ETV Bharat / state

ನಮ್ಮ ಮೇಲೆ ಪ್ರೀತಿ ಹೆಚ್ಚಾಗಿ ಯತ್ನಾಳ್ ಹೇಳಿಕೆ ನೀಡುತ್ತಿದ್ದಾರೆ: ಬಿ.ವೈ ವಿಜಯೇಂದ್ರ - ಚಿಕ್ಕಮಗಳೂರಿಗೆ ಭೇಟಿ ನೀಡಿದ ಬಿವೈ ವಿಜಯೇಂದ್ರ

ತನ್ನ ವಿರುದ್ಧ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹೇಳಿಕೆ ನೀಡುತ್ತಿರುವುದರ ಬಗ್ಗೆ ಪ್ರತಿಕ್ರಿಯಿಸಿದ ಬಿ.ವೈ ವಿಜಯೇಂದ್ರ, ಅವರು ಪ್ರೀತಿ ಹೆಚ್ಚಾಗಿ ಆ ರೀತಿ ಹೇಳುತ್ತಿದ್ದಾರೆ ಎಂದರು.

BY Vijayendra Reaction about MLA Yatnal Statement
ಬಿಜೆಪಿ ರಾಜ್ಯ ಉಪಾಧ್ಯಕ್ಷ ಬಿ.ವೈ ವಿಜಯೇಂದ್ರ
author img

By

Published : Mar 15, 2021, 5:32 PM IST

ಚಿಕ್ಕಮಗಳೂರು : ಯತ್ನಾಳ್ ಅವರು ಹಿರಿಯರು, ಅವತ್ತೇ ಹೇಳಿದ್ದೆ, ನನ್ನ ಬಗ್ಗೆ ಅವರಿಗೆ ಪ್ರೀತಿ ಇದೆ. ಪ್ರೀತಿಯಿಂದ ಮಾತನಾಡ್ತಾರೆ ಬೇಸರವಿಲ್ಲ ಎಂದು ಬಿಜೆಪಿ ರಾಜ್ಯ ಉಪಾಧ್ಯಕ್ಷ ಬಿ.ವೈ ವಿಜಯೇಂದ್ರ ಹೇಳಿದರು.

ಸಿಎಂ ಮತ್ತು ವಿಜಯೇಂದ್ರ ಬಗ್ಗೆ ಪದೇ ಪದೆ ಶಾಸಕ ಯತ್ನಾಳ್ ಹೇಳಿಕೆ ನೀಡುತ್ತಿರುವುದರ ಬಗ್ಗೆ ಮಾತನಾಡುದ ಅವರು, ನಾನು ಕೂಡ ಬಿಜೆಪಿಯ ನಿಷ್ಠಾವಂತ ಕಾರ್ಯಕರ್ತ, ನರೇಂದ್ರ ಮೋದಿಯ ಬೆಂಬಲಿಗನೂ ಹೌದು. ಇದು ಹೇಳಲು ನನಗೆ ಹೆಮ್ಮೆಯಿದೆ, ಯತ್ನಾಳ್ ಅವರು ಹಿರಿಯರು. ಅವತ್ತೇ ಹೇಳಿದ್ದೆ ನನ್ನ ಬಗ್ಗೆ ಅವರಿಗೆ ಪ್ರೀತಿ ಇದೆ. ಪ್ರೀತಿಯಿಂದ ಮಾತನಾಡ್ತಾರೆ ಬೇಸರವಿಲ್ಲ ಎಂದರು.

ಬಿಜೆಪಿ ರಾಜ್ಯ ಉಪಾಧ್ಯಕ್ಷ ಬಿ.ವೈ ವಿಜಯೇಂದ್ರ

ಇದನ್ನೂ ಓದಿ : ‘ತರೀಕೆರೆ ಶಾಸಕರಿಂದ ವಂಚನೆ ನಡೀತಿದೆ, ನ್ಯಾಯ ಕೊಡಿಸಿ’- ಸಿಎಂ ಪುತ್ರನೆದುರು ಮಹಿಳೆಯರ ಕಣ್ಣೀರು

ರಮೇಶ್ ಜಾರಕಿಹೊಳಿ ಸಿಡಿ ವಿವಾದದ ಬಗ್ಗೆ ಮಾತನಾಡಿ, ಎಸ್​ಐಟಿ ಪ್ರಕರಣದ ತನಿಖೆ ನಡೆಸುತ್ತಿದೆ. ಸತ್ಯಾಸತ್ಯತೆ ಏನು ಅನ್ನುವುದು ಹೊರ ಬರಬೇಕಾಗಿದೆ. ಇದರ ಹಿಂದೆ ಯಾರಿದ್ದಾರೆ, ಯಾರ ಕೈವಾಡವಿದೆ. ಅಗ್ರಗಣ್ಯ ನಾಯಕರು ಸೇರಿಕೊಂಡಿದ್ದಾರಾ ಎಂಬುವುದು ತನಿಖೆಯ ನಂತರ ಗೊತ್ತಾಗಲಿದೆ. ಅಲ್ಲಿಯವರೆಗೆ ಕಾಯಬೇಕಾಗುತ್ತದೆ‌‌ ಎಂದು ಹೇಳಿದರು.

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.