ಚಿಕ್ಕಮಗಳೂರು: ನಗರದಲ್ಲಿ ಧಾರಾಕಾರ ಮಳೆಯಾಗುತ್ತಿದ್ದು, ನಿಲ್ಲದ ವರುಣನಿಂದ ನಾನಾ ಅವಾಂತರ ಸೃಷ್ಟಿಯಾಗಿದೆ.
ಮಳೆ ಅವಾಂತರಕ್ಕೆ ಮತ್ತೊಂದು ಮನೆ ನೆಲಸಮವಾಗಿದ್ದು. ನಗರದ ವಿಜಯಪುರ ಬಡಾವಣೆಯ ಅಶೋಕ್ ಕಾಮತ್ ಎಂಬುವವರ ಮನೆ ಇದಾಗಿದೆ. ಇನ್ನೊಂದೆಡೆ ಕಳೆದ 5 ವರ್ಷಗಳ ಬಳಿಕ ಐತಿಹಾಸಿಕ ಮಾಗಡಿ ಕೆರೆ ತುಂಬಿದೆ. ತಾಲೂಕಿನ ಮಾಗಡಿ ದೊಡ್ಡ ಕೆರೆ ಕೋಡಿ ಬಿದ್ದಿದೆ. ಕೆರೆ ತುಂಬಿದಕ್ಕೆ ರೈತರಲ್ಲಿ ಸಂತಸ ಮನೆ ಮಾಡಿದ್ದು, ಬೇಲೂರಿನ ಯಗಚಿ ಜಲಾಶಯಕ್ಕೆ ನೀರು ಹರಿದು ಹೋಗುತ್ತಿದೆ.