ETV Bharat / state

ಒಂದೇ ರಾತ್ರಿ 50ಕ್ಕೂ ಹೆಚ್ಚು ಕೊಳವೆ ಬಾವಿಗಳ ಕೇಬಲ್ ಪ್ಯಾನಲ್ ಬೋರ್ಡ್ ಕಳವು - ಒಂದೇ ರಾತ್ರಿ ಐವತ್ತಕ್ಕೂ ಹೆಚ್ಚು ಕೊಳವೇ ಬಾವಿಗಳ ಕೇಬಲ್ ಪ್ಯಾನಲ್ ಬೋರ್ಡ್ ಕಳವು

ಪೊಲೀಸ್ ಠಾಣೆ ನಂದಿ ಗ್ರಾಮದಲ್ಲಿದ್ದಾಗ ಕಳ್ಳತನ ನಡೆಯುತ್ತಿರಲಿಲ್ಲ, ಚದಲಪುರ ಗೇಟ್​ಗೆ ಠಾಣೆ ವರ್ಗಾವಣೆ ಆದಾಗಿನಿಂದಲೂ ಕಳ್ಳತನಗಳು ಹೆಚ್ಚಾಗಿವೆ. ಮುದ್ದೇನಹಳ್ಳಿ ಗ್ರಾಮ ಪಂಚಾಯತ್‌ ವ್ಯಾಪ್ತಿಯ ಬಂಡಹಳ್ಳಿ, ಕಳವಾರ, ಬಚ್ಚಹಳ್ಳಿ, ಮುದ್ದೇ‌ನಹಳ್ಳಿ ಸೇರಿದಂತೆ ಹಲವು ಹಳ್ಳಿಗಳಲ್ಲಿ ಕಳ್ಳತನವಾಗಿವೆ..

muni narayanappa
ಮುನಿ ನಾರಾಯಣಪ್ಪ, ಅಧ್ಯಕ್ಷರು ಮುದ್ದೇನಹಳ್ಳಿ ಪಂಚಾಯತಿ
author img

By

Published : Feb 20, 2022, 5:27 PM IST

Updated : Feb 20, 2022, 6:36 PM IST

ಚಿಕ್ಕಬಳ್ಳಾಪುರ : ರೈತರ ಹಾಗೂ ಊರಿಗೆ ನೀರು ಸರಬರಾಜು ಮಾಡುವ ಪಂಚಾಯತ್‌ ಕೊಳವೆ ಬಾವಿ ಸೇರಿದಂತೆ, ಐವತ್ತಕ್ಕೂ ಹೆಚ್ಚು ಕೊಳವೆ ಬಾವಿಗಳ ಬಳಿ ಕೇಬಲ್ ಪ್ಯಾನಲ್ ಬೋರ್ಡ್ ಸೇರಿ ಹಲವು ವಸ್ತುಗಳನ್ನು ಕಳ್ಳರು ಒಂದೇ ರಾತ್ರಿಯಲ್ಲಿ ಕದ್ದಿರುವ ಘಟನೆ ಮುದ್ದೇನಹಳ್ಳಿಯಲ್ಲಿ ನಡೆದಿದೆ.

ಒಂದೇ ರಾತ್ರಿ ಐವತ್ತಕ್ಕೂ ಹೆಚ್ಚು ಕೊಳವೇ ಬಾವಿಗಳ ಕೇಬಲ್, ಪ್ಯಾನಲ್ ಬೋರ್ಡ್ ಕಳವು

ತೋಟಗಳ ಬಳಿ ಹೀಗೆ ಪದೇಪದೆ ಕಳ್ಳತನವಾಗುತ್ತಿವೆ. ನಿನ್ನೆ ಒಂದೇ ರಾತ್ರಿಯಲ್ಲಿ ಐವತ್ತು ರೈತರ ತೋಟಗಳ ಬಳಿ ಕಳ್ಳತನವಾಗಿದೆ. ಇದಕ್ಕೆ ಪೊಲೀಸರ ನಿರ್ಲಕ್ಷ್ಯವೇ ಕಾರಣ ಎಂದು ರೈತರು ಆರೋಪ ಮಾಡುತ್ತಿದ್ದಾರೆ.

ಪೊಲೀಸ್ ಠಾಣೆ ನಂದಿ ಗ್ರಾಮದಲ್ಲಿದ್ದಾಗ ಕಳ್ಳತನ ನಡೆಯುತ್ತಿರಲಿಲ್ಲ, ಚದಲಪುರ ಗೇಟ್​ಗೆ ಠಾಣೆ ವರ್ಗಾವಣೆ ಆದಾಗಿನಿಂದಲೂ ಕಳ್ಳತನಗಳು ಹೆಚ್ಚಾಗಿವೆ. ಮುದ್ದೇನಹಳ್ಳಿ ಗ್ರಾಮ ಪಂಚಾಯತ್‌ ವ್ಯಾಪ್ತಿಯ ಬಂಡಹಳ್ಳಿ, ಕಳವಾರ, ಬಚ್ಚಹಳ್ಳಿ, ಮುದ್ದೇ‌ನಹಳ್ಳಿ ಸೇರಿದಂತೆ ಹಲವು ಹಳ್ಳಿಗಳಲ್ಲಿ ಕಳ್ಳತನವಾಗಿವೆ.

ಕೊಳವೇ ಬಾವಿಗಳ ಬಳಿ ಕೇಬಲ್ ಪ್ಯಾನಲ್ ಬೋರ್ಡ್​ಗಳು ಕಳ್ಳತನವಾಗಿರುವುದರಿಂದ ರೈತರಿಗೆ ಹೊಲಗಳಿಗೆ ನೀರುಣಿಸಲು ಸಮಸ್ಯೆಯಾಗುತ್ತಿದೆ. ಹೊಸ ಕೇಬಲ್​ಗೆ ಬಂಡವಾಳ ಹಾಕಲು ಹಣ ಇಲ್ಲದೇ ರೈತರು ಕಂಗಾಲಾಗಿದ್ದಾರೆ.

ಚಿಕ್ಕಬಳ್ಳಾಪುರ ತಾಲೂಕಿನಲ್ಲಿ ಒಂದೇ ರಾತ್ರಿಯಲ್ಲಿ ಐವತ್ತು ಕಡೆ ಕಳ್ಳತ ಆಗಿರುವುದು, ಹಲವು ಅನುಮಾನಗಳಿಗೆ ಎಡೆ ಮಾಡಿಕೊಟ್ಟಿದೆ, ಕಳ್ಳತನಕ್ಕೆ ಸ್ಥಳೀಯರ ಬೆಂಬಲ ಇದೆ ಎಂದು ಗುಮಾನಿಗಳು ಹರಿದಾಡುತ್ತಿವೆ. ಕಳ್ಳರ ಪತ್ತೆಗಾಗಿ ಪೊಲೀಸರು ಬಲೆ ಬೀಸಿದ್ದಾರೆ.

ಇದನ್ನೂ ಓದಿ: ವರದಕ್ಷಿಣೆಗಾಗಿ ಹೆಂಡತಿಯನ್ನು ಸುಟ್ಟು ಕೊಂದ ಪತಿ

Last Updated : Feb 20, 2022, 6:36 PM IST

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.