ETV Bharat / state

ನಿಂಬೆಹಣ್ಣು ವ್ಯಾಪಾರಿ ಭರತ್ ಕೊಲೆ ಪ್ರಕರಣ: ಐವರು ಆರೋಪಿಗಳು ಅರೆಸ್ಟ್‌

author img

By

Published : May 18, 2019, 3:42 PM IST

ನಿಂಬೆಹಣ್ಣು ವ್ಯಾಪಾರಿ ಭರತ್ ಕೊಲೆ ಪ್ರಕರಣವನ್ನು ಪೊಲೀಸರು ಬೇಧಿಸಿದ್ದಾರೆ. ಮಾರ್ಕೇಟ್ ವೇಲು ಸೇರಿದಂತೆ 5 ಜನ ಆರೋಪಿಗಳ ಬಂಧಿಸಲಾಗಿದ್ದು ಹೆಚ್ಚಿನ ವಿಚಾರಣೆ ನಡೆಯುತ್ತಿದೆ.

ಡಿಸಿಪಿ ರವಿ.ಡಿ ಚೆನ್ನಣ್ಣನವರ್

ಬೆಂಗಳೂರು:ಕೆ.ಆರ್.ಮಾರ್ಕೆಟ್​ನಲ್ಲಿ ನಿಂಬೆ ಹಣ್ಣು ವ್ಯಾಪಾರಿ ಭರತ್ ಕೊಲೆ ಪ್ರಕರಣ ಸಂಬಂಧ ರೌಡಿ ಶೀಟರ್ ಮಾರ್ಕೇಟ್ ವೇಲು ಸೇರಿದಂತೆ 5 ಜನ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.

ಡಿಸಿಪಿ ರವಿ.ಡಿ ಚೆನ್ನಣ್ಣನವರ್ ಸ್ಪಷ್ಟನೆ

ರೌಡಿಶೀಟರ್ ಮಾರ್ಕೆಟ್ ವೇಲು, ಶರವಣ, ದೇವರಾಜ್, ಅರವಿಂದ್, ರಾಜ ಕಿರಣ್ ಬಂಧಿತ ಆರೋಪಿಗಳು.

ಮೇ.14ರಂದು ನಿಂಬೆಹಣ್ಣು ವ್ಯಾಪಾರಿ ಭರತ್ ಎಂಬುವರ ಮೇಲೆ ಹಲ್ಲೆ ನಡೆಸಿ ಬರ್ಬರವಾಗಿ ಕೊಲೆಗೈದಿದ್ದ ಆರೋಪಿಗಳು ತಮಿಳುನಾಡಿನಲ್ಲಿ ತಲೆಮರೆಸಿಕೊಂಡಿದ್ದರು.

ತಮಿಳುನಾಡಿನ ತಿರುನಮಲೈನ ಚೆಂಗನಲ್ಲಿ ಆರೋಪಿಗಳು ಅಡಗಿ ಕುಳಿತಿರುವ ಬಗ್ಗೆ ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ ಇನ್ಸ್‌ಪೆಕ್ಟರ್ ಮಾರುತಿ, ಶಿವಕುಮಾರ್ ಮತ್ತು ತಂಡ ಆರೋಪಿಗಳನ್ನು ಬಂಧಿಸಿದ್ದಾರೆ. ಸದ್ಯ ಈ ಐವರು ಆರೋಪಿಗಳನ್ನ ವಿಚಾರಣೆ ಮಾಡಲಾಗುತ್ತಿದೆ ಎಂದು ಪಶ್ಚಿಮ‌ ವಿಭಾಗದ ಡಿಸಿಪಿ ರವಿ.ಡಿ ಚೆನ್ನಣ್ಣನವರ್ ತಿಳಿಸಿದ್ದಾರೆ.

ಪ್ರಕರಣದ ವಿವರ:

ಕೊಲೆಯಾದ ಭರತ್, ಆರೋಪಿ ಶರವಣ್ ಮೇಲೆ ಏ.10ರಂದು ನಿವೇಶನದ ವಿಚಾರಕ್ಕೆ ಗುಂಪು ‌ಕಟ್ಟಿಕೊಂಡು ಹಲ್ಲೆ ನಡೆಸಿದ್ದರು. ಈ ಹಿನ್ನಲೆಯಲ್ಲಿ ಮಾರ್ಕೆಟ್​ನಲ್ಲಿ ಭರತ್ ಇರುವ ಮಾಹಿತಿ ಪಡೆದು ಕೊಲೆ ಮಾಡಲಾಗಿತ್ತು. ಈ ಸಂಬಂಧ ಕೆ.ಆರ್.ಮಾರ್ಕೆಟ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

Intro:ಸಂಜಯ್ ನಾಗ್ ಬೆಂಗಳೂರು KA10014
**********””””””””

ನಿಂಬೆಹಣ್ಣು ವ್ಯಾಪಾರಿ ಭರತ್ ಕೊಲೆ ಪ್ರಕರಣ: 5ಆರೋಪಿಗಳು ಅಂದರ್

ಬೆಂಗಳೂರು: ಕೆ.ಆರ್.ಮಾರ್ಕೆಟ್ ನಲ್ಲಿ ನಿಂಬೆ ಹಣ್ಣು ವ್ಯಾಪರಿ ಕೊಲೆ ಪ್ರಕರಣ ಸಂಬಂಧ ರೌಡಿ ಶೀಟರ್ ಮಾರ್ಕೇಟ್ ವೇಲು ಸೇರಿದಂತೆ 5ಜನ ಆರೋಪಿಗಳನ್ನು ಬಂಧಿಸಿದ್ದಾರೆ.

ರೌಡಿಶೀಟರ್ ಮಾರ್ಕೆಟ್ ವೇಲು, ಶರವಣ ,ದೇವರಾಜ್ , ಅರವಿಂದ್ ,ರಾಜ ಕಿರಣ್ ಬಂಧಿತ ಆರೋಪಿಗಳು. ಮೇ.14ರಂದು ನಿಂಬೆಹಣ್ಣು ವ್ಯಾಪಾರಿ ಭರತ್ ಎಂಬುಔನ ಮೇಲೆ ಹಲ್ಲೆ ನಡೆಸಿ, ಬರ್ಬರವಾಗಿ ಕೊಲೆಗೈದಿದ್ದರು. ನಂತರ ಆರೋಪಿಗಳು ತಮಿಳುನಾಡಿನಲ್ಲಿ ತಲೆಮರೆಸಿಕೊಂಡಿದ್ದರು.

Body:ತಮಿಳುನಾಡಿನ ತಿರುನಮಲೈನ ಚೆಂಗನಲ್ಲಿ ಆರೋಪಿಗಳು ಅಡಗಿಕುಳಿತಿದ್ದಾರೆಂಬ ಖಚಿತ ಮಾಹಿತಿಯೊಂದಿಗೆ ದಾಳಿ ನಡೆಸಿದ ಇನ್ಸ್‌ಪೆಕ್ಟರ್ ಮಾರುತಿ, ಶಿವಕುಮಾರ್ ಮತ್ತವರ ತಂಡದವರು ಆರೋಪಿಗಳಿಗೆ ಬಂಧಿಸಿದ್ದಾರೆ.ಸದ್ಯ ಐವರು ಆರೋಪಿಗಳನ್ನ ಹೆಚ್ಚಿನ ವಿಚಾರಣೆ ಮಾಡಲಾಗುತ್ತಿದೆ ಎಂದು ಪಶ್ಚಿಮ‌ ವಿಭಾಗದ ಡಿಸಿಪಿ ರವಿ ಡಿ ಚೆನ್ನಣ್ಣನವರ್ ತಿಳಿಸಿದ್ದಾರೆ.

Conclusion:ಪ್ರಕರಣದ ವಿವರ: ಕೊಲೆಯಾದ ಭರತ್ ಆರೋಪಿ ಶರವಣ್ ಮೇಲೆ ಏ.10ರಂದು ಜಾಗದ ವಿಚಾರಕ್ಕೆ ಗುಂಪು‌ಕಟ್ಟಿಕೊಂಡು ಹಲ್ಲೆ ಮಾಡಿದ್ದ. ಈ ಹಿನ್ನಲೆ ಯಲ್ಲಿ ಮೊನ್ನೆ ಮಾರ್ಕೆಟ್ ನಲ್ಲಿ ಭರತ್ ಇದ್ದ ಮಾಹಿತಿ ಪಡೆದು ಕೊಲೆ ಮಾಡಲಾಗಿತ್ತು. ಈ ಸಂಬಂಧ ಕೆ.ಆರ್.ಮಾರ್ಕೆಟ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಿಕೊಂಡ ಪೊಲೀಸರು ಆರೋಪಿಗಳ ಹುಡುಕಾಟದಲ್ಲಿ ನಡೆಸಿದ್ದರು.

For All Latest Updates

ETV Bharat Logo

Copyright © 2024 Ushodaya Enterprises Pvt. Ltd., All Rights Reserved.