ಚಿಕ್ಕಮಗಳೂರು: ಕೊರೊನಾ ಸೋಂಕಿನ ಭಯದಿಂದ ಮೂಡಿಗೆರೆ ತಾಲೂಕಿನ 9ಜನರು ಕಾಡು ಸೇರಿರುವ ಘಟನೆ ಬೆಳಕಿಗೆ ಬಂದಿದೆ.
ತಾಲೂಕಿನ ಮರ್ಕಲ್ ಗ್ರಾಮಕ್ಕೆ ಮೈಸೂರು, ಬೆಂಗಳೂರಿಂದ ಕೆಲವರು ಆಗಮಿಸುತ್ತಿದ್ದು, ಕೊರೊನಾ ಹರಡುವ ಭೀತಿಯಿಂದ ಈ ರೀತಿ ಮಾಡಿದ್ದಾರೆ. ಗ್ರಾಮಕ್ಕೆ ಬೇಲಿ ಹಾಕಿ, ಹೊರಗಿನವರ ತಡೆಯಲು ಮುಂದಾಗಿದ್ದರು. ಯುವಕರ ಕಾರ್ಯಕ್ಕೆ ಸ್ಥಳೀಯರು ಅಡ್ಡಿ ಪಡಿಸಿದ್ದಾರೆ.
ಲಾಕ್ಡೌನ್ ಮುಗಿಯುವವರೆಗೂ ಅವರಿಗೆ ಸಾಕಾಗುವಷ್ಟು ಆಹಾರ ಪದಾರ್ಥವನ್ನು ಯುವಕರು ತೆಗೆದುಕೊಂಡು ಹೋಗಿದ್ದಾರೆ ಎನ್ನಲಾಗಿದೆ. ಆದರೆ, ಅರಣ್ಯ ಪ್ರದೇಶದಲ್ಲಿ ಆನೆ ಕಾಟ ಹಾಗೂ ಹುಲಿ ಕಾಟ ಇರುವ ಹಿನ್ನೆಲೆ ಮತ್ತೆ ಗ್ರಾಮಕ್ಕೆ ಬರುವ ಇಂಗಿತವನ್ನು ಯುವಕರು ವ್ಯಕ್ತಪಡಿಸುತ್ತಿದ್ದು, ಯಾವಾಗ ಗ್ರಾಮಕ್ಕೆ ಬರುತ್ತಾರೆ ಎಂಬುದನ್ನು ಕಾದು ನೋಡಬೇಕಿದೆ.