ಚಿಕ್ಕಬಳ್ಳಾಪುರ : ಯಲಹಂಕ ಮೇಲ್ಸೇತುವೆಗೆ ವೀರ ಸಾವರ್ಕರ್ ಹೆಸರಿಟ್ಟರೆ ತಪ್ಪೇನು ಎಂದು ಬಿಜೆಪಿ ಸಂಸದ ಬಿ ಎನ್ ಬಚ್ಚೇಗೌಡ ಪ್ರಶ್ನಿಸಿದ್ಧಾರೆ.
ಸಾವರ್ಕರ್ ಹೆಸರಿಡಬೇಕು ಎಂದು ನಾನು ಒತ್ತಾಯಿಸುತ್ತೇನೆ. ಕೆಲವರು ವಿನಾಕಾರಣ ವಿರೋಧ ಮಾಡುತ್ತಿರುವುದು ಅನಾವಶ್ಯಕ ವಿಚಾರ. ಇಡೀ ದೇಶದಲ್ಲಿ ಯಾರ ಹೆಸರನ್ನು ಎಲ್ಲಿ ಬೇಕಾದರೂ ಇಡಬಹುದು. ಆಯಾ ರಾಜ್ಯದವರ ಹೆಸರನ್ನು ಆಯಾ ರಾಜ್ಯದಲ್ಲಿಯೇ ಇಡಬೇಕೆಂಬ ನಿಯಮ ಏನಾದ್ರೂ ಇದೆಯಾ ಎಂದರು.
ಬಿಜೆಪಿಯೊಳಗಿನ ಭಿನ್ನಮತದ ಬಗ್ಗೆ ಪ್ರತಿಕ್ರಿಯಿಸಿ, ಪಕ್ಷದಲ್ಲಿ ಯಾವುದೇ ಬಣಗಳಿಲ್ಲ. ಸಿಎಂ ಯಡಿಯೂರಪ್ಪ ಮೂರೂವರೆ ವರ್ಷ ಮುಖ್ಯಮಂತ್ರಿಯಾಗಿ ಮುಂದುವರೆಯಲಿದ್ದಾರೆ ಎಂದರು.