ಚಿಕ್ಕಮಗಳೂರು: ಜಿಲ್ಲೆಯ ಚಾರ್ಮಾಡಿ ಘಾಟ್ ಅರಣ್ಯದಲ್ಲಿ ಬೆಂಕಿ ಹತ್ತಿಕೊಂಡಿದೆ. ಶಿಕಾರಿಗೆ ಹೋಗಿರುವಂತಹ ವ್ಯಕ್ತಿಗಳು ಬೆಂಕಿ ಹಾಕಿರಬಹುದು ಎಂಬ ಶಂಕೆ ವ್ಯಕ್ತವಾಗುತ್ತಿದೆ.
ಜಿಲ್ಲೆಯ ಮೂಡಿಗೆರೆ ತಾಲೂಕಿನ ಅರಣ್ಯದ ಚಾರ್ಮಾಡಿ ಘಾಟ್ ಪ್ರದೇಶದ ಬಾರಿಮಲೆ ಗುಡ್ಡದಲ್ಲಿ ಈ ಅವಘಡ ಜರುಗಿದೆ. ಬೆಂಕಿ ಹತ್ತಿಕೊಂಡ ಕಾರಣ ಹತ್ತಾರು ಎಕರೆ ಅರಣ್ಯ ಸಂಪತ್ತು ನಾಶವಾಗಿದೆ. ಘಟನೆಯಿಂದ ತುಂಬಾ ಅಮೂಲ್ಯವಾದ ಸಸ್ಯ ಸಂಪತ್ತು ಹಾಗೂ ಅತ್ಯಂತ ಸೂಕ್ಷ್ಮ ಔಷಧ ಸಂಪತ್ತು ಕೂಡ ನಾಶವಾಗಿ ಹೋಗುವ ಆತಂಕ ಎದುರಾಗಿದೆ.
ಇದನ್ನೂ ಓದಿ: ಈಗ ಬಿಜೆಪಿ ಜೊತೆ ಮೈತ್ರಿ ಮಾಡಿಕೊಂಡರೆ ಜೆಡಿಎಸ್ಗೆ ಲಾಭವಿಲ್ಲ: ಸಿ.ಟಿ.ರವಿ
ಘಾಟ್ನ ಬಾಳೂರು ಮೀಸಲು ಅರಣ್ಯದಲ್ಲಿ ಈ ಘಟನೆ ನಡೆದಿದೆ. ಈ ಬೆಂಕಿ ಸುತ್ತಮುತ್ತಲಿನ ಅರಣ್ಯ ಪ್ರದೇಶಕ್ಕೆ ಆವರಿಸಿಕೊಳ್ಳುವ ಆತಂಕ ಮೂಡಿಸುತ್ತಿದೆ. ಕ್ಷಣದಿಂದ ಕ್ಷಣಕ್ಕೆ ಹಬ್ಬುತ್ತಿರುವ ಬೆಂಕಿಯನ್ನು ನಿಯಂತ್ರಿಸಲು ಅರಣ್ಯ ಇಲಾಖೆ ಸಿಬ್ಬಂದಿ ಹರ ಸಾಹಸ ಪಡುತ್ತಿದ್ದಾರೆ.