ETV Bharat / state

ಕಾಫಿ ನಾಡಲ್ಲಿ ವರುಣನ ಆರ್ಭಟ: ಸಂಕಷ್ಟದಲ್ಲಿ ಜನತೆ - flood in chikkamagalur

ಚಿಕ್ಕಮಗಳೂರು ಜಿಲ್ಲೆಯ ಮಲೆನಾಡು ಭಾಗದಲ್ಲಿ ಮಳೆಯ ರುದ್ರನರ್ತನಕ್ಕೆ ನೂರಾರು ಮನೆಗಳು ಮಣ್ಣು ಪಾಲಾಗಿವೆ. ನಿರಂತರ ಮಳೆಯಿಂದ ಹೊಲ-ಗದ್ದೆ, ತೋಟಗಳು ನೀರು ಪಾಲಾಗಿದೆ. ಮಲೆನಾಡು ಜನರ ಆಸೆ ಜಲ ರಾಕ್ಷಸನ ಒಡಲು ಸೇರಿ ಹೋಗಿದ್ದು, ಈ ಘಟನೆಯಿಂದ ಸಾವಿರಾರೂ ಜನರ ಬದುಕು ಬೀದಿಗೆ ಬಂದಿದೆ.

ಕಾಫಿ ನಾಡಲ್ಲಿ ವರುಣನ ಆರ್ಭಟ
author img

By

Published : Aug 30, 2019, 7:23 PM IST

ಚಿಕ್ಕಮಗಳೂರು: ಮಲೆನಾಡಲ್ಲಿ ಸುರಿದ ಮಳೆಗೆ ಹಳ್ಳ -ಕೊಳ್ಳಗಳು ಉಕ್ಕಿ ಹರಿಯುತ್ತಿದ್ದು, ಮಲೆನಾಡಿಗರ ಬದುಕು ಬರಿದಾಗಿದೆ. ಇರೋಕೆ ಸೂರು ಇಲ್ಲದ್ದಂತೆ ಎಲ್ಲ ಜಾಗವನ್ನು ವರುಣ ಕಿತ್ತುಕೊಂಡು ಹೋಗಿದ್ದಾನೆ. ಅಂದು ದುಡಿದು ಅಂದೇ ತಿನ್ನೋ ಮಲೆನಾಡಿನ ಸಾವಿರಾರು ಜನ ಇದೀಗ ಹಲವಾರು ಸವಾಲುಗಳನ್ನು ಎದುರಿಸುತ್ತಿದ್ದಾರೆ.

ಮಲೆನಾಡಿನ ಜಲ ರಾಕ್ಷಸನ ರುದ್ರನರ್ತನಕ್ಕೆ ಬದುಕನ್ನೆ ಕಳೆದುಕೊಂಡವರು ಸಾವಿರಾರು ಜನ. ಅವರೆಲ್ಲರೂ ನಿರಾಶ್ರಿತ ಕೇಂದ್ರದಲ್ಲಿದ್ದಾರೆ. ಮಲೆನಾಡ ಮಳೆ ಬೆಟ್ಟ-ಗುಡ್ಡ ಎಲ್ಲವನ್ನೂ ತಿಂದು-ತೇಗಿ ನೀರು ಕುಡಿದಿದೆ.ಇಲ್ಲಿನ ಪರಿಸ್ಥಿತಿ ನೋಡಿದರೇ ಮಲೆನಾಡಿನ ಜನರು ಮುಂದೆ ಹೇಗೆ ದುಡಿಯುತ್ತಾರೆ, ಹೊಟ್ಟೆಗೆ ಹಿಟ್ಟು ಹೇಗೆ ಪಡೆದುಕೊಳ್ಳುತ್ತಾರೆ ಅನ್ನೋದು ಯಕ್ಷ ಪ್ರಶ್ನೆಯಾಗಿದೆ. ಆ ದಿನದ ಘಟನೆಗಳು ಇಂದಿಗೂ ಇಲ್ಲಿನ ಜನರನ್ನು ಬೆಚ್ಚಿ ಬೀಳಿಸುತ್ತಿದ್ದು, ಮತ್ತೆ ಯಾವುದೇ ಕಾರಣಕ್ಕೂ ಈ ರೀತಿಯಾ ಅವಾಂತರಗಳು ಸೃಷ್ಟಿ ಆಗೋದು ಬೇಡಾ ಎಂದೂ ದೇವರಲ್ಲಿ ಪ್ರಾರ್ಥನೆ ಮಾಡುತ್ತಿದ್ದಾರೆ.

ಕಾಫಿ ನಾಡಲ್ಲಿ ವರುಣನ ಆರ್ಭಟ

ಒಟ್ಟಾರೆಯಾಗಿ ಈ ಮಳೆ ಮಲೆನಾಡು ಜನರ ಮನೆ ಜೊತೆ ಹೊಲ-ಗದ್ದೆ-ತೋಟಗಳನ್ನೆಲ್ಲಾ ಕೊಚ್ಚಿಕೊಂಡು ಮತ್ತೆಲ್ಲಿಗೋ ತೆಗೆದುಕೊಂಡು ಹೋಗಿ ಬಿಟ್ಟಿದೆ. ನಮ್ಮ ಮುಂದಿನ ಬದುಕು ಹೇಗೆ ಎಂದು ಪ್ರತಿಯೊಬ್ಬರೂ ಯೋಚನೆ ಮಾಡುವಂತಹ ಪರಿಸ್ಥಿತಿ ಈಗ ತಲೆ ದೋರಿದೆ.

Intro:Kn_Ckm_04_megha spotada anahuta_pkg_7202347
Body:
ಚಿಕ್ಕಮಗಳೂರು :-

ಚಿಕ್ಕಮಗಳೂರು ಜಿಲ್ಲೆಯ ಮಲೆನಾಡು ಭಾಗದಲ್ಲಿ ನೂರಾರು ಮನೆಗಳು ಮಣ್ಣು ಪಾಲಾಗಿದೆ. ನಿರಂತರ ಸುರಿದ ಮಹಾ ಮಳೆಯ ಅರ್ಭಟ ನೋಡಿದರೇ ನಿಮ್ಮ ಒಂದು ಕ್ಷಣ ನಿಮ್ಮ ಎದೆ ಝಲ್ ಎನ್ನದೇ ಇರದು. ನಿರಂತರ ಮಳೆಯಿಂದಾ ಹೊಲ-ಗದ್ದೆ-ತೋಟಗಳು ನೀರು ಪಾಲಾಗಿದೆ.ಮಲೆನಾಡು ಜನರ ಆಸೆ ಜಲ ರಾಕ್ಷಸನ ಒಡಲು ಸೇರಿ ಹೋಗಿದ್ದು ಈ ಘಟನೆಯಿಂದಾ. ಸಾವಿರಾರೂ ಜನರ ಬದುಕು ಬೀದಿಗೆ ಬಂದು ನಿಂತುಕೊಂಡಿದೆ.ಈ ಕುರಿತ ಒಂದು ವರದಿ ಇಲ್ಲಿದೇ ನೋಡಿ....

ಹೌದು ಮಲೆನಾಡಲ್ಲಿ ಸುರಿದ ಮಳೆಯ ರೌದ್ರ ನರ್ತನದ ದೃಶ್ಯಗಳು ನೋಡಿದರೇ ಕೈ ಕಾಲು ನಡುಗದೇ ಇರದು.ಆ ರೀತಿಯಾಗಿ ಮಳೆಯ ನೀರು ಹಳ್ಳ -ಕೊಳ್ಳದಲ್ಲಿ ಉಕ್ಕಿ ಹರಿದಿದ್ದು ಈ ರೀತಿಯಾ ರಕ್ಕಸ ರಬಸ ಹಿಂದೆಂದೂ ಮಲೆನಾಡಿನ ಜನರು ನೋಡಿರಲಿಲ್ಲ.ಮಲೆನಾಡು ಭಾಗದಲ್ಲಿ ಬಿದ್ದದ್ದು ಬೆಟ್ಟ-ಗುಡ್ಡವಲ್ಲ ಜನರ ಬದುಕು. ಈ ವರ್ಷದ ಹತ್ತೇ ದಿನದ ಮಳೆ ಮಲೆನಾಡಿಗರ ಬದುಕನ್ನು ರಣ ಹದ್ದಿನಂತೆ ಕಿತ್ತು ತಿಂದಿದೆ. ಇರೋಕೆ ಸೂರು ಇಲ್ಲದಂತೆ ಈ ಮಳೆ ಮಾಡಿ ಹೋಗಿದೆ. ಮಲಗೋಕೆ ಜಾಗವೂ ಇರದ ರೀತಿಯಲ್ಲಿ ಜಾಗವನ್ನೇ ಕಿತ್ತುಕೊಂಡು ಹೋಗಿದೆ. ಇದ್ದ ಭೂಮಿ ಇದ್ದಲ್ಲಿಲ್ಲ. ಮಕ್ಕಳ ಮುಖ ನೋಡಿದರೇ ಏನು ಮಾಡಲು ಮನಸ್ಸು ತೋಚುತ್ತಿಲ್ಲ. ಇದು ಮಲೆನಾಡಿನ ಸದ್ಯದ ಸ್ಥಿತಿ. ಅಂದು ದುಡಿದು ಅಂದೇ ತಿನ್ನೋ ಮಲೆನಾಡಿನ ಸಾವಿರಾರು ಜನ ಇದೀಗ ಅಂತಹಾ ಸವಾಲು ಎದುರಿಸುತ್ತಿದ್ದಾರೆ.

ಮಲೆನಾಡಿನ ಜಲ ರಾಕ್ಷಸನ ರುದ್ರನರ್ತನಕ್ಕೆ ಬದುಕನ್ನೆ ಕಳೆದುಕೊಂಡವರು ಸಾವಿರಾರು ಜನ. ಅವರೆಲ್ಲರೂ ನಿರಾಶ್ರಿತ ಕೇಂದ್ರದಲ್ಲಿದ್ದಾರೆ. ಎಷ್ಟು ದಿನ. ವಾರ, ತಿಂಗಳು. ಆಮೇಲೆ. ಹೋಗಲೇಬೇಕಾ. ಎಲ್ಲಿಗೆ ಹೋಗೋದು. ಮನೆಗೆ. ಯಾರ ಮನೆ, ಎಲ್ಲಿದೆ. ಮಲೆನಾಡ ಮಳೆ-ಬೆಟ್ಟ-ಗುಡ್ಡ ಎಲ್ಲವನ್ನೂ ತಿಂದು-ತೇಗಿ ನೀರು ಕುಡಿದಿದೆ.ಇಲ್ಲಿನ ಪರಿಸ್ಥಿತಿ ನೋಡಿದರೇ ಮಲೆನಾಡಿನ ಜನರು ಮುಂದೆ ಹೇಗೆ ದುಡಿಯುತ್ತಾರೆ ಹೊಟ್ಟೆಗೆ ಹಿಟ್ಟು ಹೇಗೆ ಪಡೆದುಕೊಳ್ಳುತ್ತಾರೆ ಅನ್ನೋದು ಯಕ್ಷ ಪ್ರಶ್ನೇಯಾಗಿದೆ.ಹಲವು ದಿನಗಳು ಸುರಿದ ಮಹಾ ಮಳೆಯಿಂದಾ ಮಲೆನಾಡಿನ ಜನರು ಬೆಚ್ಚಿ ಬಿದ್ದಿದ್ದಾರೆ. ಮಳೆಯ ನೀರಿನಲ್ಲಿ ಮಲೆನಾಡು ಜನರ ಬದುಕು ಅಲ್ಲದೇ ಎಲ್ಲವೂ ಕೊಚ್ಚಿ ಹೋಗಿದೆ. ಆ ದಿನದ ಘಟನೆಗಳು ಇಂದಿಗೂ ಇಲ್ಲಿನ ಜನರನ್ನು ಬೆಚ್ಚಿ ಬೀಳಿಸುತ್ತಿದ್ದು ಮತ್ತೆ ಯಾವುದೇ ಕಾರಣಕ್ಕೂ ಈ ರೀತಿಯಾ ಅವಾಂತರಗಳು ಸೃಷ್ಟಿ ಆಗೋದು ಬೇಡಾ ಎಂದೂ ಪ್ರಾರ್ಥನೆ ಮಾಡುತ್ತಿದ್ದಾರೆ.

ಒಟ್ಟಾರೆಯಾಗಿ ಈ ಮಳೆ ಮಲೆನಾಡು ಜನರ ಮನೆ ಜೊತೆ ಹೊಲ-ಗದ್ದೆ-ತೋಟಗಳನ್ನೆಲ್ಲಾ ಕೊಚ್ಚಿಕೊಂಡು ಮತ್ತೆಲ್ಲಿಗೋ ತೆಗೆದುಕೊಂಡು ಹೋಗಿ ಬಿಟ್ಟಿದೆ. ನಮ್ಮ ಮುಂದಿನ ಬದುಕು ಹೇಗೆ ಎಂದೂ ಪ್ರತಿಯೊಬ್ಬರೂ ಯೋಚನೆ ಮಾಡುವಂತಹ ಪರಿಸ್ಥಿತಿ ಈಗ ತಲೆ ದೋರಿದ್ದು ಇಲ್ಲಿನ ಪರಿಸ್ಥಿತಿಯನ್ನು ಸರಿ ಮಾಡಲಾಗದ ಸ್ಥಿತಿಗೆ ಈ ಮಹಾ ಮಳೆ ದೊಡ್ಡ ಅನಾವುತವನ್ನು ಸೃಷ್ಟಿ ಮಾಡಿ ಹೋಗಿದೆ....

Conclusion:ರಾಜಕುಮಾರ್.....
ಈ ಟಿವಿ ಭಾರತ್.....
ಚಿಕ್ಕಮಗಳೂರು.....
ETV Bharat Logo

Copyright © 2025 Ushodaya Enterprises Pvt. Ltd., All Rights Reserved.