ETV Bharat / state

ಚಿಕ್ಕಮಗಳೂರು ಜಿಲ್ಲೆಗೆ 267 ಕೋಟಿ ರೂ. ಪರಿಹಾರ ಧನ : ಸಚಿವ ಸಿ ಟಿ ರವಿ

author img

By

Published : Jul 29, 2020, 5:11 PM IST

ಜಿಲ್ಲೆಯಲ್ಲಿ ಒಟ್ಟು 952 ಕ್ಷೌರಿಕರಿಗೆ, 481 ಅಗಸರಿಗೆ, 3,896 ಆಟೋ, ಟ್ಯಾಕ್ಸಿ ಚಾಲಕರಿಗೆ ತಲಾ ₹5 ಸಾವಿರದಂತೆ ಸಹಾಯ ಧನ ನೀಡಲಾಗಿದೆ. ಹಾಗೂ 38,220 ಕಟ್ಟಡ ಕಾರ್ಮಿಕರಿಗೆ 19 ಕೋಟಿ 11 ಲಕ್ಷ ರೂ. ಮತ್ತು ಪಿಎಂ ಕಿಸಾನ್ ಯೋಜನೆ ಅಡಿ 1,11,650 ಫಲಾನುಭವಿಗಳಿಗೆ ಏಪ್ರಿಲ್ ತಿಂಗಳಿನಲ್ಲಿ ಕೇಂದ್ರದಿಂದ 2 ಸಾವಿರ ಮತ್ತು ರಾಜ್ಯ ಸರ್ಕಾರದಿಂದ 2 ಸಾವಿರ ರೂ. ಸಹಾಯಧನ ಬಿಡುಗಡೆಗೊಳಿಸಲಾಗಿದೆ..

CT Ravi
CT Ravi

ಚಿಕ್ಕಮಗಳೂರು : ಜಿಲ್ಲೆಯಲ್ಲಿ ಅತಿವೃಷ್ಟಿಯಿಂದ ಹಾನಿಗೊಳಗಾದ ಮನೆಗಳ ನಿರ್ಮಾಣ, ಬೆಳೆ ನಷ್ಟ, ರಸ್ತೆ ಕಾಮಗಾರಿ ಒಳಗೊಂಡಂತೆ ವಿವಿಧ ಸಂಕಷ್ಟಗಳಿಗೆ ಪರಿಹಾರ ಧನವಾಗಿ ರಾಜ್ಯ ಸರ್ಕಾರ ಜಿಲ್ಲೆಗೆ 267 ಕೋಟಿ ರೂ. ಬಿಡುಗೊಳಿಸಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಸಿ ಟಿ ರವಿ ಹೇಳಿದ್ದಾರೆ.

ರಾಜ್ಯದಲ್ಲಿ ಅತಿವೃಷ್ಟಿ ಸಂದರ್ಭದಲ್ಲಿ 20ಕ್ಕೂ ಹೆಚ್ಚು ಜಿಲ್ಲೆಗಳು, 114 ತಾಲೂಕುಗಳು ಸಂಕಷ್ಟಕ್ಕೆ ಸಿಲುಕಿದ್ದಾಗ, ರಾಜ್ಯಕ್ಕೆ 6,108 ಕೋಟಿ ಹಣವನ್ನು ಪರಿಹಾರವಾಗಿ ಸರ್ಕಾರ ಬಿಡುಗಡೆಗೊಳಿಸಿದೆ. ಅದರಲ್ಲಿ ಜಿಲ್ಲೆಯ ಮನೆಗಳ ನಿರ್ಮಾಣ, ಬೆಳೆನಷ್ಟ, ರಸ್ತೆ ಕಾಮಗಾರಿ ಒಳಗೊಂಡಂತೆ ವಿವಿಧ ಪರಿಹಾರವಾಗಿ 267 ಕೋಟಿ ರೂ. ಬಿಡುಗಡೆ ಮಾಡಲಾಗಿದೆ ಎಂದರು. ಈ ವರ್ಷ ಹಲವು ಸಂಕಷ್ಟ ಹಾಗೂ ಸವಾಲುಗಳ ವರ್ಷವಾಗಿದ್ದು, ಇದರ ನಡುವೆಯೂ ಸರ್ಕಾರ ಅಭಿವೃದ್ಧಿಗೆ ಮುಂದಾಗಿದೆ. ಲಾಕ್‌ಡೌನ್ ಸಂದರ್ಭದಲ್ಲಿ ರಾಜ್ಯ ಸರ್ಕಾರವು ಪ್ರತಿ ವರ್ಗಕ್ಕೂ ಸಹಾಯಧನ ನೀಡುವ ಮೂಲಕ ಜನರ ಸಮಸ್ಯೆಗಳಿಗೆ ಸ್ಪಂದಿಸಿದೆ.

ಜಿಲ್ಲೆಯಲ್ಲಿ ಒಟ್ಟು 952 ಕ್ಷೌರಿಕರಿಗೆ, 481 ಅಗಸರಿಗೆ, 3,896 ಆಟೋ, ಟ್ಯಾಕ್ಸಿ ಚಾಲಕರಿಗೆ ತಲಾ ₹5 ಸಾವಿರದಂತೆ ಸಹಾಯ ಧನ ನೀಡಲಾಗಿದೆ. ಹಾಗೂ 38,220 ಕಟ್ಟಡ ಕಾರ್ಮಿಕರಿಗೆ 19 ಕೋಟಿ 11 ಲಕ್ಷ ರೂ. ಮತ್ತು ಪಿಎಂ ಕಿಸಾನ್ ಯೋಜನೆ ಅಡಿ 1,11,650 ಫಲಾನುಭವಿಗಳಿಗೆ ಏಪ್ರಿಲ್ ತಿಂಗಳಿನಲ್ಲಿ ಕೇಂದ್ರದಿಂದ 2 ಸಾವಿರ ಮತ್ತು ರಾಜ್ಯ ಸರ್ಕಾರದಿಂದ 2 ಸಾವಿರ ರೂ. ಸಹಾಯಧನ ಬಿಡುಗಡೆಗೊಳಿಸಲಾಗಿದೆ. ಎಂಎಸ್‌ಎಂಇ ಯೋಜನೆ ಅಡಿ ಸಣ್ಣ ಮತ್ತು ಮಧ್ಯಮ ಕೈಗಾರಿಕೆ ಘಟಕಗಳ ಪುನಶ್ಚೇತನಕ್ಕಾಗಿ ರೂ. 56 ಕೋಟಿ ಬಿಡುಗಡೆಯಾಗಿದ್ದು, 3,834 ಫಲಾನುಭವಿಗಳು ಇದರ ಸದುಪಯೋಗ ಪಡೆದುಕೊಂಡಿದ್ದಾರೆ ಎಂದು ಸಚಿವ ಸಿ ಟಿ ರವಿ ತಿಳಿಸಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.