ ತಯಾರಿಸುವುದು ಅಗತ್ಯ ಎಂದು ಉತ್ತರ ಕೊರಿಯಾದ ನಾಯಕ ಕಿಮ್ ಜಾಂಗ್-ಉನ್ ಹೇಳಿದ್ದಾರೆ. ಆತ್ಮಾಹುತಿ ದಾಳಿ ಡ್ರೋನ್​ಗಳ ಕಾರ್ಯಕ್ಷಮತೆ ಪರೀಕ್ಷೆಯ ಮೇಲ್ವಿಚಾರಣೆ ನಡೆಸಿದ ನಂತರ ಅವರು ಈ ಹೇಳಿಕೆ ನೀಡಿದ್ದಾರೆ ಎಂದು ಉತ್ತರ ಕೊರಿಯಾದ ಸರ್ಕಾರಿ ಮಾಧ್ಯಮ ಶುಕ್ರವಾರ ವರದಿ ಮಾಡಿದೆ.

ಇದಕ್ಕೂ ಹಿಂದಿನ ದಿನ ಮಾನವರಹಿತ ವೈಮಾನಿಕ ತಂತ್ರಜ್ಞಾನ ಸಂಕೀರ್ಣದ ಸಂಯೋಜಿತ ಸಂಸ್ಥೆ (Unmanned Aerial Technology Complex) ತಯಾರಿಸಿದ ವಿವಿಧ ರೀತಿಯ ಆತ್ಮಾಹುತಿ ದಾಳಿ ಡ್ರೋನ್​ಗಳ ಪರೀಕ್ಷೆಗಳಿಗೆ ಕಿಮ್ ಸ್ಥಳದಲ್ಲೇ ಮಾರ್ಗದರ್ಶನ ನೀಡಿದರು ಎಂದು ಕೊರಿಯಾದ ಸೆಂಟ್ರಲ್ ನ್ಯೂಸ್ ಏಜೆನ್ಸಿ (ಕೆಸಿಎನ್ಎ)ಯನ್ನು ಉಲ್ಲೇಖಿಸಿ ಯೋನ್ ಹಾಪ್ ಸುದ್ದಿ ಸಂಸ್ಥೆ ವರದಿ ಮಾಡಿದೆ.

"ವಿವಿಧ ದಾಳಿ ವ್ಯಾಪ್ತಿಯಲ್ಲಿ ಬಳಸಬೇಕಾದ ಆತ್ಮಾಹುತಿ ಡ್ರೋನ್​ಗಳು ನೆಲ ಮತ್ತು ಸಮುದ್ರದಲ್ಲಿ ಯಾವುದೇ ಶತ್ರು ಗುರಿಗಳ ಮೇಲೆ ನಿಖರವಾಗಿ ದಾಳಿ ಮಾಡುವ ಸಾಮರ್ಥ್ಯ ಹೊಂದಿವೆ" ಎಂದು ಕೆಸಿಎನ್ಎ ಹೇಳಿದೆ. ಗುರುವಾರದ ಪರೀಕ್ಷೆಯಲ್ಲಿ ಡ್ರೋನ್ ಗಳು ಪೂರ್ವನಿರ್ಧರಿತ ಮಾರ್ಗಗಳಲ್ಲಿ ಹಾರಾಟ ನಡೆಸಿದ ನಂತರ ನಿಖರವಾಗಿ ಗುರಿಗಳನ್ನು ಹೊಡೆದುರುಳಿಸಿದವು ಎಂದು ಅದು ವರದಿ ಮಾಡಿದೆ.

ತಮ್ಮ ದೇಶವು ವಿವಿಧ ರೀತಿಯ ಡ್ರೋನ್​ಗಳನ್ನು ಉತ್ಪಾದಿಸಲು ಮತ್ತು ಬಳಸಲು ಸಂಪೂರ್ಣ ಸಾಧ್ಯತೆ ಮತ್ತು ಸಾಮರ್ಥ್ಯವನ್ನು ಹೊಂದಿದೆ ಮತ್ತು ಆಧುನಿಕ ಯುದ್ಧಕ್ಕೆ ಅಗತ್ಯವಿರುವಂತೆ ಹೊಸ ಮತ್ತು ಭರವಸೆಯ ಕಾರ್ಯತಂತ್ರದ ವಿಧಾನಗಳನ್ನು ಸಂಯೋಜಿಸುವ ಮತ್ತು ಅನ್ವಯಿಸುವ ಸಾಧ್ಯತೆಯನ್ನು ಪರಿಶೀಲಿಸುತ್ತಿದೆ ಎಂದು ಕಿಮ್ ದೃಢಪಡಿಸಿದರು.

"ವರ್ಕರ್ಸ್ ಪಾರ್ಟಿ ಆಫ್ ಕೊರಿಯಾ ಇತ್ತೀಚೆಗೆ ಮಾನವರಹಿತ ಮಿಲಿಟರಿ ಯಂತ್ರಾಂಶ ವ್ಯವಸ್ಥೆಗಳನ್ನು ಕಾರ್ಯಾಚರಣೆಯ ಯೋಜನೆಗಳೊಂದಿಗೆ ಸಂಪೂರ್ಣವಾಗಿ ಸಂಯೋಜಿಸುವ ಪ್ರಯತ್ನಗಳಿಗೆ ಪ್ರಾಮುಖ್ಯತೆ ನೀಡಿದೆ" ಎಂದು ಕಿಮ್ ಹೇಳಿದರು. ಸಾಧ್ಯವಾದಷ್ಟು ಬೇಗ ಆತ್ಮಾಹುತಿ ಡ್ರೋನ್​ಗಳನ್ನು ಸಾಮೂಹಿಕವಾಗಿ ಉತ್ಪಾದಿಸಬಲ್ಲ ವ್ಯವಸ್ಥೆಯ ಅಗತ್ಯವನ್ನು ಅವರು ಒತ್ತಿಹೇಳಿದರು ಎಂದು ವರದಿ ಹೇಳಿದೆ.

ಪ್ಯೋಂಗ್ಯಾಂಗ್ ತನ್ನ ದಾಳಿ ಡ್ರೋನ್​ಗಳನ್ನು ಇದೇ ಆಗಸ್ಟ್​ನಲ್ಲಿ ಮೊದಲ ಬಾರಿಗೆ ಅನಾವರಣಗೊಳಿಸಿತ್ತು. ರಷ್ಯಾದೊಂದಿಗಿನ ಅದರ ಉತ್ತಮ ಸಂಬಂಧಗಳ ಬೆಂಬಲದಿಂದ ಉತ್ತರ ಕೊರಿಯಾ ಈ ಡ್ರೋನ್ ಗಳನ್ನು ತಯಾರಿಸಲು ಸಾಧ್ಯವಾಗಿರಬಹುದು ಎಂದು ತಜ್ಞರು ಹೇಳಿದ್ದಾರೆ. ಆಗಸ್ಟ್​ನಲ್ಲಿ ಉತ್ತರ ಕೊರಿಯಾದ ಸರ್ಕಾರಿ ಮಾಧ್ಯಮಗಳು ಬಿಡುಗಡೆ ಮಾಡಿದ ಚಿತ್ರಗಳನ್ನು ನೋಡಿದರೆ ಈ ಡ್ರೋನ್​ಗಳು ಇಸ್ರೇಲ್ ನಿರ್ಮಿತ ಹರೋಪ್ ಡ್ರೋನ್, ರಷ್ಯಾ ನಿರ್ಮಿತ ಲ್ಯಾನ್ಸೆಟ್ -3 ಮತ್ತು ಇಸ್ರೇಲ್​ನ ಹೀರೋ 30 ರೀತಿಯಲ್ಲಿಯೇ ಇವೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

ಇದನ್ನೂ ಓದಿ: ಪ್ರವಾಹ ಪೀಡಿತ ನೈಜೀರಿಯಾಗೆ ಭಾರತದಿಂದ 15 ಟನ್ ಪರಿಹಾರ ಸಾಮಗ್ರಿ ರವಾನೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.