ETV Bharat / state

12 ದಿನಗಳ ಕಾಲ ಶಾಸಕ ಮುನಿರತ್ನ ಎಸ್ಐಟಿ ವಶಕ್ಕೆ - MLA Munirathna Case - MLA MUNIRATHNA CASE

ನ್ಯಾಯಾಂಗ ಬಂಧನದಲ್ಲಿರುವ ಆರ್.ಆರ್.ನಗರ ಶಾಸಕ ಮುನಿರತ್ನ ಅವರನ್ನು 12 ದಿನಗಳ ಕಾಲ ಎಸ್ಐಟಿ ವಶಕ್ಕೆ ನೀಡಲಾಗಿದೆ.

MLA MUNIRATHNA CASE
ಶಾಸಕ ಮುನಿರತ್ನ (ETV Bharat)
author img

By ETV Bharat Karnataka Team

Published : Sep 24, 2024, 5:58 PM IST

ಬೆಂಗಳೂರು: ಅತ್ಯಾಚಾರ ಆರೋಪ ಪ್ರಕರಣದಡಿ ನ್ಯಾಯಾಂಗ ಬಂಧನದಲ್ಲಿರುವ ಆರ್.ಆರ್. ನಗರ ಶಾಸಕ ಮುನಿರತ್ನ ಅವರನ್ನು 12 ದಿನಗಳ ಕಾಲ ಎಸ್ಐಟಿ ವಶಕ್ಕೆ ನೀಡಿ ಜನಪ್ರತಿನಿಧಿಗಳ ನ್ಯಾಯಾಲಯ ಆದೇಶ ಹೊರಡಿಸಿದೆ.

ಅಕ್ಟೋಬರ್ 5ರ ವರೆಗೆ 12 ದಿನಗಳ ಕಾಲ ಪೊಲೀಸ್ ವಶಕ್ಕೆ ಅನುಮತಿ ನೀಡುತ್ತಿದ್ದಂತೆ ಮುನಿರತ್ನ ಅವರನ್ನು ಕರೆದೊಯ್ಯಲು ಪರಪ್ಪನ ಅಗ್ರಹಾರ ಜೈಲಿಗೆ ಎಸ್​ಐಟಿ ದೌಡಾಯಿಸಿದೆ. ಆದೇಶ ಪ್ರತಿ ಜೈಲಾಧಿಕಾರಿಗಳಿಗೆ ತೋರಿಸಿ ಇಂದೇ ಎಸ್ಐಟಿ ತನ್ನ ಸುಪರ್ದಿಗೆ ತೆಗೆದುಕೊಳ್ಳಲು ಮುಂದಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ.

ಶಾಸಕ ವಿರುದ್ಧ ವೈಯಾಲಿಕಾವಲ್ ಠಾಣೆಯಲ್ಲಿ ಜೀವ ಬೆದರಿಕೆ ಹಾಗೂ ಜಾತಿನಿಂದನೆ ಹಾಗೂ ಕಗ್ಗಲಿಪುರ ಠಾಣೆಯಲ್ಲಿ ಆತ್ಯಾಚಾರ ಪ್ರಕರಣಗಳ ಸಮಗ್ರ ತನಿಖೆ ನಡೆಸುವಂತೆ ಸರ್ಕಾರವು ಕಳೆದ ಶನಿವಾರ ಎಸ್ಐಟಿ ರಚಿಸಿ ಆದೇಶಿಸಿತ್ತು. ಎಸ್ಐಟಿ ಮುಖ್ಯಸ್ಥರಾಗಿ ಸಿಐಡಿ ಆರ್ಥಿಕ ಅಪರಾಧ ವಿಭಾಗದ ಎಡಿಜಿಪಿ ಬಿ.ಕೆ. ಸಿಂಗ್ ಮುಖ್ಯಸ್ಥರಾಗಿ, ಐಪಿಎಸ್ ಅಧಿಕಾರಿಗಳಾದ ಲಾಬುರಾಮ್, ಡಾ.ಸೌಮ್ಯಲತಾ ಹಾಗೂ ಸೈಮನ್ ಅವರನ್ನ ಸದಸ್ಯರಾಗಿ ಸರ್ಕಾರ ನಿಯೋಜಿಸಿತ್ತು.

ಬಾಡಿ ವಾರೆಂಟ್ ಮೇಲೆ ಸರ್ಕಾರ ಮುನಿರತ್ನ ಅವರನ್ನು ಎಸ್ಐಟಿ ವಶಕ್ಕೆ ಪಡೆದುಕೊಳ್ಳಲಿದೆ. ಏತನ್ಮಧ್ಯೆ ಆತ್ಯಾಚಾರ ಪ್ರಕರಣದಲ್ಲಿ ಜಾಮೀನು ಕೋರಿ ಸಲ್ಲಿಸಿದ ಅರ್ಜಿ ವಿಚಾರಣೆ ನಾಳೆ ನಡೆಯಲಿದೆ.

ಇದನ್ನೂ ಓದಿ: ಶಾಸಕ ಸ್ಥಾನದಿಂದ ಮುನಿರತ್ನ ಅಮಾನತು ಮಾಡಲು ಸಭಾಧ್ಯಕ್ಷರಿಗೆ ಸಚಿವ ಹೆಚ್.ಕೆ ಪಾಟೀಲ್ ಪತ್ರ - mla Muniratna case

ETV Bharat Logo

Copyright © 2025 Ushodaya Enterprises Pvt. Ltd., All Rights Reserved.