ETV Bharat / state

ಚಿಕ್ಕಮಗಳೂರಲ್ಲಿ ಇಂದು 3 ಕೊರೊನಾ ಕೇಸ್​​ ಪತ್ತೆ: ಸೋಂಕಿತರ ಸಂಖ್ಯೆ 15ಕ್ಕೆ ಏರಿಕೆ

ಚಿಕ್ಕಮಗಳೂರು ಜಿಲ್ಲೆಯಲ್ಲಿ ಇಂದು ಹೊಸದಾಗಿ 3 ಕೊರೊನಾ ಪಾಸಿಟಿವ್ ಪ್ರಕರಣ ದಾಖಲಾಗಿದ್ದು, ಸೋಂಕಿತರ ಸಂಖ್ಯೆ 15ಕ್ಕೆ ಏರಿಕೆಯಾಗಿದೆ.

Chikmagalur: 3 corona cases registered today
ಚಿಕ್ಕಮಗಳೂರು: ಇಂದು 3 ಕೊರೊನಾ ಪ್ರಕರಣ ದಾಖಲು
author img

By

Published : May 28, 2020, 3:36 PM IST

ಚಿಕ್ಕಮಗಳೂರು: ಜಿಲ್ಲೆಯಲ್ಲಿ ಇಂದು ಹೊಸದಾಗಿ 3 ಕೊರೊನಾ ಪಾಸಿಟಿವ್ ಪ್ರಕರಣ ದಾಖಲಾಗಿದ್ದು, ಸೋಂಕಿತರ ಸಂಖ್ಯೆ 15ಕ್ಕೆ ಏರಿಕೆಯಾಗಿದೆ.

Chikmagalur: 3 corona cases registered today
ಚಿಕ್ಕಮಗಳೂರು: ಇಂದು 3 ಕೊರೊನಾ ಪ್ರಕರಣ ದಾಖಲು

ಕಳೆದ ಆರು ದಿನಗಳ ಹಿಂದೆ ಮುಂಬೈನಿಂದ ಎನ್ಆರ್ ಪುರ ತಾಲೂಕಿಗೆ ಟೆಂಪೋ ಟ್ರಾವೆಲರ್ ಮೂಲಕ ಆಗಮಿಸಿದ 9 ಜನರಲ್ಲಿ 8 ಮಂದಿಗೆ ಕೊರೊನಾ ಸೋಂಕು ಇರುವುದು ಪತ್ತೆಯಾಗಿತ್ತು. ನಂತರ ಕುಟುಂಬದ ಎಲ್ಲಾ ಸದಸ್ಯರ ಗಂಟಲು ದ್ರವ ಹಾಗೂ ರಕ್ತದ ಮಾದರಿಯನ್ನು ಪರೀಕ್ಷೆಗಾಗಿ ಹಾಸನಕ್ಕೆ ಕಳುಹಿಸಿಕೊಡಲಾಗಿತ್ತು.

ನಿನ್ನೆ ಮತ್ತೆ ಕೊಪ್ಪ ಹಾಗೂ ಎನ್ಆರ್​ ಪುರ ತಾಲೂಕಿನಲ್ಲಿ 3 ಪ್ರಕರಣಗಳು ದಾಖಲಾಗಿದ್ದವು. ಇಂದು ಶೃಂಗೇರಿಯಲ್ಲಿ 2, ಮೂಡಿಗೆರೆ ತಾಲೂಕಿನಲ್ಲಿ 1 ಪ್ರಕರಣ ದಾಖಲಾಗಿದೆ. ಈ ಮೂಲಕ ಚಿಕ್ಕಮಗಳೂರು ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ ಒಟ್ಟು 15ಕ್ಕೆ ಏರಿಕೆಯಾಗಿದೆ.

ಇಂದು 37 ವರ್ಷದ ಪುರುಷ, 23 ವರ್ಷದ ಯುವಕ ಮತ್ತು 36 ವರ್ಷದ ಪುರುಷ ಸೇರಿದಂತೆ ಮೂವರಲ್ಲಿ ಕೊರೊನಾ ಸೋಂಕು ಪತ್ತೆಯಾಗಿದೆ. ಆ ಮೂವರಲ್ಲಿ ಒಬ್ಬರು ದೆಹಲಿಯಿಂದ ಬಂದವರಾಗಿದ್ದು, ಇನ್ನಿಬ್ಬರು ಮುಂಬೈನಿಂದ ಬಂದಿದ್ದಾರೆ. ಈಗಾಗಲೇ ಚಿಕ್ಕಮಗಳೂರು ಜಿಲ್ಲಾಡಳಿತ ಹಾಗೂ ಆರೋಗ್ಯ ಇಲಾಖೆ ವತಿಯಿಂದ ಸೋಂಕಿತರ ಪ್ರಾಥಮಿಕ ಹಾಗೂ ದ್ವಿತೀಯ ಸಂಪರ್ಕಿತರನ್ನು ಶೋಧಿಸುವ ಕಾರ್ಯ ನಡೆದಿದ್ದು, ಈ 3 ಜನ ಸೋಂಕಿತರನ್ನು ಚಿಕ್ಕಮಗಳೂರು ನಗರದಲ್ಲಿರುವ ಕೋವಿಡ್ ಆಸ್ಪತ್ರೆಯಲ್ಲಿ ದಾಖಲು ಮಾಡಿ ಚಿಕಿತ್ಸೆ ನೀಡಲಾಗುತ್ತಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.