ಚಿಕ್ಕಮಗಳೂರು : ಪಟಾಕಿ ಅದೊಂದು ಸಂಸ್ಕೃತಿಯ ಸಂಕೇತ. ನಾನು ಕೇಡಿ ರವಿ ಅಲ್ಲ. ನನ್ನ ಟ್ರ್ಯಾಕ್ ರೆಕಾರ್ಡ್ನಲ್ಲಿ ಜನಪರ ಹೋರಾಟ ಮಾಡಿದ್ದು ಇದೆ. ಆದ್ರೆ, ತಿಹಾರ್ ಜೈಲು ಇಲ್ಲ ಎಂದು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಪಟಾಕಿ ರವಿ ಹೇಳಿಕೆಗೆ ಬಿಜೆಪಿ ರಾಷ್ಟ್ರೀಯ ಕಾರ್ಯದರ್ಶಿ ಸಿ ಟಿ ರವಿ ತಿರುಗೇಟು ನೀಡಿದರು.
ನಗರದಲ್ಲಿ ಮಾತನಾಡಿದ ಅವರು, ನನ್ನ ಟ್ರ್ಯಾಕ್ ರೆಕಾರ್ಡ್ ಬಹಳ ಶುದ್ದವಾಗಿದೆ. ಅದರಲ್ಲಿ ತಿಹಾರ್ ಜೈಲಿಲ್ಲ. ನೀವು ಯಾರು, ತಿಹಾರ್ ಜೈಲ್ ರಿಟರ್ನ್ ಡಿ.ಕೆ. ಶಿವಕುಮಾರ್ ಬಗ್ಗೆ ಹೇಳ್ತಾ ಇದ್ದೀರಾ.. ನಾನು ತಿಹಾರ್ ಜೈಲ್ ರಿಟರ್ನ್ ಅಲ್ಲ ಎಂದು ವ್ಯಂಗ್ಯವಾಡಿದರು. ಅಲ್ಲದೆ, ತುಕ್ಡೆ ಗ್ಯಾಂಗ್‌ನಲ್ಲಿದ್ದವರು ಕಾಂಗ್ರೆಸ್ ಸೇರ್ಕೊಂಡಿದ್ದಾರೆ. ಅದು ಕನ್ಹಯ್ಯಕುಮಾರ್ ಇರಬಹುದು, ಹಾರ್ದಿಕ್ ಪಟೇಲ್ ಇರಬಹುದು. ಅವರೆಲ್ಲ ತುಕ್ಡೆ ಗ್ಯಾಂಗ್, ಇವ್ರ ಹಳೇ ಚಾಳಿ ಮತ್ತೆ ಮೇಲೆ ಬಂದಿದಿಯೋ ಗೊತ್ತಿಲ್ಲ ಎಂದು ಕಾಂಗ್ರೆಸ್ ವಿರುದ್ಧ ಸಿಟಿ ರವಿ ಕಿಡಿಕಾರಿದರು.
ಹಫ್ತಾ ಕೊಟ್ಟವರ ಬಂಧನ ಆಗುತ್ತೆ : ಈಗಾಗಲೇ ಕೆಲವು ಕಾಂಗ್ರೆಸ್ ಕಾರ್ಯಕರ್ತರನ್ನು ಬಂಧಿಸಿ ಜೈಲಿಗಟ್ಟಲಾಗಿದೆ. ವಿಚಾರ ನಡೆಯುತ್ತಿದೆ ಹಫ್ತಾ ಯಾರು ಕೊಟ್ಟಿದ್ದಾರೆ, ಯಾರು ಮಾಡಿಸಿದ್ದಾರೆ ಅನ್ನೋದೆಲ್ಲ ಗೊತ್ತಾಗುತ್ತದೆ. ಮಾಡಿಸಿದವರು ಜೈಲಿಗೆ ಹೋಗೋದು ದೂರವಿಲ್ಲ ಎಂದರು. ಕಾಂಗ್ರೆಸ್ ಸರ್ಕಾರ ಮತ್ತೆ ಬರುತ್ತೆ ಅನ್ನೋದು ತಿರುಕನ ಕನಸು ಎಂದು ಹೇಳಿದರು.
ಸೋನಿಯಾ ಗಾಂಧಿ ಮೆಚ್ಚೆಸಲು ಮಾತಾಡ್ತಾರೆ : ಸೋನಿಯಾ ಗಾಂಧಿಗೆ ಇಷ್ಟ ಆಗೋದೆಲ್ಲ ಮಾತನಾಡ್ತಾರೆ. ಇಲ್ಲಾ ಅಂದ್ರೆ ಕಾಂಗ್ರೆಸ್‌ನಿಂದ ಕಿತ್ತಾಕ್ತಾರೆ ಅಂತಾ ಕಾಂಪಿಟೇಷನ್ ನಡೆದಿದೆ. ಕೆಪಿಸಿಸಿ ಅಧ್ಯಕ್ಷರು ಮತ್ತು ವಿಪಕ್ಷ ನಾಯಕರು ಕಾಂಪಿಟೇಷನ್‌ನಲ್ಲಿ ಮಾತನಾಡ್ತಾರೆ. ಯಾಕೆ ಮಾತನಾಡ್ತಾರೆ ಅಂದ್ರೆ ಅವ್ರಿಗೆ ಸೋನಿಯಾ ಗಾಂಧಿ ಮೆಚ್ಚಿಸಬೇಕು. ಕಪಾಲಿ ಬೆಟ್ಟವನ್ನು ಪರಿವರ್ತಿಸಿದ್ದಕ್ಕೆ ಡಿ.ಕೆ.ಶಿವಕುಮಾರ್ ಕೆಪಿಸಿಸಿ ಪ್ರೆಸ್ಸಿಡೆಂಟ್ ಆಗಿದ್ದು. ಕಪಾಲಿ ಬೆಟ್ಟವನ್ನೇ ಪರಿವರ್ತನೆ ಮಾಡಿದ ಪಾರ್ಟಿಗಳಿಂದ ಇನ್ನೇನು ನಿರೀಕ್ಷೆ ಸಾಧ್ಯ ಎಂದರು.
ಕಾಂಗ್ರೆಸ್ ವೋಟ್ ಬ್ಯಾಂಕ್ ನೋಡುತ್ತೆ : ಮತಾಂತರ ಕಾಯ್ದೆಗೆ ಕಾಂಗ್ರೆಸ್ ವಿರೋಧ ಕುರಿತು ಪ್ರತಿಕ್ರಿಯೆ ನೀಡಿ, ಮತಾಂತರಕ್ಕೆ ಅವ್ರು ಪ್ರಚೋದನೆ ಕೊಡ್ತಾರಾ, ವಿಪಕ್ಷಗಳ ನಿಲುವೇನು. ಮತಾಂತರ ಆಗಬೇಕು ಅಂತಾ ಬಯಸ್ತಾರಾ, ಹಿಂದೂಗಳು ಮತಾಂತರ ಆದ್ರೆ ಅವ್ರ ವೋಟ್ ಬ್ಯಾಂಕ್ ಜಾಸ್ತಿಯಾಗುತ್ತೇ ಅನ್ನೋ ಷಡ್ಯಂತ್ರಾನಾ..? ಎಲ್ಲಿವರೆಗೂ ಮುಸ್ಲಿಂ ಅಲ್ಪಸಂಖ್ಯಾತರಾಗಿರುತ್ತಾರೋ ಅಲ್ಲಿವರೆಗೂ ಕಾಂಗ್ರೆಸ್ಗೆ ವೋಟ್.
ಬಹುಸಂಖ್ಯಾತರು ಆದ ದಿನ ಅವ್ರೆಲ್ಲರು ಎಂಐಎಂ, ಎಸ್ಡಿಪಿಐ, ಪಿಎಫ್ಐ, ಮುಸ್ಲಿಂ ಲಿಗ್ ವೋಟ್ ಬ್ಯಾಂಕ್ ಆಗ್ತಾರೆ. ಬಹು ಸಂಖ್ಯಾತರು ಅಗ್ತಾ ಇದ್ದಂತೆ ಯಾವ ಜ್ಯಾತಾತೀತೆನೂ ಇಲ್ಲ, ಯಾವ ಕಾಂಗ್ರೆಸ್ ಇಲ್ಲ. ಮತಾಂತರ ಕುಮ್ಮಕ್ಕು ನೀಡುವ ಹೇಳಿಕೆ ಇದೆ, ಇನ್ನೇನೂ ನಿರೀಕ್ಷೆ ಮಾಡೋಕೆ ಸಾಧ್ಯ ಎಂದು ಚಿಕ್ಕಮಗಳೂರಿನಲ್ಲಿ ಸಿ.ಟಿ.ರವಿ ಹೇಳಿದರು.