ಚಿಕ್ಕಮಗಳೂರು: ಇತ್ತೀಚೆಗೆ ಮಂಡಿಸಲಾಗಿರುವ ನಗರಸಭೆ ಆಯವ್ಯಯದಲ್ಲಿ ಹೊಸ ಘೋಷಣೆಯೊಂದು ಸೇರ್ಪಡೆಯಾಗಿದ್ದು, ಈ ಘೋಷಣೆ ವಿವಾದಕ್ಕೆ ದಾರಿ ಮಾಡಿಕೊಟ್ಟಂತಿದೆ. ಆಯವ್ಯಯದಲ್ಲಿ ಉಲ್ಲೇಖ ಮಾಡಲಾಗಿರುವ ಈ ಘೋಷಣೆಯನ್ನು ನಗರಸಭೆ ಅಧ್ಯಕ್ಷರು ಜಾರಿ ಮಾಡಲು ಸಹ ಸಿದ್ಧತೆ ಮಾಡಿಕೊಂಡಿದ್ದಾರೆ ಎನ್ನಲಾಗುತ್ತಿದೆ.
![New Declaration From Chikkamagaluru City Municipal Council](https://etvbharatimages.akamaized.net/etvbharat/prod-images/14845664_csdfvd.jpg)
ಈ ವಿಚಾರ ಕಾರ್ಯಗತಗೊಳಿಸಿದರೆ ವಿವಾದ ಸೃಷ್ಟಿಯಾಗುವ ಸಾಧ್ಯತೆ ಹೆಚ್ಚಿದ್ದು ನಗರಸಭೆಯಲ್ಲಿ ಮಂಡಿಸಿದ ಆಯವ್ಯಯ ವಿವಾದದ ಸುಳಿಯಲ್ಲಿ ಸಿಲುಕುವಂತೆ ಕಾಣಿಸುತ್ತಿದೆ. ಧ್ವನಿವರ್ಧಕಗಳ ಬಳಕೆಯ ಬಗೆಗಿನ ಹೊಸ ಘೋಷಣೆಯೊಂದನ್ನು ಸೇರ್ಪಡೆ ಮಾಡಿಕೊಂಡು ನಗರಸಭೆ ಅಧ್ಯಕ್ಷ ವರಸಿದ್ದ ವೇಣುಗೋಪಾಲ್ ಅವರು ಇತ್ತೀಚೆಗೆ ಬಜೆಟ್ ಮಂಡಿಸಿದ್ದಾರೆ.
![New Declaration From Chikkamagaluru City Municipal Council](https://etvbharatimages.akamaized.net/etvbharat/prod-images/kn-ckm-01-mike-galate-av-7202347_26032022131934_2603f_1648280974_491.jpg)
ಕೋರ್ಟ್ ಆದೇಶಕ್ಕೆ ವಿರುದ್ಧವಾಗಿ ತಲೆ ಎತ್ತುತ್ತಿರುವ ಚರ್ಚ್, ಮಸೀದಿ, ಪ್ರಾರ್ಥನಾ ಮಂದಿಗಳಲ್ಲಿ ಬಳಕೆ ಮಾಡುತ್ತಿರುವ ಮೈಕ್ ವಿರುದ್ಧ ಕ್ರಮಕ್ಕೆ ಮುಂದಾಗಿರುವ ನಗರಸಭೆ, ಧಾರ್ಮಿಕ ಕೇಂದ್ರಗಳಲ್ಲಿ ಅನುಮತಿ ಇಲ್ಲದ ಹಾಗೂ ಅತೀ ಹೆಚ್ಚಿನ ಸೌಂಡ್ಗಳುಳ್ಳ ಧ್ವನಿವರ್ಧಕಗಳ ನಿಷೇಧಕ್ಕೆ ಚಿಂತನೆ ಮಾಡಲಾಗಿದೆ.
![New Declaration From Chikkamagaluru City Municipal Council](https://etvbharatimages.akamaized.net/etvbharat/prod-images/kn-ckm-01-mike-galate-av-7202347_26032022131934_2603f_1648280974_287.jpg)
ಬಜೆಟ್ನಲ್ಲಿ ನಗರಸಭಾ ಅಧ್ಯಕ್ಷರು ಈ ವಿಚಾರದ ಬಗ್ಗೆ ಘೋಷಣೆ ಮಾಡಿದ್ದು, ದೇವಸ್ಥಾನ, ಮಸೀದಿ ಮತ್ತು ಚರ್ಚೇ ಸೇರಿದಂತೆ ಎಲ್ಲ ಧಾರ್ಮಿಕ ಕೇಂದ್ರಗಳಿಗೂ ಇದು ಅನ್ವಯವಾಗಲಿದೆ. ನಗರದ ಜನರ ಆರೋಗ್ಯದ ದೃಷ್ಟಿಯಿಂದ ಈ ಕ್ರಮಕ್ಕೆ ಮುಂದಾಗಿದ್ದೇವೆ ಎಂದು ಅಧ್ಯಕ್ಷ ಹೇಳಿದ್ದಾರೆ. ಕಾಂಗ್ರೆಸ್ ನಗರಸಭಾ ಸದಸ್ಯರಿಂದ ತೀವ್ರ ವಿರೋಧ ಮತ್ತು ಆಕ್ಷೇಪ ವ್ಯಕ್ತವಾಗಿದೆ.
![New Declaration From Chikkamagaluru City Municipal Council](https://etvbharatimages.akamaized.net/etvbharat/prod-images/kn-ckm-01-mike-galate-av-7202347_26032022131934_2603f_1648280974_502.jpg)