ETV Bharat / state

ಸಿದ್ದರಾಮಯ್ಯ ಬೇಗ ಗುಣಮುಖರಾಗಲಿ ಎಂದು ಸಚಿವ ಸಿ.ಟಿ. ರವಿ ಪ್ರಾರ್ಥನೆ

ಚಿಕ್ಕಮಗಳೂರಲ್ಲಿ ಹಿಂದೂ ಪರ ಸಂಘಟನೆಗಳಾದ ವಿಶ್ವಹಿಂದೂ ಪರಿಷತ್ ಹಾಗೂ ಬಜರಂಗದಳದ ವತಿಯಿಂದ ದತ್ತಾಮಾಲ ಅಭಿಯಾನ ಅದ್ಧೂರಿಯಾಗಿ ಜರುಗುತ್ತಿದೆ. ಇದೇ ಸಂದರ್ಭದಲ್ಲಿ ಸಚಿವ ಸಿ.ಟಿ. ರವಿ ಅವರು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅವರು ಬೇಗ ಗುಣಮುಖರಾಗಲಿ ಎಂದು ಪ್ರಾರ್ಥಿಸಿದ್ದಾರೆ.

ckm
ದತ್ತಮಾಲಾ ಅಭಿಯಾನ ಆರಂಭವಾಗಿದೆ.
author img

By

Published : Dec 12, 2019, 3:53 PM IST

ಚಿಕ್ಕಮಗಳೂರು: ಚಿಕ್ಕಮಗಳೂರಲ್ಲಿ ಹಿಂದೂ ಪರ ಸಂಘಟನೆಗಳಾದ ವಿಶ್ವಹಿಂದೂ ಪರಿಷತ್ ಹಾಗೂ ಭಜರಂಗದಳದ ವತಿಯಿಂದ ದತ್ತಾಮಾಲ ಅಭಿಯಾನ ಅದ್ಧೂರಿಯಾಗಿ ಜರುಗುತ್ತಿದೆ. ಇಂದು ದತ್ತಪೀಠದಲ್ಲಿ 15 ಸಾವಿರಕ್ಕೂ ಅಧಿಕ ಭಕ್ತಾಧಿಗಳು ದತ್ತ ಪೀಠಕ್ಕೆ ಭೇಟಿ ನೀಡಿ ಪಾದುಕೆಯ ದರ್ಶನ ಪಡೆದರು.

ದತ್ತಮಾಲಾ ಅಭಿಯಾನ ಆರಂಭವಾಗಿದೆ.

ಇದೇ ಸಂದರ್ಭದಲ್ಲಿ ಮಾತನಾಡಿದ ಸಚಿವ ಸಿ.ಟಿ. ರವಿ ಅವರು, ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅವರಿಗೆ ಅನಾರೋಗ್ಯದಿಂದ ಬಳಲುತ್ತಿದ್ದಾರೆ. ಅವರು ಬೇಗ ಗುಣಮುಖರಾಗಲಿ ಎಂದೂ ಭಗವಂತನಲ್ಲಿ ಪ್ರಾರ್ಥಿಸುತ್ತೇನೆ. ನಮ್ಮ ಮಧ್ಯೆ ವೈಚಾರಿಕ ಭೇದ ಇರಬಹುದು ಆದರೆ ವ್ಯಕ್ತಿಗತವಾಗಿ ಯಾವುದೇ ದ್ವೇಷವಿಲ್ಲ. ಅವರು ಶೀಘ್ರವಾಗಿ ಗುಣಮುಖರಾಗಲಿ ಎಂದರು.

ಇನ್ನು, ಬದುಕಿನಲ್ಲಿ ಪದವಿ, ಅಂತಸ್ತು, ಹಣ, ಇದ್ಯಾವುದೂ ಸ್ಥಿರವಲ್ಲ. ಅಸ್ಥಿರವಾದ ಬದುಕಿನಲ್ಲಿ ಸತ್ಯದ ಪ್ರತಿಪಾದನೆ ಮಾಡೋದೇ ಬದುಕಿನ ಶ್ರೇಷ್ಟ ಕಾರ್ಯ ಆಗಬೇಕು. ಮತದ ಆಸೆಗಾಗಿ ಸುಳ್ಳಿನ ಪ್ರತಿಪಾದನೆ ಮಾಡಬಾರದು. ಸುಳ್ಳಿನ ಪ್ರತಿಪಾದನೆ ಮಾಡಿದರೇ ಆ ದೇವರು ಹಾಗೂ ಜನರು ಕ್ಷಮಿಸೋದಿಲ್ಲ. ಇದು ನನಗೂ ಸೇರಿದಂತೆ ಮಾಜಿ ಮುಖ್ಯಮಂತ್ರಿಗೂ ಅನ್ವಯ ಆಗುತ್ತದೆ. ಸಿದ್ದರಾಮಯ್ಯ ಅವರು ಶೀಘ್ರ ಗುಣಮುಖರಾಗಿ ಬರಲಿ ಎಂದು ಆಶಿಸಿದರು.

ಬಳಿಕ ಮಾತನಾಡಿದ ಮೂಡಿಗೆರೆ ಶಾಸಕ ಎಂ ಪಿ ಕುಮಾರಸ್ವಾಮಿ, ರಾಜ್ಯದಲ್ಲಿ ಬಿಜೆಪಿ ಸರ್ಕಾರ ಪೂರ್ಣವಾಗಿ ಅಧಿಕಾರಕ್ಕೆ ಬಂದಿರೋದು ತುಂಬಾ ಖುಷಿಯಾಗಿದೆ ಎಂದರು. ಸಚಿವ ಸ್ಥಾನವನ್ನು ನನಗೇ ಕೋಡಲೇಬೇಕು ಎಂಬುದು ಮುಖ್ಯವಲ್ಲ. ನಮ್ಮ ಸರ್ಕಾರ ಹಾಗೂ ಮುಖ್ಯಮಂತ್ರಿಗಳು ಮುಖ್ಯವಾಗುತ್ತಾರೆ. ನಾನು ಸಚಿವ ಸ್ಥಾನ ನೀಡಿ ಎಂದೂ ಕೇಳಿಕೊಂಡಿದ್ದೇನೆ. ನಮ್ಮ ಸರ್ಕಾರ ಇರೋದರಿಂದ ಹೆಚ್ಚು ಕೆಲಸ ಮಾಡಬಹುದು. ನಾನು ಸಿಎಂ ಯಡಿಯೂರಪ್ಪನವರ ಹಿತೈಷಿ ಹಾಗೂ ಅವರ ಶಿಷ್ಯ. ಮಾನಸ ಪುತ್ರ ಎಂದಿದ್ದಕ್ಕೆ ಬೇರೆ ಅರ್ಥ ಕಲ್ವಿಸೋದು ಬೇಡವೆಂದು ಹೇಳಿದರು.

Intro:Kn_Ckm_01_Datta_peeta_darshana_pkg_7202347Body:
ಚಿಕ್ಕಮಗಳೂರು :-

ಚಿಕ್ಕಮಗಳೂರಿನಲ್ಲಿ ಹಿಂದೂ ಪರ ಸಂಘಟನೆಗಳಾದ ವಿಶ್ವಹಿಂದೂ ಪರಿಷತ್ ಹಾಗೂ ಬಜರಂಗದಳದ ವತಿಯಿಂದಾ ದತ್ತಾಮಾಲ ಅಭಿಯಾನ ತುಂಬಾ ಅದ್ದೂರಿಯಾಗಿ ನಡೆಯುತ್ತಿದೆ. ಇಂದೂ ದತ್ತಾಫೀಠದಲ್ಲಿ 15 ಸಾವಿರಕ್ಕೂ ಅಧಿಕ ಭಕ್ತಾಧಿಗಳು ದತ್ತಾಫೀಠಕ್ಕೆ ಭೇಟಿ ನೀಡಿ ಪಾದುಕೆಯ ದರ್ಶನ ಪಡೆದು ಹೋಮ ಹವನದಲ್ಲಿ ಭಾಗವಹಿಸಿದ ಕುರಿತು ಒಂದು ವರದಿ ಇಲ್ಲಿದೇ ನೋಡಿ....

ಹೌದು ಚಿಕ್ಕಮಗಳೂರಿನಲ್ಲಿ ಹಿಂದೂಪರ ಸಂಘಟನೆಗಳಾದ ವಿಶ್ವಹಿಂದೂ ಪರಿಷತ್ ಮತ್ತು ಭಜರಂಗ ದಳ ತುಂಬಾ ಅದ್ದೂರಿಯಾಗಿ ದತ್ತಾಮಾಲ ಉತ್ಸವ ಮತ್ತು ಅಭಿಯಾನ ಆಚರಣೆ ಮಾಡುತ್ತಿದ್ದು ಇಂದೂ ಕೊನೆಯ ದಿನ ವಾದರಿಂದ ದತ್ತಾಫೀಠದಲ್ಲಿ 15 ಸಾವಿರಕ್ಕೂ ಅಧಿಕ ಭಕ್ತಾಧಿಗಳು ಬೆಳಗ್ಗೆ 7 ಗಂಟೆಯಿಂದಲೇ ದತ್ತ ಫೀಠಕ್ಕೆ ಆಗಮಿಸಿ ಪಾದುಕೆಯ ದರ್ಶನವನ್ನು ಪಡೆದರು.ದತ್ತಾ ಮಾಲೆಯನ್ನು ಧರಿಸಿದ್ದಂತಹ ಸಚಿವ ಸಿ ಟಿ ರವಿ ಹಾಗೂ ಕೆಲ ಭಕ್ತರು ಹೊನ್ನಮ್ಮನ ಹಳ್ಳದಿಂದಾ ದತ್ತಾಫೀಠದ ವರೆಗೂ ಸುಮಾರು 12 ಕೀ.ಮೀ ದೂರ ಪಾದಯಾತ್ರೆ ಮಾಡಿದ್ದಾರೆ ಇದೇ ಸಂದರ್ಭದಲ್ಲಿ ತಲೆಯ ಮೇಲೆ ಪಡಿಯ ಹೊತ್ತು ದತ್ತಾನ ಜಪ ಮಾಡುತ್ತಾ ಹಾಗೂ ದತ್ತನ ಭಕ್ತಿ ಗೀತೆಗಳನ್ನು ಹಾಡುತ್ತಾ ನೆಡದುಕೊಂಡೇ ಬಂದು ದತ್ತಾನ ಪಾದುಕೆಯ ದರ್ಶನವನ್ನು ಪಡೆದು ನಂತರ ಜಿಲ್ಲಾಡಳಿತ ನಿರ್ಮಿಸಿರುವ ಶೇಡ್ ನಲ್ಲಿ ಹೋಮದಲ್ಲಿ ಭಾಗವಹಿಸಿ ದತ್ತಾನಿಗೆ ವಿಶೇಷವಾದ ಪೂಜೆಯನ್ನು ಸಲ್ಲಿಸಿದರು.ನಂತರ ಮಾತನಾಡಿದ ಸಿ ಟಿ ರವಿ ನಿನ್ನೆ ಶೋಭಯಾತ್ರೆ ಭಯ ಮುಕ್ತ ವಾತವರಣದಿಂದಾ ಮುಕ್ತಾಯವಾಗಿದೆ. ಈ ಹಿಂದೇ ಭಯದಿಂದಾ ನಡೆದು ಆಕ್ರೋಶಕ್ಕೆ ಕಾರಣವಾಗುತ್ತಿತ್ತು. ಇಲ್ಲಿ ಚಿಕ್ಕ ಮಕ್ಕಳಿಂದಾ ವಯಸ್ಸು ಆದವರು ಹೆಜ್ಜೆ ಹಾಕಿದ್ದಾರೆ. ಶೋಭಯಾತ್ರೆಯ ಸಂದೇಶವೇ ದತ್ತಾ ಫೀಠ ಮುಕ್ತಿಯ ಕಾಲ ಸನ್ನಿತವಾಗಿದೆ ಎಂದೂ ಸಂದೇಶ ಕೊಟ್ಟಿತ್ತಿದ್ದು. ವಿರೋಧ ಮಾಡುವವರು ಪೂರ್ವಗ್ರಹ ಪೀಢಿತದಿಂದಾ ಹೊರ ಬನ್ನಿ. ಸತ್ಯವನ್ನು ಸಾಧ್ಯ ಮಾಡೋದಕ್ಕೆ ಎಲ್ಲಾ ರಾಜಕೀಯ ಪಕ್ಷ ಒಟ್ಟಾಗಿ ನಿಲ್ಲಬೇಕು. ದತ್ತ ಫೀಠವನ್ನು ಪುನರ್ ಪ್ರತಿಷ್ಠಾಪನೆ ಮಾಡೋದೇ ಸತ್ಯವನ್ನು ಪ್ರತಿಷ್ಠಾಪನೆ ಮಾಡೋದಕ್ಕಾಗಿ ಮುಂದೆ ಯಾರೂ ವಿರೋಧ ಮಾಡುವ ಕೆಲಸ ಮಾಡಬೇಡಿ ಎಂದೂ ಸಚಿವ ಸಿ ಟಿ ರವಿ ಹೇಳಿದರು.....

ಇಂದಿನ ಈ ಕಾರ್ಯಕ್ರಮಕ್ಕೆ ರಾಜ್ಯದ ಹತ್ತಾರೂ ಜಿಲ್ಲೆಗಳಿಂದಾ ಭಕ್ತಾಧಿಗಳು ಆಗಮಿಸಿದ್ದು ಪ್ರತಿಯೊಬ್ಬರೂ ಪಾದುಕೆಯ ದರ್ಶನವನ್ನು ಪಡೆದು ಪುನೀತರಾದರು.ಈ ಕಾರ್ಯಕ್ರಮಕ್ಕೆ ರಾಜ್ಯದ 15 ಕ್ಕೂ ಹೆಚ್ಚು ಜಿಲ್ಲೆಗಳಿಂದಾ ಭಕ್ತಾಧಿಗಳು ಪಾದುಕೆಯ ದರ್ಶನಕ್ಕಾಗಿ ಆಗಮಿಸಿದ್ದು ಹಾಸನ,ತುಮಕೂರು, ಶಿವಮೊಗ್ಗ, ಮಂಗಳೂರು, ಉಡುಪಿ, ಚಿತ್ರದುರ್ಗ, ಶಿವಮೊಗ್ಗ, ಕಾರವಾರ, ಸೇರಿದಂತೆ 15 ಸಾವಿರಕ್ಕೂ ಅಧಿಕ ದತ್ತಮಾಲಧಾರಿಗಳು ದತ್ತಫೀಠಕ್ಕೆ ಆಗಮಿಸಿ ದತ್ತಾ ಪಾದುಕೆಯ ದರ್ಶನವನ್ನು ಪಡೆದರು.ನಂತರ ಜಿಲ್ಲಾಡಳಿತದಿಂದಾ ಪ್ರತಿಯೊಬ್ಬ ಭಕ್ತರಿಗೂ ಪ್ರಸಾದವನ್ನು ವಿತರಣೆ ಮಾಡಲಾಯಿತು. ಇದೇ ಸಂದರ್ಭದಲ್ಲಿ ಪಾದುಕೆಯ ದರ್ಶವನ್ನು ಪಡೆದ ಮೂಡಿಗೆರೆ ಶಾಸಕ ಎಂ ಪಿ ಕುಮಾರಸ್ವಾಮಿ ಅವರು ಇದು ಸಂಘಟನೆಯವರು ಮಾಡಿರುವ ಕಾರ್ಯಕ್ರಮವಲ್ಲ ಪ್ರತಿಯೊಬ್ಬರು ಸ್ವಯಂ ಪ್ರೇರಿತರಾಗಿ ಇಲ್ಲಿಗೆ ಬರುತ್ತಿದ್ದಾರೆ. ನ್ಯಾಯಲಯದಲ್ಲಿ ತಿರ್ಮಾನ ಆಗಬೇಕಾಗಿದೆ.ಮುಂದಿನ ದಿನಗಳಲ್ಲಿ ಇಲ್ಲಿನ ಸಮಸ್ಯೆ ಬಗೆ ಹರಿಸಲಾಗುವುದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಈ ವಿಚಾರದಲ್ಲಿ ತುಂಬಾ ವಿಳಂಬ ಮಾಡಿದ್ದಾರೆ ಎಂದೂ ಹೇಳಿದರು..

ಒಟ್ಟಾರೆಯಾಗಿ ಚಿಕ್ಕಮಗಳೂರಿನಲ್ಲಿ ನಡೆಯುತ್ತಿರುವ ದತ್ತಾಮಾಲ ಅಬಿಯಾನಕ್ಕೆ ಇಂದೂ ತೆರೆ ಬೀಳಲಿದ್ದು ಸಾವಿರಾರೂ ಭಕ್ತಾಧಿಗಳು ಸರತಿ ಸಾಲಿನಲ್ಲಿ ಬಂದೂ ಪೀಠದಲ್ಲಿ ಪಾದುಕೆಯ ದರ್ಶನ ಪಡೆದು ಪುನೀತರಾಗಿದರು. ಇಲ್ಲಿ ಯಾವುದೇ ರೀತಿಯಾ ಅಹಿತಕರ ಘಟನೆ ನಡೆಯದಂತೆ ಬಿಗಿ ಪೋಲಿಸ್ ವ್ಯವಸ್ಥೆ ಕೂಡ ಮಾಡಲಾಗಿತ್ತು.

byte:-1 ಸಿ ಟಿ ರವಿ......ಪ್ರವಾಸೋದ್ಯಮ ಸಚಿವ

byte:-2 ಎಂ ಪಿ ಕುಮಾರಸ್ವಾಮಿ......ಮೂಡಿಗೆರೆ ಶಾಸಕ

Conclusion:ರಾಜಕುಮಾರ್.....
ಈ ಟಿವಿ ಭಾರತ್.....
ಚಿಕ್ಕಮಗಳೂರು....
ETV Bharat Logo

Copyright © 2024 Ushodaya Enterprises Pvt. Ltd., All Rights Reserved.