ETV Bharat / state

ಎನ್‌ಆರ್‌ಪುರದ ಗಣಪತಿ ಸೇವಾ ಸಮಿತಿಗೆ ಮುಸ್ಲಿಂ ಮಹಿಳೆ ಅಧ್ಯಕ್ಷೆ, ಸಾಮರಸ್ಯದ ಸಂದೇಶ - ಈಟಿವಿ ಭಾರತ್​ ಕನ್ನಡ

"ಜಾತಿ-ಧರ್ಮ-ಸಂಪ್ರದಾಯ ಮನೆಗಳಲ್ಲಿರಲಿ. ದೇಶದ ಅಭಿವೃದ್ಧಿ, ಸಮಾಜದ ಶಾಂತಿ-ಸಾಮರಸ್ಯಕ್ಕೆ ಜಾತಿ-ಧರ್ಮಗಳ ಕಟ್ಟುಪಾಡುಗಳು ಅಡ್ಡಿಯಾಗಬಾರದು"- ಜುಬೇದಾ, ಎನ್.ಆರ್.ಪುರ ಪಟ್ಟಣ ಪಂಚಾಯಿತಿ ಅಧ್ಯಕ್ಷೆ

muslim-woman-is-the-president-of-the-ganapati-committee
ಗಣಪತಿ ಸೇವಾ ಸಮಿತಿಗೆ ಮುಸ್ಲಿಂ ಮಹಿಳೆ ಅಧ್ಯಕ್ಷೆ
author img

By

Published : Sep 2, 2022, 8:39 AM IST

ಚಿಕ್ಕಮಗಳೂರು: ಹೀಗೆ ಗಣಪತಿ ವಂದಿಸುತ್ತಿರುವ ಮಹಿಳೆಯ ಹೆಸರು ಜುಬೇದಾ. ಎನ್.ಆರ್.ಪುರ ತಾಲೂಕಿನ ಪಟ್ಟಣ ಪಂಚಾಯಿತಿ ಅಧ್ಯಕ್ಷೆ. ತಾಲೂಕಿನ ರಾಜೀವ್ ನಗರದ ಗಣಪತಿ ಸೇವಾ ಸಮಿತಿಗೆ ಕಳೆದ 13 ವರ್ಷಗಳಿಂದಲೂ ಇವರೇ ಅಧ್ಯಕ್ಷರು. ಇವರದ್ದೇ ಅಧ್ಯಕ್ಷತೆಯಲ್ಲಿ ಪ್ರತಿ ವರ್ಷದಂತೆ ಈ ವರ್ಷವೂ ಗಣಪತಿ ಮೂರ್ತಿ ಪ್ರತಿಷ್ಠಾಪಿಸಲಾಗಿದೆ.

ಸಾಮಾಜಿಕ ಸಾಮರಸ್ಯ ಸಾರುವ ಕಾಫಿ ನಾಡಿನ ಗಣಪ

"ನಮ್ಮ ಮನೆಯವರು ನಮಗೆ ಧರ್ಮದ ಕಟ್ಟುಪಾಡುಗಳನ್ನು ತುಂಬಿಲ್ಲ. ನಾವೂ ಯುವಜನತೆಗೆ ಧರ್ಮದ ಕಟ್ಟುಪಾಡುಗಳನ್ನು ತುಂಬುವುದು ಬೇಡ. ಜಾತಿ-ಧರ್ಮ-ಸಂಪ್ರದಾಯ ಮನೆಗಳಲ್ಲಿರಲಿ. ದೇಶದ ಅಭಿವೃದ್ಧಿ, ಸಮಾಜದ ಶಾಂತಿ-ಸಾಮರಸ್ಯಕ್ಕೆ ಜಾತಿ-ಧರ್ಮಗಳ ಕಟ್ಟುಪಾಡುಗಳು ಅಡ್ಡಿಯಾಗಬಾರದು" ಎಂದು ಜುಬೇದಾ ಹೇಳಿದರು.

ಇವರ ಉತ್ತೇಜನದಿಂದ ರಾಜೀವ್ ನಗರದ ಎಲ್ಲಾ ಧರ್ಮದ ಯುವಕರು ಗಣೇಶೋತ್ಸವ ಆಚರಿಸಿಕೊಂಡು ಬರುತ್ತಿದ್ದಾರೆ. ಇಲ್ಲಿ ಧಾರ್ಮಿಕ ಭೇದ-ಭಾವವಿಲ್ಲ. ಕೇವಲ ಗಣಪತಿ ಹಬ್ಬವಷ್ಟೇ ಅಲ್ಲ, ಎಲ್ಲಾ ಧರ್ಮದ ಎಲ್ಲಾ ಹಬ್ಬಗಳನ್ನೂ ಇದೇ ರೀತಿ ನಗರದ ಎಲ್ಲಾ ಹುಡುಗರ ಜೊತೆ ಸೇರಿ ಆಚರಿಸುತ್ತಾರೆ.

ಈ ವರ್ಷ ಗಣಪತಿಯ ಜೊತೆ ದಿ.ಪುನೀತ್ ರಾಜಕುಮಾರ್ ಫೋಟೋವನ್ನೂ ಗಣಪತಿ ಪಕ್ಕದಲ್ಲಿಟ್ಟು ಪೂಜೆ ಮಾಡಲಾಗುತ್ತಿದೆ.

ಇದನ್ನೂ ಓದಿ : ಬೆಂಗಳೂರಿನಲ್ಲಿ 1.59 ಲಕ್ಷ ಗಣೇಶ ಮೂರ್ತಿಗಳ ವಿಸರ್ಜನೆ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.