ಚಿಕ್ಕಮಗಳೂರು: ಸಾರ್ವಜನಿಕರಿಗೆ ಸೊಪ್ಪು, ತರಕಾರಿ ಮಾರಾಟ ಮಾಡದಂತೆ ಸರ್ಕಾರಿ ನಕಲಿ ಕರ್ಫ್ಯೂ ಪಾಸ್ ಸೇಲ್ ಮಾಡುತ್ತಿದ್ದ ತಾಯಿ ಮಗನನ್ನ ಚಿಕ್ಕಮಗಳೂರು ನಗರ ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಜಿಲ್ಲಾಡಳಿತ ನೀಡಿದ್ದ, ಕರ್ಫ್ಯೂ ಪಾಸ್, ವಾಹನಗಳ ಪಾಸ್ಗಳನ್ನ ನಕಲಿ ಮಾಡಿ, ಪ್ರಿಂಟ್ ತೆಗೆದು 500,1000 ರೂಗಳಂತೆ ಮಾರಾಟ ಮಾಡಿರುವ ಆರೋಪ ಕೇಳಿ ಬಂದಿತ್ತು. ನಕಲಿ ಕರ್ಫ್ಯೂ ಪಾಸ್ ಮಾರಾಟ ಮಾಡುತ್ತಿದ್ದ ತಾಯಿ ಮಗನನ್ನ ಪೊಲೀಸರ ವಶಕ್ಕೆ ಪಡೆದಿದ್ದಾರೆ. ಅಸ್ಲಾಂ ಪಾಷಾ (17) ಮತ್ತು ತಾಯಿ ಶಾಜಿದಾ ಬಾನು ಬಂಧಿತ ಆರೋಪಿಗಳು.
ಈಗಾಗಲೇ 100 ಕ್ಕೂ ಹೆಚ್ಚು ಪಾಸ್ ಮಾರಾಟ ಮಾಡಿದ್ದಾರೆ ಎಂದೂ ಹೇಳಲಾಗುತ್ತಿದ್ದು, ಈ ಕುರಿತು ನಗರ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಿಕೊಳ್ಳಲಾಗಿದೆ.