ETV Bharat / state

ಶೌಚಗೃಹದಲ್ಲಿ ಮಹಿಳಾ ಕಾನ್ಸ್​ಟೇಬಲ್ ಬಗ್ಗೆ ಅಸಭ್ಯ ಬರಹ: ಆರೋಪಿ ಪೊಲೀಸರ ವಶಕ್ಕೆ - Chikkangal village of Kadur Taluk

ಕಡೂರು ನಗರದ ಬಸ್‌ ನಿಲ್ದಾಣದ ಶೌಚಗೃಹದಲ್ಲಿ ಮಹಿಳಾ ಕಾನ್ಸ್​ಟೇಬಲ್ ಪೋನ್‌ ನಂಬರ್ ಬರೆದು ಅದರ ಮುಂದೆ ಲೈಂಗಿಕ ಕಾರ್ಯಕರ್ತೆ ಎಂದು ಬರೆದಿದ್ದ ಆರೋಪಿಯನ್ನು ಬೆಂಗಳೂರಿನ ಯಲಹಂಕ ಪೊಲೀಸರು ವಶಕ್ಕೆ ಪಡೆದಿದ್ದಾರೆ.

Abusive words about women constable in toilet: accused in police custody
ಶೌಚಗೃಹದಲ್ಲಿ ಮಹಿಳಾ ಕಾನ್ಸ್​ಟೇಬಲ್ ಬಗ್ಗೆ ಅಸಭ್ಯ ಬರಹ: ಆರೋಪಿ ಪೊಲೀಸರ ವಶಕ್ಕೆ
author img

By

Published : Dec 26, 2020, 5:41 PM IST

ಚಿಕ್ಕಮಗಳೂರು: ಜಿಲ್ಲೆಯ ಕಡೂರು ನಗರದ ಮಧ್ಯೆ ಇರುವ ಸಾರಿಗೆ ಬಸ್‌ ನಿಲ್ದಾಣದ ಶೌಚಗೃಹದಲ್ಲಿ ಮಹಿಳಾ ಕಾನ್ಸ್​ಟೇಬಲ್ ಪೋನ್‌ ನಂಬರ್ ಬರೆದು ಅದರ ಮುಂದೆ ಲೈಂಗಿಕ ಕಾರ್ಯಕರ್ತೆ ಎಂದು ಬರೆದಿದ್ದ ಆರೋಪಿಯನ್ನು ಬೆಂಗಳೂರಿನ ಯಲಹಂಕ ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಶೌಚಗೃಹದಲ್ಲಿ ಮಹಿಳಾ ಕಾನ್ಸ್​ಟೇಬಲ್ ಬಗ್ಗೆ ಅಸಭ್ಯ ಬರಹ: ಆರೋಪಿ ಪೊಲೀಸರ ವಶಕ್ಕೆ

ಕಡೂರು ತಾಲ್ಲೂಕಿನ ಚಿಕ್ಕಂಗಳ ಗ್ರಾಮದ ಸಿ.ಎಂ. ಸತೀಶ್ ಬಂಧಿತ ಆರೋಪಿ. ಈತ ತನ್ನ ಸಹಪಾಠಿಗಳಿರುವ ವಾಟ್ಸಪ್​ ಗ್ರೂಪಿಗೆ ಬೆಂಗಳೂರಿನ ಯಲಹಂಕದ ನ್ಯೂಟನ್ ಪೊಲೀಸ್ ಠಾಣೆಯ ಎಸಿಪಿ ಸಹಾಯಕ ಕಚೇರಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಮಹಿಳಾ ಕಾನ್ಸ್​ಟೇಬಲ್ ನಂಬರ್​ ಅನ್ನು ಸೇರಿಸಿದ್ದಾರೆ. ನಂತರ ಅದರಲ್ಲಿ ಆಕೆಯನ್ನು ಉದ್ದೇಶಿಸಿ ಅನಗತ್ಯ ಸಂದೇಶಗಳನ್ನು ಹಾಕುತ್ತಿದ್ದ. ಜೊತೆಗೆ ಕರೆ ಮಾಡಿ ತೊಂದರೆ ಕೊಡುತ್ತಿದ್ದ ಎನ್ನಲಾಗಿದೆ. ಅಷ್ಟೇ ಅಲ್ಲದೆ ಇತರರಿಗೂ ನಂಬರ್​ ನೀಡಿ ತೊಂದರೆಯುಂಟು ಮಾಡಿದ್ದಾನೆ ಎನ್ನಲಾಗಿದೆ.

ಇದೇ ವಿಚಾರವಾಗಿ ಇವರಿಬ್ಬರ ನಡುವೆ ಮಾತಿನ ಚಕಮಕಿ ನಡೆದಿದೆ. ಆದರೆ ಇಷ್ಟಕ್ಕೆ ಸುಮ್ಮನಾಗದ ಸತೀಶ್​ ಮಹಿಳಾ ಕಾನ್ಸ್​ಟೇಬಲ್ ಪೋನ್‌ ನಂಬರ್ ಅನ್ನು ಕಡೂರು ನಗರದ ಮಧ್ಯೆ ಇರುವ ಸಾರಿಗೆ ಬಸ್‌ ನಿಲ್ದಾಣದ ಶೌಚ ಗೃಹದಲ್ಲಿ ಬರೆದು ವಿಕೃತಿ ಮೆರೆದಿದ್ದಾನೆ.

ದಿನೇ ದಿನೇ ಸಾಕಷ್ಟು ಅನಾಮಧೇಯ ಪೋನ್ ಕೆರೆಗಳು ಮಹಿಳಾ ಕಾನ್ಸ್​ಟೇಬಲ್​ಗೆ ಬರಲು ಆರಂಭವಾದಾಗ ಆತಂಕಗೊಂಡ ಮಹಿಳಾ ಕಾನ್ಸ್​ಟೇಬಲ್ ತನ್ನ ಪತಿಯೊಡನೆ ಚರ್ಚಿಸಿ ಬೆಂಗಳೂರಿನ ಯಲಹಂಕ ಠಾಣೆಗೆ ದೂರು ನೀಡಿದ್ದಾರೆ. ಸದ್ಯ ಯಲಹಂಕ ಪೊಲೀಸರು ಈ ಕೃತ್ಯ ಎಸಗಿದ ಆರೋಪಿಯನ್ನು ಶಿವಮೊಗ್ಗದಲ್ಲಿ ವಶಕ್ಕೆ ಪಡೆದು ತನಿಖೆ ನಡೆಸುತ್ತಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.