ಚಿಕ್ಕಮಗಳೂರು : ಈಗಾಗಲೇ ರಾಜ್ಯಾದ್ಯಂತ ಕೊರೊನಾ ವ್ಯಾಪಕವಾಗಿ ಹರಡಿದೆ. ಸರಿಯಾದ ವೈದ್ಯಕೀಯ ಸೌಲಭ್ಯವಿಲ್ಲದೆ ಜನ ಅಲ್ಲಲ್ಲಿಯೇ ಕುಸಿದು ಬಿದ್ದು ಪ್ರಾಣವನ್ನು ಕಳೆದುಕೊಂಡಿದ್ದಾರೆ.
ಹೀಗಿರುವಾಗ ಜಿಲ್ಲೆಯ ಕಳಸದಲ್ಲಿ ಆರಂಭವಾಗಿದ್ದ ಕೋವಿಡ್ ಕೇರ್ ಸೆಂಟರ್‌ನ ವೈದ್ಯರನ್ನು ಎತ್ತಂಗಡಿ ಮಾಡಲಾಗಿದೆ.
ಕಾಫಿನಾಡಿನಲ್ಲಿ ಕೊರೊನಾರ್ಭಟ ಅಧಿಕವಾಗುತ್ತ ಬಂದಿದ್ದರಿಂದ ಕಳಸ ಪಟ್ಟಣದಲ್ಲಿ ಕೋವಿಡ್ ಕೇರ್ ಸೆಂಟರ್ ತೆರೆಯಲಾಗಿತ್ತು. ಆದರೆ, ಈಗ ಅಲ್ಲಿದ್ದಂತಹ ವೈದ್ಯಾಧಿಕಾರಿ ಡಾ.ಅನುಗೌರಿ ಎಂಬುವರನ್ನ ಬೀದರ್ ಜಿಲ್ಲೆಗೆ ವರ್ಗಾವಣೆ ಮಾಡಲಾಗಿದೆ.
ಕಳೆದ 4 ದಿನಗಳ ಹಿಂದೆ ಕೋವಿಡ್ ಕೇರ್ ಸೆಂಟರ್‌ನ ಜಿಲ್ಲಾ ಉಸ್ತುವಾರಿ ಸಚಿವ ಅಂಗಾರ, ಪರಿಷತ್ ಉಪಸಭಾಪತಿ ಪ್ರಾಣೇಶ್, ಸಿಎಂ ರಾಜಕೀಯ ಕಾರ್ಯದರ್ಶಿ ಜೀವರಾಜ್, ಸ್ಥಳೀಯ ಶಾಸಕರು ಭಾಗವಹಿಸಿ ಉದ್ಘಾಟಿಸಿದ್ದರು.
ಚಿಕ್ಕಮಗಳೂರು ಜಿಲ್ಲಾ ಕೇಂದ್ರದಿಂದ 90 ಕಿಲೋಮೀಟರ್ ದೂರದಲ್ಲಿ ಕಳಸ ನಗರವಿದ್ದು, ಆರೋಗ್ಯ ಸಿಬ್ಬಂದಿ ಕೊರತೆಯಿಂದ ಜನರು ಪರದಾಟ ನಡೆಸುತ್ತಿದ್ದಾರೆ.
ಇಂತಹ ಪರಿಸ್ಥಿತಿಯಲ್ಲೂ ಇದ್ದ ಒಬ್ಬ ವೈದ್ಯರನ್ನು ವರ್ಗಾವಣೆ ಮಾಡಲಾಗಿದ್ದು, ಜನರ ಜೀವನದ ಜೊತೆ ಚೆಲ್ಲಾಟ ಆಡುತ್ತಿದ್ದೀರಾ ಎಂದು ಜನ ಪ್ರಶ್ನೆ ಮಾಡಿದ್ದಾರೆ.
ಓದಿ: Black Fungus: ಕಪ್ಪು ಶಿಲೀಂಧ್ರಕ್ಕೆ ರಾಜ್ಯದಲ್ಲಿ 39 ಜನ ಬಲಿ.. ಏರುತ್ತಿದೆ ಸೋಂಕಿತರ ಸಂಖ್ಯೆ