ಬಾಗೇಪಲ್ಲಿ: ಬಾಗೇಪಲ್ಲಿ ಪಟ್ಟಣದಲ್ಲಿ ಕಳವು ಮಾಡಲಾದ ಸುಮಾರು 30 ದ್ವಿಚಕ್ರ ವಾಹನಗಳನ್ನು ಪೊಲೀಸರು ವಶಕ್ಕೆ ಪಡೆದು, ಆರೋಪಿಗಳ ವಿರುದ್ಧ ಪ್ರಕರಣ ದಾಖಲು ಮಾಡಿಕೊಂಡಿದ್ದಾರೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಿ ಎಲ್ ನಾಗೇಶ್ ತಿಳಿಸಿದರು.
ಪಟ್ಟಣ ಪೊಲೀಸ್ ಠಾಣೆಯಲ್ಲಿ ಏರ್ಪಡಿಸಲಾಗಿದ್ದ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, ಕಳೆದ ಎರಡು ತಿಂಗಳಿಂದ ಬಾಗೇಪಲ್ಲಿ ಪಟ್ಟಣದಲ್ಲಿ ದ್ವಿಚಕ್ರ ವಾಹನಗಳ ಕಳವು ಪ್ರಕರಣ ಹೆಚ್ಚಾಗಿದ್ದು, ಖದೀಮರ ಪತ್ತೆಗೆ ಪೊಲೀಸ್ ಇನ್ಸ್ಪೆಕ್ಟರ್ ನೇತೃತ್ವದಲ್ಲಿ ವಿಶೇಷ ತಂಡ ಸಜ್ಜುಗೊಳಿಸಲಾಗಿತ್ತು. ಕಾರ್ಯಪ್ರವೃತ್ತವಾದ ವಿಶೇಷ ತಂಡ, ಕಳ್ಳರ ಬಗ್ಗೆ ಮಾಹಿತಿ ಕಲೆ ಹಾಕಿ 18 ರಾಯಲ್ ಎನ್‍ಫೀಲ್ಡ್, 5 ಡಿಯೋ, 3 ಬಜಾಜ್ ಪಲ್ಸರ್, 1 ಕೆ.ಟಿ.ಎಂ. ಡ್ಯೂಕ್, 1 ಫ್ಯಾಷನ್ ಪ್ರೋ, 1 ಯಮಹಾ ಆರ್, 1 ಆಕ್ಸೀಸ್ ಸೇರಿ 30 ಬೈಕ್ ವಶಪಡಿಸಿಕೊಂಡಿದ್ದು, ಅದರ ಮೌಲ್ಯ ಸುಮಾರು 60 ಲಕ್ಷ ರೂ. ಎಂದು ಅಂದಾಜಿಸಲಾಗಿದೆ ಎಂದರು.
ಇದನ್ನೂ ಓದಿ: ಬೆಂಗಳೂರು: ವಿಲಾಸಿ ಜೀವನಕ್ಕಾಗಿ ಬೈಕ್ ಕದಿಯುತ್ತಿದ್ದ ಆರೋಪಿ ಅಂದರ್
ಪ್ರಕರಣಕ್ಕೆ ಸಂಬಂಧಿಸಿದಂತೆ ಕದಿರಿ ತಾಲೂಕಿನ ಕಾಳಸಮುದ್ರಂ ಗ್ರಾಮದ ಷೇಕ್ ಮೌಲಾ ಆಲಿ, ಪಠಾಣ್ ಇಮ್ರಾನ್ ಖಾನ್, ಖಾದರ್ ಭಾಷಾ, ಪಿ. ಷಾಹೀದ್, ಕದಿರಿ ಪಟ್ಟಣದ ಎಸ್.ಮಹಮ್ಮದ್ ಅಲಿ ಹಾಗೂ ನಡಿಂಪಲ್ಲಿ ಗ್ರಾಮದ ಡಿ.ವೆಂಗಮುನಿ ವಿರುದ್ಧ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ: ಆನೇಕಲ್: 45 ದ್ವಿಚಕ್ರ ವಾಹನ ಜಪ್ತಿ, 14 ಆರೋಪಿಗಳು ಸೆರೆ