ಚಿಕ್ಕಮಗಳೂರು : ಜಿಲ್ಲೆಯ ಮಲೆನಾಡು ಹಾಗೂ ಬಯಲು ಸೀಮೆಯ ಭಾಗದಲ್ಲಿ ಧಾರಾಕಾರ ಮಳೆ ಮುಂದುವರೆದಿದೆ.
ಜಿಲ್ಲೆಯ ಹಲವಾರು ಭಾಗದಲ್ಲಿ ನಿರಂತರ ಮಳೆ ಸುರಿಯುತ್ತಿರುವುದರಿಂದ ಹತ್ತಾರು ಮರಗಳು ಧರೆಗೆ ಉರುಳಿವೆ. ತರೀಕೆರೆ ತಾಲೂಕಿನಲ್ಲಿ ಸುರಿದ ಭೀಕರ ಮಳೆಯಿಂದ, ಬೃಹತ್ ಗಾತ್ರದ ಮರವೊಂದು ಕಾರಿನ ಮೇಲೆ ಬಿದ್ದು, ಸಂಪೂರ್ಣ ಜಖಂಗೊಂಡಿದೆ.
![Heavy Rain in Chikkamagaluru](https://etvbharatimages.akamaized.net/etvbharat/prod-images/kn-ckm-04-damage-av-7202347_05052020135717_0505f_1588667237_568.jpg)
ನಿರಂತರ ಸುರಿಯುತ್ತಿರುವ ಮಳೆಯಿಂದ ಸಾರ್ವಜನಿಕರಲ್ಲಿ ಆತಂಕ ಹೆಚ್ಚಾಗಿದ್ದು ತರೀಕೆರೆ, ಕಡೂರು, ಮೂಡಿಗೆರೆ ಭಾಗದ ಹಲವೆಡೆ ಭಾರಿ ಮಳೆಯಾಗುತ್ತಿದೆ.
ರಸ್ತೆಯ ಮೇಲೆ ಮಳೆಯ ನೀರು ತುಂಬಿ ಹರಿಯುತ್ತಿದ್ದು, ವಾಹನ ಸಂಚಾರ ಮತ್ತು ಜನ ಜೀವನ ಅಸ್ತವ್ಯಸ್ತಗೊಂಡಿದೆ.