ಚಿಕ್ಕಬಳ್ಳಾಪುರ: ವಿಶ್ವಪರಿಸರ ದಿನದ ಹಿನ್ನೆಲೆ ತಾಲೂಕಿನ ಚಂದನೂರು ಗ್ರಾಮದ ಪ್ರೌಡ ಶಾಲೆಯಲ್ಲಿ ಗಿಡಗಳನ್ನು ನೆಡುವ ಕಾರ್ಯಕ್ರಮವನ್ನ ಉಸಿರಿಗಾಗಿ ಹಸಿರು ತಂಡ ಹಾಗೂ ರಿಮ್ ಸಂಸ್ಥೆ ಹಮ್ಮಿಕೊಂಡಿತ್ತು.
ಪರಿಸರ ದಿನಾಚರಣೆಗೆ ಗಿಡಗಳನ್ನು ನೆಡುವ ಮೂಲಕ ವಿಶ್ವಪರಿಸರ ದಿನವನ್ನ ಆಚರಣೆ ಮಾಡಲಾಯಿತು. ಆದರೆ, ಉಸಿರಿಗಾಗಿ ಹಸಿರು ತಂಡ ಪರಿಸರ ದಿನ ಮುಗಿದ ನಂತರವು ಗಿಡಗಳನ್ನು ನೆಡುವ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದು ಸಾರ್ವಜನಿಕರಿಂದ ಪ್ರಶಂಸೆ ಪಡೆದುಕೊಂಡಿದೆ.
ಇನ್ನು ವೈವಿದ್ಯತೆ ಕಾಪಾಡುವ ನಿಟ್ಟಿನಲ್ಲಿ ವಿಶ್ವದ್ಯಂತ ಪರಿಸರ ದಿನವನ್ನ ಆಚರಣೆ ಮಾಡಲಾಗಿತ್ತು. ಆದರೆ, ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಕೇವಲ ಶೇ15 ರಷ್ಟು ಮಾತ್ರ ಅರಣ್ಯ ಪ್ರದೇಶವಿದೆ. ಆದರೆ, ಬಹುತೇಕ ಅರಣ್ಯ ಪ್ರದೇಶಗಳು ನೀಲಗಿರಿ ಮರಗಳಿಂದ ಕೂಡಿವೆ. ಇವು ಸಹ ಅರಣ್ಯ ಪ್ರದೇಶಕ್ಕೆ ಸೇರಿರುವುದು ಬೇಸರದ ಸಂಗತಿ. ಸದ್ಯ ಇದರ ನಿಟ್ಟಿನಲ್ಲಿ ಉಸಿರುಗಾಗಿ ಹಸಿರು ತಂಡ ಮರಗಿಡಗಳನ್ನು ಪೋಷಣೆ ಮಾಡುತ್ತಿದೆ.
ಜಿಲ್ಲೆಯಲ್ಲಿ ನೀಲಗಿರಿ ಮರಗಳಿಂದ ಜೀವ ವೈವಿದ್ಯತೆ ಏರುಪೇರು ಆಗುತ್ತಿದೆ. ಅಂತರ್ಜಲ ಮಟ್ಟ ಕಡಿಮೆಯಾಗುತ್ತಿದೆ. ಇದರ ನಿಟ್ಟಿನಲ್ಲಿ ಉಸಿರಿಗಾಗಿ ಹಸಿರು ತಂಡ ಇದುವರೆಗೂ 15 ಸಾವಿರಕ್ಕೂ ಅಧಿಕ ಬೇರೆ ಬೇರೆ ಜಾತಿಯ ಗಿಡಗಳನ್ನು ನೆಟ್ಟು ಪೋಷಿಸುತ್ತಿದೆ ಎಂದು ಸಂಸ್ಥೆಯ ಸ್ಥಾಪಕ ಗಂಗಾಧರ್ ತಿಳಿಸಿದರು. ಇನ್ನೂ ಇದೇ ವೇಳೆ, ತೀರ ಹಿಂದಳಿದ ಹಾಗೂ ಬಡ ಕುಟುಂಬಗಳಿಗೆ ದಿನಸಿ ಪದಾರ್ಥಗಳ ಕಿಟ್ ವಿತರಣೆ ಮಾಡಿದರು.