ಶಿಡ್ಲಘಟ್ಟ(ಚಿಕ್ಕಬಳ್ಳಾಪುರ): ಕಳೆದ ಮೂರು ದಿನಗಳಿಂದ ಸುರಿಯುತ್ತಿರುವ ಮಳೆಗೆ ತಾಲೂಕಿನ ಜನನ- ಮರಣ ಕಛೇರಿ ಹಾಗೂ ಆಹಾರ ಇಲಾಖೆಯ ಕೊಠಡಿಗಳಿಗೆ ನೀರು ನುಗ್ಗಿದ ಪರಿಣಾಮ ದಾಖಲೆಗಳು ನೀರಿಗಾಹುತಿಯಾದ ಘಟನೆ ನಡೆದಿದೆ.
ಮಂಗಳವಾರ ರಾತ್ರಿ ಸುರಿದ ಮಳೆಗೆ ಶಿಡ್ಲಘಟ್ಟದ ತಾಲ್ಲೂಕು ಕಚೇರಿಯ ಆಹಾರ ಇಲಾಖೆ ಕೊಠಡಿ ಹಾಗೂ ಜನನ ಮರಣದ ಕೊಠಡಿಯೊಳಗೆ ನೀರು ನುಗ್ಗಿ ಕಚೇರಿಯೊಳಗಿದ್ದ ಕಂಪ್ಯೂಟರ್‌ಗಳ ಸೇರಿದಂತೆ ಎಲ್ಲಾ ದಾಖಲೆಗಳು ನೀರಿಗಾಹುತಿಯಾಗಿವೆ. ಇನ್ನೂ ಕಚೇರಿ ಸ್ವಚ್ಛ ಮಾಡುವಷ್ಟರಲ್ಲಿ ಸಿಬ್ಬಂದಿ ಹರಸಾಹಸ ಪಡುವಂತಾಗಿತ್ತು.
ಆಹಾರ ಇಲಾಖೆಯ ಕೊಠಡಿಯಲ್ಲಿನ ಕಂಪ್ಯೂಟರ್ ಗಳು ಪೂರ್ತಿ ನೆನೆದಿದ್ದು, ಶಾರ್ಟ್ ಸರ್ಕ್ಯೂಟ್ ಭಯದಿಂದ ಆನ್ ಮಾಡಲೂ ಹಿಂದೆ ಮುಂದೆ ನೋಡುವಂತಾಗಿದೆ. ಆದರೆ, ಮೇಲಾಧಿಕಾರಿಗಳು ಮಾತ್ರ ತಮಗೇನು ಸಂಭಂದವಿಲ್ಲವೆಂಬಂತೆ ನಿರ್ಲಕ್ಷ್ಯ ಧೋರಣೆ ತಳೆದಿದ್ದಾರೆ ಎಂದು ಸ್ಥಳೀಯ ಅಧಿಕಾರಿಗಳು ಬೇಸರ ವ್ಯಕ್ತಪಡಿಸಿದ್ದಾರೆ.