ಚಿಕ್ಕಮಗಳೂರು : ಕಾಂಗ್ರೆಸ್ಸಿಗರು ಇತಿಹಾಸ ಮರೆತಿದ್ದಾರೆ. ಈಗಿನ ಕಾಂಗ್ರೆಸ್ಗೂ ಹಿಂದಿನ ಕಾಂಗ್ರೆಸ್ಗೂ ಯಾವ ಸಂಬಂಧವಿಲ್ಲ ಎಂದು ಬಿಜೆಪಿಯ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ ಟಿ ರವಿ ಹೇಳಿದ್ದಾರೆ.
ಗೋಹತ್ಯೆ ನಿಷೇಧ ಕಾಯ್ದೆ ವಿಚಾರ ಕುರಿತು ನಗರದಲ್ಲಿ ಸಿ ಟಿ ರವಿ ಮಾತನಾಡಿದ್ದು, ಈಗಿನ ಕಾಂಗ್ರೆಸ್ಗೂ ಹಿಂದಿನ ಕಾಂಗ್ರೆಸ್ಗೂ ಸಂಬಂಧವಿಲ್ಲ. ಜೋಡೆತ್ತು, ಹಸು-ಕರು ಕಾಂಗ್ರೆಸ್ ಪಕ್ಷದ ಗುರುತಾಗಿತ್ತು. ಸಿದ್ದರಾಮಯ್ಯ ಅವರ ಕುಲದೈವ ಬೀರೇಶ್ವರ ಸ್ವಾಮಿ ಗೋಹತ್ಯೆಯನ್ನು ಸಮರ್ಥಿಸುತ್ತಾರಾ.. ಬೀರೇಶ್ವರನ ವಾಹನ ಏನೆಂದು ಸಿದ್ದರಾಮಯ್ಯ ಅವರು ಯೋಚಿಸಲಿ. ಮೂಲ ಸಂಸ್ಕೃತಿ ಯಾವುದು, ವೋಟಿಗಾಗಿ ಇರೋ ವಿಚಾರ ಯಾವುದೆಂದು ತಿಳಿಯುತ್ತೆ ಎಂದರು.
ಓದಿ: 4 ಬಾರಿ ಯುದ್ಧ ಸೋತ್ರೂ ಪಾಕ್ ಭಯೋತ್ಪಾದನೆ ಮೂಲಕ ಪರೋಕ್ಷ ಸಮರ ನಡೆಸ್ತಿದೆ : ಸಚಿವ ರಾಜನಾಥ್ ಸಿಂಗ್
ಸಂವಿಧಾನದ ಮೇಲೆ ಶ್ರದ್ಧೆ ಇರೋರು ಕಾಯ್ದೆ ವಿರೋಧಿಸಲ್ಲ. ಅಂಬೇಡ್ಕರ್ ಕೂಡ ಸಂವಿಧಾನದಲ್ಲಿ ಗೋಹತ್ಯೆ ನಿಷೇಧ ಪ್ರಸ್ತಾಪಿಸಿದ್ದಾರೆ. 1964ರಲ್ಲಿ ಗೋಹತ್ಯೆ ನಿಷೇಧ ಕಾಯ್ದೆ ಬಂದಿದೆ. ಅದನ್ನ ಮತ್ತಷ್ಟು ಬಲಗೊಳಿಸೋ ಕೆಲಸ ಈಗ ಆಗಿದೆ. ಆಗ ಇದ್ದದ್ದು ಬಿಜೆಪಿ, ಜನ ಸಂಘದ ಪಕ್ಷವಲ್ಲ ಎಂದು ಸಿ ಟಿ ರವಿ ಹೇಳಿದ್ದಾರೆ.