ETV Bharat / state

ಸಾಮಾಜಿಕ ಜಾಲತಾಣದ ಪವರ್​​... 8 ವರ್ಷದ ಬಳಿಕ ಮನೆ ಸೇರಿದ ಮಾನಸಿಕ ಅಸ್ವಸ್ಥ - social media helps to found

ಕೇರಳದ ನೆರವಾರಂನ ನಿವಾಸಿ ಪ್ರಸಾದ್​ ಎಂಬಾತ 8 ವರ್ಷದ ಹಿಂದೆ ಕುಟುಂಬದಿಂದ ತಪ್ಪಿಸಿಕೊಂಡಿದ್ದರು. ಇವರ ಫೋಟೋವನ್ನು ಮಂಗಳೂರಿನ ಅಡಿಕೆ ವ್ಯಾಪಾರಿ ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದರು.

ಕೇರಳದ ಮಾನಸಿಕ ರೋಗಿ ಪ್ರಸಾದ್
author img

By

Published : Nov 24, 2019, 7:05 PM IST

ಚಿಕ್ಕಮಗಳೂರು: ಸಾಮಾಜಿಕ ಜಾಲತಾಣಗಳ ಅನುಕೂಲ, ಅನಾನುಕೂಲಗಳ ಬಗ್ಗೆ ಇತ್ತೀಚೆಗೆ ತುಂಬಾ ಚರ್ಚೆಗಳು ನಡೆಯುತ್ತಿವೆ.. ಎಷ್ಟೋ ಅಪರಾಧ ಕೃತ್ಯಕ್ಕೂ ಸಾಮಾಜಿಕ ಜಾಲತಾಣಗಳೆ ಕಾರಣ ಎಂಬ ದೂರುಗಳು ಕೇಳಿ ಬಂದಿವೆ. ಆದರೆ, ಮಾನಸಿಕ ಅಸ್ವಸ್ಥನೊಬ್ಬ 8 ವರ್ಷದ ಬಳಿಕ ತನ್ನ ಕುಟುಂಬವನ್ನು ಸೇರಲು ಈ ಸಾಮಾಜಿಕ ಜಾಲತಾಣ ನೆರವಾಗಿದೆ.

mental illness person back to home after 8 years
ಕೇರಳದ ಮಾನಸಿಕ ರೋಗಿ ಪ್ರಸಾದ್

ಹೌದು. ಚಿಕ್ಕಮಗಳೂರು ಜಿಲ್ಲೆಯ ತರೀಕೆರೆಯಲ್ಲಿ ಕಳೆದ 8 ತಿಂಗಳಿಂದ ಪ್ರಸಾದ್ ಎಂಬ ಮಾನಸಿಕ ಅಸ್ವಸ್ಥ ರಸ್ತೆಯಲ್ಲಿ ಅಲೆದಾಡಿಕೊಂಡು ಎಲ್ಲೆಂದರಲ್ಲಿ ಮಲಗುತ್ತಿದ್ದ. ಈ ವ್ಯಕ್ತಿಯ ಫೋಟೋವನ್ನು ಸ್ಥಳೀಯ ಅಡಿಕೆ ವ್ಯಾಪಾರಿ ಫೇಸ್ ಬುಕ್​ನಲ್ಲಿ ಆಪ್ ಲೋಡ್ ಮಾಡಿ, ಹೆಸರು ಹಾಗೂ ವಿಳಾಸ ಹಾಕಿದ್ದಾರೆ. ಇದು ವೈರಲ್ ಕೂಡ ಆಗಿದೆ.

ಕೂಡಲೇ ಕೇರಳದ ವಯನಾಡಿನ ನೆರವಾರಂನಲ್ಲಿರುವ ಈತನ ಕುಟುಂಬದ ಸದಸ್ಯರು ಪೋಟೋ ಗಮನಿಸಿ ಕೂಡಲೇ ತರೀಕೆರೆಗೆ ಬಂದು ಪ್ರಸಾದ್​ ಅನ್ನು ಭೇಟಿಯಾಗಿ, ಮನೆಗೆ ಕರೆದುಕೊಂಡು ಹೋಗಿದ್ದಾರೆ. 8 ವರ್ಷಗಳ ಹಿಂದೆ ಪ್ರಸಾದ್ ಕೇರಳದ ಮನೆಯಿಂದ ತಪ್ಪಿಸಿಕೊಂಡು ಅಲೆದಾಡುತ್ತಿದ್ದ ಎಂದು ಹೇಳಿದ್ದಾರೆ. ಹುಡುಕಿಕೊಟ್ಟ ವ್ಯಾಪಾರಿಗೆ ಧನ್ಯವಾದ ತಿಳಿಸಿದ್ದಾರೆ.

Intro:Kn_Ckm_04_Sociel_media_effect_av_7202347Body:ಚಿಕ್ಕಮಗಳೂರು :-

ಈ ಸಾಮಾಜಿಕ ಜಾಲತಾಣಗಳಿಂದಾ ಎಷ್ಟು ಅನುಕೂಲ ಆಗುತ್ತೋ ಅಷ್ಟೇ ರೀತಿಯಾ ಅನಾನುಕೂಲ ಆಗುತ್ತೆ.ಇಂದಿನ ಯುವ ಪೀಳಿಗೆಯಲ್ಲಿ ಸಾಮಾಜಿಕ ಜಾಲ ತಾಣ ಬಳಸದವರೇ ಇಲ್ಲ ಎಂದರೂ ತಪ್ಪಾಗಲಾರದು.ಈ ಸಾಮಾಜಿಕ ಜಾಲತಾಣದಿಂದಾ ಒಂದು ಅದ್ಬುತ ಕೆಲಸವಾಗಿದೆ. ಚಿಕ್ಕಮಗಳೂರು ಜಿಲ್ಲೆಯ ತರೀಕೆರೆಯಲ್ಲಿ ಕಳೆದ 8 ತಿಂಗಳಿಂದಾ ಪ್ರಸಾದ್ ಎಂಬ ಮಾನಸಿಕ ಅಸ್ವತ್ಥ ರಸ್ತೆಯಲ್ಲಿ ಅಲೆದಾಡಿಕೊಂಡು ಎಲ್ಲಿ ಬೇಕೋ ಅಲ್ಲಿ ಮಲಗಿಕೊಂಡು ಜೀವನ ಮಾಡುತ್ತಿದ್ದ ಇದನ್ನು ಗಮನಸಿದ ಸ್ಥಳೀಯ ಅಡಿಕೆ ವ್ಯಾಪರ ಮಾಡುವ ವ್ಯಕ್ತಿಯೊಬ್ಬರೂ ಇತನ ಭಾವಚಿತ್ರವನ್ನು ಫೇಸ್ ಬುಕ್ ನಲ್ಲಿ ಆಪ್ ಲೋಡ್ ಮಾಡಿ ಇತನ ಹೆಸರು ಹಾಗೂ ವಿಳಾಸ ಹಾಕಿದ್ದಾರೆ. ಮಲೆಯಾಳಂ ಭಾಷೆ ಮಾತನಾಡುವ ಪ್ರಸಾದ್ ಪೋಟೋ ವೈರಲ್ ಕೂಡ ಆಗಿದೆ.ಕೂಡಲೇ ಕೇರಳದ ವಯನಾಡಿನ ನೆರವಾರಂ ನಲ್ಲಿರುವ ಇತನ ಕುಟುಂಬ ಸದಸ್ಯರು ಈ ಪೋಟೋ ನೋಡಿ ಕೂಡಲೇ ತರೀಕೆರೆ ಬಂದೂ ಪ್ರಸಾದ್ ನ್ನು ಭೇಟಿಯಾಗಿ ಮನೆಗೆ ಕರೆದುಕೊಂಡು ಹೋಗಿದ್ದಾರೆ. ಕಳೆದ 8 ವರ್ಷಗಳ ಹಿಂದೇ ಪ್ರಸಾದ್ ಕೇಳರದ ಮನೆಯಿಂದಾ ತಪ್ಪಿಸಿಕೊಂಡು ಅಲೆದಾಡುತ್ತಿದ್ದನು. ಕಳೆದ 8 ವರ್ಷದಿಂದಾ ಪ್ರಸಾದ್ ಮನೆಯವರು ಪ್ರಸಾದ್ ಗಾಗಿ ಹುಡುಕಾಟ ನಡೆಸಿದ್ದರು. ಮಾನಸಿಕ ಅಸ್ವಸ್ಥನೂ ಆಗಿರುವ ಪ್ರಸಾದ್ ನನ್ನು ಆತನ ಮನೆಯವರು ತರಿಕೇರೆಗೆ ಬಂದೂ ಭೇಟಿಯಾಗಿ ಆತನನ್ನು ಮನೆಗೆ ಕರೆದುಕೊಂಡು ಹೋಗಿದ್ದಾರೆ.ಸಾಮಾಜಿಕ ಜಾಲತಾಣಲ್ಲಿ ಆತನ ಪೋಟ್ ಹಾಕಿ ಕುಟುಂಬದ ಸದಸ್ಯರಿಗೆ ಪ್ರಸಾದ್ ಸಿಗುವಂತೆ ಮಾಡಿದ ವ್ಯಕ್ತಿಗೆ ಧನ್ಯವಾದ ಹೇಳಿದ್ದಾರೆ.

Conclusion:ರಾಜಕುಮಾರ್.....
ಈ ಟಿವಿ ಭಾರತ್....
ಚಿಕ್ಕಮಗಳೂರು....
ETV Bharat Logo

Copyright © 2025 Ushodaya Enterprises Pvt. Ltd., All Rights Reserved.