ಚಿಕ್ಕಮಗಳೂರು : ತಾಲೂಕಿನಲ್ಲಿ ಕೊರೊನಾ ಸೋಂಕು ಸಮುದಾಯಕ್ಕೆ ಹರಡಿದೆ. ಕೊಳ್ಳಿಕೊಪ್ಪ ಗ್ರಾಮದಲ್ಲಿ 75 ಮಂದಿಗೆ ಸೋಂಕು ತಗುಲಿದೆ. ಈ ಹಿನ್ನೆಲೆಯಲ್ಲಿ ಶಾಸಕ ಸಿ ಟಿ ರವಿ ಹಾಗೂ ಅಧಿಕಾರಿಗಳು ಗ್ರಾಮಕ್ಕೆ ಭೇಟಿ ನೀಡಿದರು.
ಓದಿ: ಚರ್ಚೆಗೆ ಗ್ರಾಸವಾದ ಜಿಲ್ಲಾಧಿಕಾರಿಯೊಂದಿಗಿನ ಸಿ.ಟಿ ರವಿ ಸಭೆ
ಚಿಕ್ಕಮಗಳೂರು ತಾಲೂಕಿನ ಕೊಳ್ಳಿಕೊಪ್ಪ ಗ್ರಾಮದ 47 ಕುಟುಂಬದ 75 ಮಂದಿಗೆ ಕೊರೊನಾ ಪಾಸಿಟಿವ್ ಬಂದಿದೆ.
ಪ್ರತಿ ಕುಟುಂಬಕ್ಕೆ ರೇಷನ್ ಕಿಟ್ ಹಾಗೂ ಔಷಧಿಯನ್ನು ಸಿ ಟಿ ರವಿ ಹಾಗೂ ಅಧಿಕಾರಿಗಳು ವಿತರಿಸಿದ್ದು, ಎಲ್ಲರೂ ಧೈರ್ಯವಾಗಿ ಇರುವಂತೆ ಮನವಿ ಮಾಡಿದ್ದಾರೆ.