ಚಿಕ್ಕಮಗಳೂರು: ಜಿಲ್ಲೆಯ ಮಲೆನಾಡು ಭಾಗದ ವಿವಿಧೆಡೆ ಭಾರಿ ಮಳೆ ಆಗುತ್ತಿದೆ. ಮಳೆ-ಗಾಳಿಗೆ ಆಟೋ ಮೇಲೆ ತೆಂಗಿನ ಮರ ಬಿದ್ದು ಜಖಂ ಆಗಿದೆ. ಇನ್ನು ಕೆಲವೆಡೆ ಮಳೆಯಿಂದ ಅವಾಂತರ ಸೃಷ್ಟಿಯಾಗಿದೆ.
ಜಿಲ್ಲೆಯ ಮೂಡಿಗೆರೆ ತಾಲೂಕಿನ ಜನ್ನಾಪುರದಲ್ಲಿ ತೆಂಗಿನ ಮರ ಬಿದ್ದ ಹಿನ್ನೆಲೆಯಲ್ಲಿ ಆಟೋ ಸಂಪೂರ್ಣವಾಗಿ ಜಖಂ ಆಗಿದೆ. ಆಟೋದಲ್ಲಿ ಯಾರೂ ಇಲ್ಲದಿದ್ದರಿಂದ ಪ್ರಾಣ ಹಾನಿ ತಪ್ಪಿದೆ. ಮಳೆಯಿಂದ ಒಂದಲ್ಲ ಒಂದು ಅವಾಂತರಗಳು ಉಂಟಾಗುತ್ತಿರುವ ಹಿನ್ನೆಲೆ ಮಳೆ ಬಂದರೆ ಸಾಕು ಮಲೆನಾಡು ಭಾಗದಲ್ಲಿ ಜನರು ಆತಂಕಕ್ಕೆ ಒಳಗಾಗುತ್ತಿದ್ದಾರೆ.