ಚಿಕ್ಕಮಗಳೂರು: ಪ್ರವಾಸಕ್ಕೆಂದು ಬಂದ ಬೆಂಗಳೂರು ಮೂಲದ ವ್ಯಕ್ತಿಯೋರ್ವ ನೀರು ಪಾಲಾಗಿರುವ ಘಟನೆ ಜಿಲ್ಲೆಯ ಕಳಸ ಪಟ್ಟಣದ ಭದ್ರಾ ನದಿ ತೀರದ ವಸಿಷ್ಠ ತೀರ್ಥದಲ್ಲಿ ನಡೆದಿದೆ.
ರುದ್ರೇಶ್ ಶ್ರೀಧರ್ (33) ನೀರು ಪಾಲಾಗಿರುವ ವ್ಯಕ್ತಿ. ರುದ್ರೇಶ್ ತನ್ನ ಸ್ನೇಹಿತರೊಂದಿಗೆ ಚಿಕ್ಕಮಗಳೂರಿಗೆ ಪ್ರವಾಸಕ್ಕೆಂದು ಆಗಮಿಸಿದ್ದರು. ಹೋಂ ಸ್ಟೇವೊಂದರಲ್ಲಿ ತಂಗಿದ್ದ ಇವರು, ಬೆಳಗ್ಗೆ ಕಳಸ ಪಟ್ಟಣದ ಭದ್ರಾ ನದಿ ತೀರದ ವಸಿಷ್ಠ ತೀರ್ಥಕ್ಕೆ ತೆರಳಿದ್ದರು. ಈ ವೇಳೆ ರುದ್ರೇಶ್ ಕಾಲುಜಾರಿ ನದಿ ಬಿದ್ದಿದ್ದಾನೆ ಎನ್ನಲಾಗ್ತಿದೆ.
ಕೂಡಲೇ ಸ್ಥಳಕ್ಕಾಗಮಿಸಿದ ಕಳಸ ಪೊಲೀಸರು, ಮೃತದೇಹಕ್ಕಾಗಿ ಹುಡುಕಾಟ ನಡೆಸುತ್ತಿದ್ದಾರೆ. ಈ ಕುರಿತು ಕಳಸ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ: ಬಾಲಕಿ ಮೇಲೆ ಪೂಜಾರಿಯಿಂದ ಅತ್ಯಾಚಾರ, ಕೊಲೆ ಆರೋಪ.. ರಾಷ್ಟ್ರ ರಾಜಧಾನಿಯಲ್ಲಿ ದುಷ್ಕೃತ್ಯ