ಬೆಂಗಳೂರು: ಕಾಫಿ ಬೆಳೆಗಾರರು ಅನುಭವಿಸಿರುವ ನಷ್ಟ, ಸವಾಲುಗಳು ಹಾಗೂ ಅದಕ್ಕಿರುವ ಪರಿಹಾರಗಳ ಕುರಿತು ಸಚಿವ ಸಿ.ಟಿ. ರವಿ ಸರ್ಕಾರದ ಗಮನ ಸೆಳೆದಿದ್ದಾರೆ.
ನಗರದ ಚಿತ್ರಕಲಾ ಪರಿಷತ್ ನಲ್ಲಿ ಆಯೋಜಿಸಿದ್ದ ಕಾಫಿಯ ಪ್ರಸ್ತುತ ವಿದ್ಯಮಾನಗಳು - 2019 ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ಡಿಸಿಎಂ ಅಶ್ವಥ್ ನಾರಾಯಣ್ ಅವರ ಗಮನಕ್ಕೆ ತಂದರು. ಕಾಫಿ ಬೆಳೆಗಾರರು ಸಾಲದ ಸುಳಿಯಲ್ಲಿದ್ದಾರೆ, ಬೆಳೆ ಬೆಳೆಯುವುದಕ್ಕಾಗಿ ಜಾಗವನ್ನು ವಿಸ್ತರಣೆ ಮಾಡುತ್ತಾರೆ. ಈ ಬಗ್ಗೆ ಮುಂದಿನ ಅಧಿವೇಶನದಲ್ಲಿ ತಿದ್ದುಪಡಿ ತರಲಾಗುವುದು. ರೈತರ ಪ್ರಕರಣಗಳನ್ನು ಖುಲಾಸೆ ಮಾಡಿಸಲಾಗುವುದು ಎಂದರು. ಅಲ್ಲದೆ ಕಾಫಿ ಬೆಳೆಗೆ ಉತ್ತಮ ಮಾರುಕಟ್ಟೆ ಇಲ್ಲ. ಅಲ್ಲದೆ ಬೆಳೆದಿರುವ ಬೆಳೆಯನ್ನು ಕಡಿದುಹಾಕದೆ, ಆ ಜಾಗವನ್ನು ಲೀಸ್ ಗೆ ಕೊಡುವಂತೆ ಮನವಿ ಮಾಡಿದ್ದೇವೆ. ಸರ್ಕಾರ ಈ ಯೋಜನೆಗಳನ್ನು ತಕ್ಷಣವೇ ಜಾರಿ ಮಾಡಲಿದೆ ಎಂದರು.
ಬಳಿಕ ಡಿಸಿಎಂ ಅಶ್ವಥ್ ನಾರಾಯಣ್ ಮಾತನಾಡಿ, ಬೆಳೆಹಾನಿ ಆದರೆ ಸರ್ಕಾರದಿಂದ ಬೆಂಬಲ ಬೆಲೆ ಕೊಡಲು ಕ್ರಮ ತೆಗೆದುಕೊಳ್ಳಲಾಗುವುದು. ಮಳೆಗೆ ಭೂಕುಸಿತ ಆಗಿರುವ ಕಡೆ ಬೇರೆ ಭೂಮಿ ನೀಡಲು ಕ್ರಮ ತಗೆದುಕೊಳ್ಳಲಾಗುವುದು. ಕಾಫಿ ಮಂಡಳಿಗೆ ಹೆಚ್ಚಿನ ಅಧಿಕಾರ ಕೊಡಲಾಗುವುದು ಎಂದು ಭರವಸೆ ನೀಡಿದರು.