ಚಿಕ್ಕಬಳ್ಳಾಪುರ: ಗ್ರಾಮಗಳಲ್ಲಿ ಮಳೆ ಬೆಳೆ ಇಲ್ಲದೇ, ಸರ್ಕಾರ ಅಧಿಕಾರಿಗಳ ನೆರವಿಲ್ಲದೇ, ನಗರಗಳತ್ತ ಪ್ರವೇಶ ಪಡೆಯುತ್ತಿರುವ ಇತ್ತೀಚಿನ ದಿನಗಳಲ್ಲಿ ಚಿಕ್ಕಬಳ್ಳಾಪುರ ಜಿಲ್ಲೆಯ ಶಿಡ್ಲಘಟ್ಟ ತಾಲೂಕಿನ ಇ ತಿಮ್ಮಸಂದ್ರ ಇಡೀ ಜಿಲ್ಲೆಗೆ ಮಾದರಿ ಗ್ರಾಮಪಂಚಾಯಿತಿಯಾಗಿ ಹೆಸರುವಾಸಿಯಾಗುತ್ತಿದೆ.
ಇ ತಿಮ್ಮಸಂದ್ರ ಪಂಚಾಯಿತಿಗೆ 13 ಗ್ರಾಮಗಳು ಸೇರಿಕೊಂಡಿದ್ದು, ಸಾಕಷ್ಟು ಅಭಿವೃದ್ದಿ ಕಡೆಗೆ ದಾಪುಗಾಲು ಇಡುತ್ತಿದೆ. ಸದ್ಯ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಬರುವ 4 ರಿಂದ 5 ಗ್ರಾಮಗಳು ಕುಡಿವ ನೀರಿಗೆ ಸಾಕಷ್ಟು ತೊಂದರೆ ಅನುಭವಿಸುತ್ತಿವೆ. ಇದರ ಸಲುವಾಗಿ ಖಾಸಗಿ ಕೊಳವೆ ಬಾವಿಗಳು,ಟ್ಯಾಂಕರ್ಗಳ ಮೂಲಕ ನೀರಿನ ದಾಹವನ್ನು ತೀರಿಸುತ್ತಿವೆ. ಅಷ್ಟೇ ಅಲ್ಲದೆ ಈಗಾಗಲೇ 6 ರಿಂದ 7 ಬೋರ್ವೆಲ್ಗಳನ್ನ ಕೊರೆಯಿಸಿ ನೀರಿನ ಕೊರತೆ ನೀಗಿಸುವುಲ್ಲಿ ಯಶಸ್ವಿಯಾಗುತ್ತಿದ್ದಾರೆ.
ಶತಮಾನಗಳ ಹಳೆಯ ಬಾವಿಗೆ ಹೊಸ ಹುರುಪು..
ಅಷ್ಟೇ ಅಲ್ಲದೇ, ಇ ತಿಮ್ಮಸಂದ್ರ ಗ್ರಾಮದಲ್ಲಿ ಶತಮಾನಗಳ ಬಾವಿಯೊಂದು ಇದ್ದು ಗ್ರಾಮಸ್ಥರ ಅನುಕೂಲಕ್ಕೆ ತಕ್ಕಂತೆ ಸೂಕ್ತ ಭದ್ರತೆಯೊಂದಿಗೆ ಅಭಿವೃದ್ದಿ ಪಡಿಸಿದ್ದಾರೆ. ಇನ್ನೂ ಈ ಬಾವಿಯಲ್ಲಿ ಎಷ್ಟೇ ನೀರು ಬಳಸಿಕೊಂಡರು ಒಂದು ದಿನದ ನಂತರ ಮತ್ತೇ ಅಷ್ಟೇ ನೀರು ಕೂಡಿರುತ್ತದೆ. ಸದ್ಯ ಈ ಬಾವಿಗೂ ಹೊಸ ಹೊರಪು ನೀಡಿದ್ದು ಗ್ರಾಮಸ್ಥರಿಗೆ ಅನುಕೂಲವಾಗುವಂತೆ ಪಂಪ್ಸೆಂಟ್ ಅಳವಡಿಸಿ, ದನಕರುಗಳಿಗೆ ಉಪಯುಕ್ತವಾಗುವಂತೆ ಏರ್ಪಡಿಸಿದ್ದಾರೆ. ಗ್ರಾಮಪಂಚಾಯತಿ ವ್ಯಾಪ್ತಿಯಲ್ಲಿ ಸರ್ವಾಜನಿಕ ಆಸ್ಪತ್ರೆ ಸೇರಿದಂತೆ ಶಾಲಾ ಮಕ್ಕಳಿಗೆ ಹಾಸ್ಟೆಲ್ ವ್ಯವಸ್ಥೆಯನ್ನು ಕಲ್ಪಿಸಿದ್ದು, ಸಾರ್ವಜನಿಕರ ಹಾಗೂ ಮಕ್ಕಳ ಪಾಲಿಗೆ ಸೂರ್ಯಕಿರಣವಾಗಿದೆ.
ಸದ್ಯ ನರೇಗಾ ಕಾಮಗಾರಿಗಳಡಿ ಆರೋಪಗಳೇ ಹೆಚ್ಚು ಕೇಳಿಸುತ್ತಿದ್ದು,ಈ ಗ್ರಾಮದಲ್ಲಿ ಮಾತ್ರ ನರೇಗಾ ಕಾಮಗಾರಿಗಳೇ ಆಶಾಕಿರಣಗಳಾಗಿವೆ. ಗ್ರಾಮಗಳ ರಸ್ತೆ ಸೇರಿದಂತೆ ಶಾಲಾ ಕಟ್ಟಡದ ಕಾಂಪೌಂಡ್ ಹಾಗೂ ಜಿಲ್ಲೆಯ ಯಾವುದೇ ಸರ್ಕಾರಿ ಶಾಲೆಗಳಲ್ಲಿ ಇಲ್ಲದ ಬ್ಯಾಸ್ಕೆಟ್ ಬಾಲ್ ಗ್ರೌಂಡ್ ನಿರ್ಮಾಣವನ್ನು ಮಾಡಿ ಕ್ರೀಡೆಗೂ ಸಹ ಪ್ರೋತ್ಸಾಹವನ್ನು ನೀಡುತ್ತಿದೆ. ಗ್ರಾಮ ಪಂಚಾಯತಿ ಅಧಿಕಾರಿಗಳ ಶಿಸ್ತಿನ ಅಭಿವೃದ್ದಿಗೆ ಹಾಗೂ ಜಿಲ್ಲಾಧಿಕಾರಿಗಳ ಸಹಕಾರಕ್ಕೆ ಸಾರ್ವಜನಿಕರು ಶಹಬಾಸ್ ಗಿರಿ ನೀಡುತ್ತಿದ್ದಾರೆ.