ಚಿಕ್ಕಬಳ್ಳಾಪುರ : ಕಂದಾಯ ಭವನದ ಮೇಲೆ ತುಂಬಿದ ಕಸವನ್ನು ತಗೆಯದ ಕಾರಣ ಗ್ರಾಮ ಸಹಾಯಕನಿಗೆ ಆರ್ಒ ನರಸಿಂಹಮೂರ್ತಿ ಇಟ್ಟಿಗೆಯಿಂದ ಹಲ್ಲೆಗೆ ಯತ್ನಸಿದ ಘಟನೆ ಜಿಲ್ಲೆಯ ಶಿಡ್ಲಘಟ್ಟ ನಗರದಲ್ಲಿ ನಡೆದಿದೆ.
ಶಿಡ್ಲಘಟ್ಟ ತಾಲೂಕಿನ ಕಂದಾಯ ಭವನ ಆವರಣ ಸೇರಿದಂತೆ ಕಟ್ಟಡದ ಮೇಲೆ ಸಾಕಷ್ಟು ಕಸ ಸೇರಿ ಅನಗತ್ಯ ಗಿಡಗಳು ಬೆಳೆದು ನಿಂತಿದ್ದು, ಸ್ವಚ್ಚತೆ ಮಾಡದ ಕಾರಣ ಆರ್ಒ ನರಸಿಂಹಮೂರ್ತಿ ಅವರು, ಗ್ರಾಮ ಸಹಾಯಕರೊಂದಿಗೆ ಸ್ವಚ್ಛತೆ ಮಾಡಿಸುತ್ತಿದ್ದ. ಈ ವೇಳೆ ಅವಾಚ್ಯ ಶಬ್ದಗಳಿಂದ ನಿಂದಿಸಿದಲ್ಲದೇ ಇಟ್ಟಿಗೆಯಿಂದ ಹಲ್ಲೆ ಮಾಡಲು ಯತ್ನಿಸಿ ಅಧಿಕಾರ ದರ್ಪ ತೋರಲು ಮುಂದಾಗಿದ್ದಾನೆ. ಇನ್ನೂ ಈ ದೃಶ್ಯವನ್ನು ಸಾರ್ವಜನಿಕರು ಸೆರೆಹಿಡಿದ್ದಾರೆ.
ಇನ್ನು ಗ್ರಾಮಲೆಕ್ಕಾಧಿಕಾರಿಗಳು, ನೌಕರರನ್ನು ವೈಯಕ್ತಿಕವಾಗಿ ನಿಂದಿಸುವುದು, ಹಗುರವಾಗಿ ಮಾತಾನಾಡುವ ಆರೋಪಗಳು ಕೇಳಿಬರುತ್ತಿವೆ.