ETV Bharat / state

ಶ್ರೀ ರಾಮಮಂದಿರ ನಿರ್ಮಾಣ ದೇಶ ಒಗ್ಗೂಡಿಸುವ ಕಾರ್ಯ: ಸಚಿವ ಡಾ. ಕೆ ಸುಧಾಕರ್

ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಗಳಲ್ಲಿ ಆರ್​​ಎಸ್​​​ಎಸ್​​ ಬಲವಾಗಿರುವಂತೆ ಚಿಕ್ಕಬಳ್ಳಾಪುರ, ಕೋಲಾರ ಭಾಗದಲ್ಲೂ ಸಂಘಟನೆ ಬಲವಾಗಬೇಕಿದೆ. ಕೋವಿಡ್ ಮಹಾಮಾರಿ ಬಂದಾಗ ಆರ್​​ಎಸ್​​​ಎಸ್ ಸ್ವಯಂ ಸೇವಕರು ಮನೆಮನೆಗೆ ತೆರಳಿ ನೆರವು ನೀಡಿದ್ದರು. ಆರ್​​ಎಸ್​​​ಎಸ್ ಶಿಸ್ತು, ಸಂಯಮ ದೇಶ ಪ್ರೇಮವನ್ನು ಎಲ್ಲರೂ ರೂಢಿಸಿಕೊಳ್ಳಬೇಕು ಸಚಿವ ಡಾ.ಕೆ ಸುಧಾಕರ್ ಹೇಳಿದರು.

The construction of Sri Ram Mandir is a work of uniting the country Minister K Sudhakar
ಸಚಿವ ಡಾ. ಕೆ ಸುಧಾಕರ್ ಹೇಳಿಕೆ
author img

By

Published : Jan 16, 2021, 9:40 AM IST

Updated : Jan 16, 2021, 9:57 AM IST

ಚಿಂತಾಮಣಿ: ಅಯೋಧ್ಯೆ ಶ್ರೀರಾಮ ಮಂದಿರ ನಿರ್ಮಾಣ ಕಾರ್ಯ ಇಡೀ ದೇಶದ ಜನರನ್ನು ಒಗ್ಗೂಡಿಸುವ ಕೆಲಸ. ಇದರಿಂದ ದೇಶದಲ್ಲಿ ರಾಮರಾಜ್ಯ ನಿರ್ಮಾಣವಾಗಲಿದೆ ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ. ಕೆ.ಸುಧಾಕರ್ ಹೇಳಿದ್ದಾರೆ.

ಚಿಂತಾಮಣಿಯಲ್ಲಿ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಕಚೇರಿ ಉದ್ಘಾಟನೆ ಹಾಗೂ ಶ್ರೀರಾಮಮಂದಿರ ನಿರ್ಮಾಣ ಪ್ರಯುಕ್ತ ದೇಣಿಗೆ ಸಂಗ್ರಹ ಕಾರ್ಯಕ್ರಮದಲ್ಲಿ ಸಚಿವರು ಪಾಲ್ಗೊಂಡು ಮಾತನಾಡಿದರು.

ಸಚಿವ ಡಾ. ಕೆ ಸುಧಾಕರ್ ಹೇಳಿಕೆ

ಶ್ರೀರಾಮಚಂದ್ರನ ಅವತಾರ ದಶಾವತಾರಗಳಲ್ಲಿ ವಿಶೇಷವಾಗಿದೆ. ಈ ಭೂಮಿ ಇರುವವರೆಗೂ ಶ್ರೀರಾಮನ ಕಥೆ ಆದರ್ಶ ಮತ್ತು ಪ್ರಸ್ತುತವಾಗಿರುತ್ತದೆ. ಶ್ರೀರಾಮ ಸೀತಾಮಾತೆಯನ್ನು ಕರೆತರಬೇಕಾದರೆ ವಾನರು ಸಹಾಯ ಮಾಡಿದ್ದರು. ಶಿವಾಜಿ ಮಹಾರಾಜರು ಬ್ರಿಟಿಷರ ವಿರುದ್ಧ ಹೋರಾಟ ಮಾಡಲು ಜನರು ಕೈ ಜೋಡಿಸಿದರು. ಅದೇ ರೀತಿ ಶ್ರೀರಾಮನ ದೇಗುಲ ನಿರ್ಮಿಸಲು ದೇಶದ ಮೂಲೆ ಮೂಲೆಗಳಲ್ಲಿರುವ ಹಿಂದೂಗಳು ಜೊತೆಯಾಗಿದ್ದಾರೆ. ಈ ಕಾರ್ಯದಲ್ಲಿ ನಾನು ಕೂಡ ಸಕ್ರಿಯವಾಗಿ ತೊಡಗಿಸಿಕೊಳ್ಳುತ್ತೇನೆ ಎಂದರು.‌

ಶ್ರೀರಾಮ ಆದರ್ಶದ ಪ್ರತಿರೂಪ. ಪುತ್ರ, ಸಹೋದರ, ಪತಿಯಾಗಿ ಹೇಗೆ ಇರಬೇಕು ಎಂಬುದನ್ನು ಶ್ರೀರಾಮನನ್ನು ನೋಡಿ ಕಲಿಯಬಹುದು. ಇಂತಹ ಮಹಾನ್ ಪುರುಷನ ದೇಗುಲ ನಿರ್ಮಾಣಕ್ಕೆ ಅನೇಕ ಸಂತರು, ಸ್ವಯಂ ಸೇವಕರು ಹೋರಾಟ ಮಾಡಿದ್ದಾರೆ. ಕೋಲಾರ, ಚಿಕ್ಕಬಳ್ಳಾಪುರ ಜಿಲ್ಲೆಗಳಲ್ಲಿ ದೇಣಿಗೆ ಸಂಗ್ರಹ ನಡೆಯುತ್ತಿದ್ದು, ಆಂದೋಲನದಂತೆ ನಡೆಯಬೇಕು. ಕೈಲಾಸನಾಥ ನೋಡುವ ಆಸೆಯಂತೆ ಮುಂದಿನ ದಿನಗಳಲ್ಲಿ ಅಯೋಧ್ಯೆಯ ಬಗ್ಗೆ ಆ ರೀತಿಯ ಭಾವನೆ ಬೆಳೆಯಲಿದೆ ಎಂದರು.

ಓದಿ : ಕೇಂದ್ರ ಗೃಹ ಸಚಿವ ಅಮಿತ್​ ಶಾ ಸ್ವಾಗತಕ್ಕೆ ಸಕಲ ಸಿದ್ಧತೆ... ‘ಚಾಣಕ್ಯ’ನಿಂದ ಶಮನವಾಗುತ್ತಾ ಶಾಸಕರ ಅಸಮಾಧಾನ!?

ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಗಳಲ್ಲಿ ಆರ್​​ಎಸ್​​​ಎಸ್​​ ಬಲವಾಗಿರುವಂತೆ ಚಿಕ್ಕಬಳ್ಳಾಪುರ, ಕೋಲಾರ ಭಾಗದಲ್ಲೂ ಸಂಘಟನೆ ಬಲವಾಗಬೇಕಿದೆ. ಕೋವಿಡ್ ಮಹಾಮಾರಿ ಬಂದಾಗ ಆರ್​​ಎಸ್​​​ಎಸ್ ಸ್ವಯಂ ಸೇವಕರು ಮನೆಮನೆಗೆ ತೆರಳಿ ನೆರವು ನೀಡಿದ್ದರು. ಆರ್​​ಎಸ್​​​ಎಸ್ ಶಿಸ್ತು, ಸಂಯಮ ದೇಶ ಪ್ರೇಮವನ್ನು ಎಲ್ಲರೂ ರೂಢಿಸಿಕೊಳ್ಳಬೇಕು ಎಂದು ಸಚಿವರು ಕರೆ ನೀಡಿದರು.

Last Updated : Jan 16, 2021, 9:57 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.